Monday, January 13, 2020

ಮರಡು ನಕ್ಷೆಯಿಂದ ಅಳಿಸಿಹೋದ ೪ ಕಟ್ಟಡಗಳು, ಅಕ್ರಮಗಳ ಯುಗಾಂತ್ಯ

ಮರಡು ನಕ್ಷೆಯಿಂದ ಅಳಿಸಿಹೋದ ಕಟ್ಟಡಗಳು, ಅಕ್ರಮಗಳ ಯುಗಾಂತ್ಯ
ಕೋಚಿ (ಕೇರಳ): ಕೋಚಿಯ ೧೭ ಅಂತಸ್ತಿನ ಗೋಲ್ಡನ್ ಕಯಲೋರಂ ಕಟ್ಟಡವು 2020 ಜನವರಿ 12ರ ಭಾನುವಾರ ಕುಸಿದು ಬೀಳುವುದರೊಂದಿಗೆ ನಾಲ್ಕು ಐಷಾರಾಮಿ ಜಲಾಭಿಮುಖಿ ಗಗನಚುಂಬಿ ಕಟ್ಟಡಗಳು ಮರಡು ನಕ್ಷೆಯಿಂದ ಅಳಿಸಿಹಾಕಲ್ಪಟ್ಟವು. ಇದರೊಂದಿಗೆ ಅಕ್ರಮ ಕಟ್ಟಡಗಳ ೧೩ ವರ್ಷಗಳ ಯುಗ ಅಂತ್ಯಗೊಂಡಿತು.
ಕರಾವಳಿ ನಿಯಂತ್ರಣ ವಲಯದ ಮಾನದಂಡಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ನಾಲ್ಕು ಕಟ್ಟಡಗಳಲ್ಲಿ ಕೊನೆಯದಾದ ೫೫ ಮೀಟರ್ ಎತ್ತರದಗೋಲ್ಡನ್ ಕಯಲೋರಂಕಟ್ಟಡವನ್ನು ಮಧ್ಯಾಹ್ನ .೩೦ ಗಂಟೆಯ ವೇಳೆಗೆ ನಿಯಂತ್ರಿತ ಸ್ಫೋಟಕ ಮೂಲಕ  ನೆಲಸಮಗೊಳಿಸಲಾಯಿತು.

ಅದಕ್ಕೂ
ಮುನ್ನ ಭಾನುವಾರ ಬೆಳಗ್ಗೆ ೫೫ ಮೀಟರ್ ಎತ್ತರದ ಜೈನ್ ಕೋರಲ್ ಕೋವ್ ಕಟ್ಟಡವನ್ನು ನೆಲಸಮ ಮಾಡಲಾಯಿತು.

ಹೋಲಿ ಫೇಯ್ತ್ ಮತ್ತು ಆಲ್ಫಾ ಸೆರೇನ್ ಕಟ್ಟಡ ಸಮುಚ್ಚಯಗಳನ್ನು ಶನಿವಾರ ನಿಯಂತ್ರಿತ ಸ್ಫೋಟಕ ಬಳಸಿ ಧ್ವಂಸಗೊಳಿಸಲಾಗಿತ್ತು.

ಸುಪ್ರೀಂ ಕೋರ್ಟ್ ನೇಮಿಸಿದ್ದ ಮೂರು ಸದಸ್ಯರ ಸಮಿತಿಯು, ಕಟ್ಟಡಗಳ ನಿರ್ಮಾಣದಲ್ಲಿ ಕರಾವಳಿ ನಿಯಂತ್ರಣ ವಲಯದ ಮಾನದಂಡಗಳನ್ನು ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಿದ ಬಳಿಕ ನಾಲ್ಕೂ ಕಟ್ಟಡ ಸಮುಚ್ಚಯಗಳನ್ನು ನೆಲಸಮಗೊಳಿಸುವಂತೆ ಸುಪ್ರೀಂಕೋರ್ಟ್ ೨೦೧೯ ಸೆಪ್ಟೆಂಬರ್ನಲ್ಲಿ ಆದೇಶ ನೀಡಿತ್ತು.

ನಾಲ್ಕು ಮರಡು ಕಟ್ಟಡಗಳಲ್ಲಿ ಅತ್ಯಂತ ಹಳೆಯದಾದ ಗೋಲ್ಡನ್ ಕಯಲೋರಂ ೪೦ ಅಪಾರ್ಟ್ಮೆಂಟ್ಗಳನ್ನು  ಒಳಗೊಂಡಿತ್ತು, ಅವುಗಳ ಪೈಕಿ ೩೭ ಮನೆಗಳಲ್ಲಿ ಕುಟುಂಬಗಳು ವಾಸವಾಗಿದ್ದವು.

ಮುಂಬೈ ಮೂಲದ ಎಡಿಫೈಸ್ ಎಂಜಿನಿಯರಿಂಗ್ ಸಂಸ್ಥೆಯು ಎಚ್ ಹೋಲಿ ಫೇಯ್ತ್ ಮತ್ತು ಜೈನ್ ಕೋರಲ್ ಕೋವ್ ಕಟ್ಟಡಗಳನ್ನು  ೧೪. ಕೆಜಿ ನಿಯಂತ್ರಿತ ಸ್ಫೋಟಕಗಳನ್ನು ಬಳಸಿ ಸಹ ನೆಲಸಮಗೊಳಿಸಿತು.

ಸ್ಥಳೀಯ
ವರದಿಯ ಪ್ರಕಾರ, ೨೧ ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಕಟ್ಟಡವನ್ನು ನೆಲಸಮ ಮಾಡಲಾಯಿತು.

ಕಟ್ಟಡ
ನೆಲಸಮ ವೇಳೆಯಲ್ಲಿ,  ೨೦೦ ಮೀಟರ್ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಎಲ್ಲಾ ನಿವಾಸಿಗಳನ್ನು ಪೊಲೀಸರು ಸ್ಥಳಾಂತರಿಸಿದರೆ, ಶಾಲೆಗಳಿಗೆ ರಜೆ ಸಾರಲಾಗಿತ್ತು.

ಸದರಿ
ಪ್ರದೇಶದಲ್ಲಿ ಸೆಕ್ಷನ್ ೧೪೪ ಅಡಿಯಲಿ ನಿರ್ಬಂಧಕ ಆಜ್ಞೆಯನ್ನು ಜಾರಿಗೊಳಿಸಲಾಗಿದೆ. ಕಟ್ಟಡ ಉರುಳಿಸುವಿಕೆಯಿಂದ ಉಂಟಾಗಿರುವ ದೂಳು ಮತ್ತು ಭಗ್ನಾವಶೇಷಗಳು ನಿವಾರಣೆಯಾದ ಬಳಿಕ ಮುಚ್ಚಲಾಗಿರುವ ಶಾಲೆ, ಅಂಗನವಾಡಿಗಳನ್ನು ತೆರೆಯಲಾಗುವುದು ಎಂದು ವರದಿ ತಿಳಿಸಿದೆ.
ಕರಾವಳಿ
ನಿಯಂತ್ರಣ ವಲಯದ ಮಾನದಂಡಗಳು, ಮಹಡಿ ಪ್ರದೇಶ ಪಡಿತರ ಮತ್ತು ಇತರ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮರಡು ಪಂಚಾಯತ್ ಎಚ್ ಹೋಲಿ ಫೇಯ್ತ್, ಆಲ್ಫಾ ಸೆರೇನ್, ಗೋಲ್ಡನ್ ಕಯಲೋರಂ ಮತ್ತು ಜೈನ್ ಕೋರಲ್ ಕೋವ್ ಕಟ್ಟಡಗಳು ಸೇರಿದಂತೆ ಅವುಗಳನ್ನು ನಿರ್ಮಿಸುತ್ತಿದ್ದ ಐದು ಕಟ್ಟಡ ನಿರ್ಮಾಣಗಾರರಿಗೆ  ಶೋಕಾಸ್ ಕಾರಣ ನೋಟಿಸ್ ನೀಡುವದರೊಂದಿಗೆ ೧೩ ವರ್ಷಗಳ ಹಿಂದೆ ಮರಡು ಅಕ್ರಮ ಕಟ್ಟಡಗಳ ಯುಗದ ಕಥೆಯು ಆರಂಭಗೊಂಡಿತ್ತು.

ನೋಟಿಸಿನ ಬಳಿಕ ಅಪಾರ್ಟ್ಮೆಂಟ್ ಗಳನ್ನು ನಿರ್ಮಿಸದೇ ಇರಲು ಒಬ್ಬ ಕಟ್ಟಡ ನಿರ್ಮಾಣಗಾರರು ನಿರ್ಧರಿಸಿದ್ದರು.

ಕರಾವಳಿ ನಿಯಂತ್ರಣ ವಲಯದ ಮಾನದಂಡಗಳು, ಮಹಡಿ ಪ್ರದೇಶ ಪಡಿತರ ಮತ್ತು ಇತರ ಕಟ್ಟಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮರಡು ಪಂಚಾಯತ್ ಎಚ್ ಹೋಲಿ ಫೇಯ್ತ್, ಆಲ್ಫಾ ಸೆರೇನ್, ಗೋಲ್ಡನ್ ಕಯಲೋರಮ್ ಮತ್ತು ಜೈನ್ ಕೋರಲ್ ಕೋವ್ ಸೇರಿದಂತೆ ಐದು ನಿರ್ಮಾಣಗಾರರಿಗೆ ಶೋಕಾಸ್ ನೋಟಿಸ್ ನೀಡಿದಾಗ ಫ್ಲ್ಯಾಟ್ಗಳು ಉಳಿಯುವುವೇ ಎಂಬ ಅನುಮಾನ ಪ್ರಾರಂಭವಾಗಿತ್ತು.

ಅಂತಿಮವಾಗಿ ಅಪಾರ್ಟ್ಮೆಂಟ್ಗಳ ಕಟ್ಟಡಗಳನ್ನು ನೆಲಸಮಗೊಳಿಸಲು ಸುಪ್ರೀಂಕೋರ್ಟ್ ಆದೇಶ ನೀಡುವುದಕ್ಕ ಮುನ್ನ ಕಟ್ಟಡ ನಿರ್ಮಾಪಕರು ಮತ್ತು ಸ್ಥಳೀಯ ಸಂಸ್ಥಯ ನಡುವಿನ ಜಗಳವು ಒಂದು ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ಮುಂದುವರೆದಿತ್ತು

No comments:

Advertisement