ವಿಜಯ್
ಮಲ್ಯ ಜಫ್ತಿ ಆಸ್ತಿ ಬಳಕೆ: ಬ್ಯಾಂಕುಗಳಿಗೆ ಕೋರ್ಟ್ ಅಸ್ತು
ಮುಂಬೈ: ಮದ್ಯ ದೊರೆ ವಿಜಯ್ ಮಲ್ಯ ಅವರಿಂದ ಜಫ್ತಿ ಮಾಡಲಾಗಿದ್ದ ಆಸ್ತಿಗಳನ್ನು ಬಳಕೆ ಮಾಡಿಕೊಳ್ಳುವಂತೆ ಮಲ್ಯ ಅವರಿಗೆ ಸಾಲ ನೀಡಿದ್ದ ಬ್ಯಾಂಕುಗಳಿಗೆ ಮುಂಬೈಯ ಹಣ ವರ್ಗಾವಣೆ ತಡೆ
ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯ ಅನುಮತಿ
ನೀಡಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೂಲಗಳು 2020 ಜನವರಿ 01ರ ಬುಧವಾರ ತಿಳಿಸಿದವು.
ಇದರೊಂದಿಗೆ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಯಿತು.
ಇದರೊಂದಿಗೆ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಯಿತು.
ಆದಾಗ್ಯೂ
ಸಂಬಂಧಪಟ್ಟ ಕಕ್ಷಿದಾರರಿಗೆ ಮುಂಬೈ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿರುವ ಕೋರ್ಟ್ ತನ್ನ ಆದೇಶದ ಜಾರಿಗೆ ಜನವರಿ ೧೮ರವರೆಗೆ ತಡೆಯಾಜ್ಞೆ ನೀಡಿದೆ.
ಮೂಲಗಳ
ಪ್ರಕಾರ ಜಫ್ತಿ ಮಾಡಲಾದ ಆಸ್ತಿಗಳಲ್ಲಿ ಮುಖ್ಯವಾಗಿ ಷೇರುಗಳಂತಹ ಹಣಕಾಸು ಭದ್ರತೆಗಳು ಸೇರಿವೆ ಎಂದು ಮೂಲಗಳು ಹೇಳಿವೆ.
ಕಳೆದ
ವರ್ಷ ಫೆಬ್ರವರಿಯಲ್ಲಿ ಜಾರಿ ನಿರ್ದೇಶನಾಲಯವು ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ಜಫ್ತು
ಮಾಡಲಾದ ಆಸ್ತಿಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನೇತೃತ್ವದ ಬ್ಯಾಂಕುಗಳ ಒಕ್ಕೂಟವು ಬಳಕೆ ಮಾಡಿಕೊಳ್ಳಲು ತನ್ನ ಆಕ್ಷೇಪ ಇಲ್ಲ ಎಂದು ತಿಳಿಸಿತ್ತು.
ಸಾಲದಾತ ಬ್ಯಾಂಕುಗಳು ೨೦೧೩ರಿಂದ ತಮಗೆ ಪಾವತಿಯಾಗಬೇಕಾಗಿರುವ ೬,೨೦೩.೩೫ ಕೋಟಿ ರೂಪಾಯಿಗಳು ಮತ್ತು ಅದರ ಮೇಲಿನ ಶೇಕಡಾ ೧೧.೫ ಬಡ್ಡಿ ವಸೂಲಿಗಾಗಿ ಜಫ್ತು ಮಾಡಿದ ಆಸ್ತಿ ಬಳಸಿಕೊಳ್ಳಲು ಬಯಸಿದ್ದವು.
ಸಾಲದಾತ ಬ್ಯಾಂಕುಗಳು ೨೦೧೩ರಿಂದ ತಮಗೆ ಪಾವತಿಯಾಗಬೇಕಾಗಿರುವ ೬,೨೦೩.೩೫ ಕೋಟಿ ರೂಪಾಯಿಗಳು ಮತ್ತು ಅದರ ಮೇಲಿನ ಶೇಕಡಾ ೧೧.೫ ಬಡ್ಡಿ ವಸೂಲಿಗಾಗಿ ಜಫ್ತು ಮಾಡಿದ ಆಸ್ತಿ ಬಳಸಿಕೊಳ್ಳಲು ಬಯಸಿದ್ದವು.
೨೦೧೮ರ
ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರವು ತಲೆ ಮರೆಸಿಕೊಂಡ ಆರ್ಥಿಕ ಅಪರಾಧಿಗಳ ಕಾಯ್ದೆ (ಫುಜಿಟಿವ್ ಎಕನಾಮಿಕ್ ಅಫೆಂಡರ್ಸ್ ಆಕ್ಟ್) ರೂಪಿಸಿತ್ತು. ಇದರ ಆಧಾರದ ಮೇಲೆ ಮುಂಬೈನ ವಿಶೇಷ ನ್ಯಾಯಾಲಯವೊಂದು ಕಳೆದ ವರ್ಷ ಜನವರಿ ತಿಂಗಳಲ್ಲಿ ಮಲ್ಯ ಅವರನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸಿತ್ತು.
ಬಳಿಕ
ವಿಜಯ್ ಮಲ್ಯ ಅವರು ಬಾಂಬೆ ಹೈಕೋರ್ಟಿನಲ್ಲಿ ಎರಡು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದರು. ಒಂದು ಅರ್ಜಿಯಲ್ಲಿ ಅವರು ಕಾಯ್ದೆಯ ಕೆಲ ಕಾನೂನುಗಳನ್ನು ಪ್ರಶ್ನಿಸಿದರು. ತನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮವನ್ನೂ ಅವರು ಪ್ರಶ್ನಿಸಿದ್ದರು. ಮತ್ತೊಂದು ಅರ್ಜಿಯಲ್ಲಿ ಅವರು ತನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸಿದ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದರು.
ಮಲ್ಯ
ವಿರುದ್ಧ ೯,೦೦೦ ಕೋಟಿ
ರೂ. ಸಾಲ ಬಾಕಿ ಉಳಿಸಿಕೊಂಡ ಮತ್ತು ಸಾಲವನ್ನು ಬೇರೆ ಕೆಲಸಕ್ಕೆ ಉಪಯೋಗಿಸಿದ ಆರೋಪಗಳಿವೆ. ಜತೆಗೆ ಲೇವಾದೇವಿ ಪ್ರಕರಣವೂ ದಾಖಲಾಗಿದೆ. ೨೦೧೬ರ ಮಾರ್ಚ್ ತಿಂಗಳಲ್ಲಿ ಸಿಬಿಐ ಲುಕ್ ಔಟ್ ಸುತ್ತೋಲೆ ಹೊರಡಿಸಿದ ನಂತರ ಮಲ್ಯ ಇಂಗ್ಲೆಂಡಿಗೆ ಪರಾರಿಯಾಗಿದ್ದರು. ಅವರು ಭಾರತದಿಂದ ತಪ್ಪಿಸಿಕೊಂಡು ಹೋಗಲು ಬಿಜೆಪಿ ಪ್ರಭಾವಿ ನಾಯಕರ ಹಸ್ತಕ್ಷೇಪವೇ ಕಾರಣ ಎಂಬ ಆರೋಪಗಳನ್ನು ವಿರೋಧ ಪಕ್ಷ ಕಾಂಗ್ರೆಸ್ ಮಾಡಿತ್ತು.
ಮಲ್ಯ
ಸಾಲಬಾಕಿ: ಯಾವ ಬ್ಯಾಂಕಿಗೆ ಎಷ್ಟು?
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ - ೨,೪೯೧ ಕೋಟಿ
ರೂ.
* ಪಂಜಾಬ್ ನ್ಯಾಶನಲ್ ಬ್ಯಾಂಕ್ - ೧,೧೯೧ ಕೋಟಿ
ರೂ.
* ಐಡಿಬಿಐ ಬ್ಯಾಂಕ್ - ೧,೩೦೧ ಕೋಟಿ
ರೂ.
* ಬ್ಯಾಂಕ್ ಆಫ್ ಇಂಡಿಯಾ - ೬೫೦ ಕೋಟಿ ರೂ.
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ - ೬೭೨ ಕೋಟಿ ರೂ.
* ಯುಸಿಒ ಬ್ಯಾಂಕ್ - ೫೧೭ ಕೋಟಿ ರೂ.
* ಕಾರ್ಪೊರೇಶನ್ ಬ್ಯಾಂಕ್ - ೪೪೦ ಕೋಟಿ ರೂ.
* ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ - ೧೫೦ ಕೋಟಿ ರೂ.
* ಇಂಡಿಯನ್ ಓವರ್ ಸೀಸ್ ಬ್ಯಾಂಕ್ - ೨೨೮ ಕೋಟಿ ರೂ.
* ಫೆಡರಲ್ ಬ್ಯಾಂಕ್ - ೧೪೮ ಕೋಟಿ ರೂ.
* ಪಂಜಾಬ್ ಮತ್ತು ಸಿಂದ್ ಬ್ಯಾಂಕ್ - ೯೧ ಕೋಟಿ ರೂ.
* ಆಕ್ಸಿಸ್ ಬ್ಯಾಂಕ್ - ೮೧ ಕೋಟಿ ರೂ.
* ಬ್ಯಾಂಕ್ ಆಫ್ ಬರೋಡಾ - ೫೫೦ ಕೋಟಿ ರೂ.
No comments:
Post a Comment