Sunday, January 5, 2020

ಕಾಂಗ್ರೆಸ್ ಶಾಸಕನಿಂದಲೂ ರಾಜೀನಾಮೆ ಘೋಷಣೆ

ಕಾಂಗ್ರೆಸ್ ಶಾಸಕನಿಂದಲೂ ರಾಜೀನಾಮೆ ಘೋಷಣೆ
ಜಲ್ನಾ:  ಸಂಪುಟದರ್ಜೆ ಸಚಿವ ಸ್ಥಾನಮಾನ ಸಿಗದ ಕಾರಣಕ್ಕಾಗಿ ಶಿವಸೇನೆಯ ಮುಸ್ಲಿಂ ಶಾಸಕ ಅಬ್ದುಲ್ ಸತ್ತಾರ್ ರಾಜೀನಾಮೆ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟಕ್ಕೆ ತಮ್ಮನ್ನು ಸೇರ್ಪಡೆ ಮಾಡಿಲ್ಲ ಎಂದು ಅಸಮಾಧಾನದಿಂದ ಕುದಿಯುತ್ತಿರುವ ಜಲ್ನಾದ ಕಾಂಗ್ರೆಸ್ ಶಾಸಕ ಕೈಲಾಶ್ ಗೊರಂತ್ಯಾಲ್ ಅವರು ತಾವು ಪದಾಧಿಕಾರಿಗಳು ಮತ್ತು ಕಾರ್ಯಕರ್ತ ಜೊತೆಗೆ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ 2020 ಜನವರಿ 04ರ  ಶನಿವಾರ ಪ್ರಕಟಿಸಿದರು.

ಜಿಲ್ಲಾ
ಕಾಂಗೆಸ್ ಸಮಿತಿ ಸಭೆಯಲ್ಲಿ ರಾಜೀನಾಮೆ ನೀಡುವ ತೀರ್ಮಾನವನ್ನು ಈದಿನ  ಕೈಗೊಳ್ಳಲಾಗಿದೆ ಎಂದು ಗೊರಂತ್ಯಾಲ್ ಹೇಳಿದರು.

ನಾನು ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ಅವರನ್ನು ಭೇಟಿ ಮಾಡಿ ಪಕ್ಷದ ಹುದ್ದೆಗಳಿಗೆ ನನ್ನ ರಾಜೀನಾಮೆಯನ್ನು ನೀಡುತ್ತೇನೆ. ಜಲ್ನಾ ಮುನಿಸಿಪಲ್ ಕೌನ್ಸಿಲ್, ಜಿಲ್ಲಾ ಪರಿಷತ್ತಿನ ಪಕ್ಷ ಸದಸ್ಯರೂ ನನ್ನ ಜೊತೆಗೇ ತಮ್ಮ ರಾಜೀನಾಮೆಗಳನ್ನು ಸಲ್ಲಿಸಲಿದ್ದಾರೆಎಂದು ಎಂದು ಗೊರಂತ್ಯಾಲ್ ನುಡಿದರು.

ಆಲ್ನಾದಲ್ಲಿನ ಎಲ್ಲ ತಹ್ಸಿಲ್ಗಳ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ರಾಜೀನಾಮೆ ನೀಡಿದ್ದಾರೆ ಎಂದು ಶಾಸಕ ಪ್ರತಿಪಾದಿಸಿದರು.

ಪಕ್ಷವು ನನ್ನನ್ನು ನಿರ್ಲಕ್ಷಿಸಿದೆ ಮತ್ತು ನನಗೆ ನ್ಯಾಯ ಒದಗಿಸಿಲ್ಲಎಂದು ಅವರು ನುಡಿದರು.
ಗೊರಂತ್ಯಾಲ್ ಅವರು ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯ ಅರ್ಜುನ್ ಖೋತ್ಕರ್ ಅವರನ್ನು ಪರಾಭವಗೊಳಿಸಿದ್ದರು.

ಗೊರಂತ್ಯಾಲ್ ಅವರು ಮೂರುಬಾರಿ ಶಾಸಕರಾಗಿದ್ದಾರೆ ಮತ್ತು ಇದಕ್ಕೆ ಮುನ್ನ ಕೌನ್ಸಿಲರ್ ಆಗಿದ್ದರು. ಅವರು ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ಅಪಾರವಾಗಿ ಶ್ರಮಿಸಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಹೇಳಿದರು.

ನಾವು ನಮ್ಮ ರಾಜೀನಾಮೆಗಳನ್ನು ಪಕ್ಷ ನಾಯಕತ್ವಕ್ಕೆ ಸಲ್ಲಿಸಲು ತೀರ್ಮಾನಿಸಿದ್ದೇವೆಎಂದು ಮಹಮ್ಮದ್ ನುಡಿದರು. 

No comments:

Advertisement