Saturday, January 18, 2020

೩ ಹಿಂದೂ ಬಾಲಕಿಯರ ಅಪಹರಣ: ಪಾಕಿಸ್ತಾನಕ್ಕೆ ಭಾರತದ ಪ್ರತಿಭಟನೆ

ಹಿಂದೂ ಬಾಲಕಿಯರ ಅಪಹರಣಪಾಕಿಸ್ತಾನಕ್ಕೆ ಭಾರತದ ಪ್ರತಿಭಟನೆ
ನವದೆಹಲಿ: ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೂವರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿದ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಿ ರಾಜತಾಂತ್ರಿಕ ಕಚೇರಿಯ ಹಿರಿಯ ಅಧಿಕಾರಿಯೊಬ್ಬರನ್ನು 2020 ಜನವರಿ 17ರ ಶುಕ್ರವಾರ ಕರೆಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ ಪ್ರಬಲ ಪ್ರತಿಭಟನೆಯನ್ನು ದಾಖಲಿಸಿತು.

ಇಂತಹ ಘಟನೆಗಳ ಬಗ್ಗೆ ಅಧಿಕಾರಿಯ ಬಳಿ ಭಾರತವು ಗಂಭೀರ ಕಳವಳವನ್ನು ವ್ಯಕ್ತ ಪಡಿಸಿತು ಎಂದು ತನ್ನ ಗುರುತು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ನುಡಿದರು. ಕಾಶ್ಮೀರ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯ ಹದಗೆಟ್ಟಿರುವ ಸಂದರ್ಭದಲ್ಲೇ ಘಟನೆ ಘಟಿಸಿದೆ.

ವರದಿಗಳ ಪ್ರಕಾರ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತದಲ್ಲಿನ ಥಾರಾಪರ್ಕರ್ ಜಿಲ್ಲೆಯ ಉಮರ್ ಗ್ರಾಮಕ್ಕೆ ಸೇರಿದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಶಾಂತಿ ಮೇಘವಾಡ್ ಮತ್ತು ಸರ್ಮಿ ಮೇಘವಾಡ್ ಎಂಬ ಇಬ್ಬರು ಅಪ್ರಾಪ್ತ ಬಾಲಕಿಯರನ್ನು  ಜನವರಿ ೧೪ರಂದು ಅಪಹರಿಸಲಾಗಿತ್ತು. 
ಇನ್ನೊಂದು
ಘಟನೆಯಲ್ಲಿ ಸಿಂಧ್ ಜಾಕೋಬಾಬಾದ್ ಜಿಲ್ಲೆಯಿಂದ ಮೆಹಕ್ ಎಂಬ ಹೆಸರಿನ ಇನ್ನೊಬ್ಬ ಅಪ್ರಾಪ್ತ ವಯಸ್ಸಿನ ಹಿಂದೂ ಬಾಲಕಿಯನ್ನು ಜನವರಿ ೧೫ರಂದು ಅಪಹರಿಸಲಾಗಿತ್ತು.

No comments:

Advertisement