Thursday, January 16, 2020

ಗಣರಾಜ್ಯೋತ್ಸವ ವೇಳೆ ಭಾರೀ ಉಗ್ರದಾಳಿಗೆ ಸ್ಕೆಚ್

ಗಣರಾಜ್ಯೋತ್ಸವ ವೇಳೆ ಭಾರೀ ಉಗ್ರದಾಳಿಗೆ ಸ್ಕೆಚ್
ಸಂಚು ವಿಫಲಗೊಳಿಸಿದ ಕಾಶ್ಮೀರ ಪೊಲೀಸರು,  ಐವರ ಬಂಧನ
ನವದೆಹಲಿ: ಗಣರಾಜ್ಯೋತ್ಸವ ಸಂದರ್ಭದಲ್ಲಿ ಶ್ರೀನಗರ ಹಾಗೂ ಕಾಶ್ಮೀರ ಕಣಿವೆಯಲ್ಲಿ ಭಾರೀ ಭಯೋತ್ಪಾದಕ ದಾಳಿ ನಡೆಸಲು ಜೈಶ್--ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಹೆಣೆದಿದ್ದ ಸಂಚನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗಣರಾಜ್ಯೋತ್ಸವಕ್ಕೆ ಮುಂಚಿತವಾಗಿಯೇ ಭೇದಿಸಿ ವಿಫಲಗೊಳಿಸಿದರು.
ಸಂಚಿಗೆ ಸಂಬಂಧಿಸಿದಂತೆ ಐವರು ಶಂಕಿತರನ್ನು ಬಂಧಿಸಲಾಗಿದ್ದು, ಅವರಿಂದ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶ ಪಡಿಸಿಕೊಳ್ಳಲಾಯಿತು.
ಶ್ರೀನಗರದಲ್ಲಿ ಜೈಶ್--ಮೊಹಮ್ಮದ್ ಹೆಣೆದಿದ್ದ ಸಂಚನ್ನು ಪತ್ತೆ ಹಚ್ಚಿದ ಶ್ರೀನಗರ ಪೊಲೀಸರು ಗಣರಾಜ್ಯೋತ್ಸವದ ದಿನ ಕಣಿವೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಭಾರೀ ವಿಧ್ವಂಸಕ ಕೃತ್ಯದ ಅಪಾಯವನ್ನು ನಿವಾರಿಸಿದರು.
ಜೈಶ್ --ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಹುನ್ನಾರವನ್ನು ಹೂಡಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಐವರನ್ನು ಇದಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ ಎಂದು ಕೇಂದ್ರ ಕಾಶ್ಮೀರ ವಲಯದ ಡಿಐಜಿ ಜಿ ಎಚ್ ಭಟ್ ತಿಳಿಸಿದರು.

ಸಂಚನ್ನು ಬಯಲಿಗೆಳೆಯುವಲ್ಲಿ ಶ್ರೀನಗರ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಹಜರತ್ಬಾಲ್ ಪ್ರದೇಶದಲ್ಲಿ ಎರಡು ಗ್ರೆನೇಡ್ ಸ್ಫೋಟಗಳು ಸಂಚನ್ನು ಬಯಲಿಗೆಳೆದವು.

ಗಣರಾಜ್ಯೋತ್ಸವಕ್ಕೂ ಮುನ್ನವೇ ಸಂಭವನೀಯವಾದ ಭಾರೀ ದಾಳಿಯನ್ನು ವಿಫಲಗೊಳಿಸಲಾಗಿದೆಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಒಂದರಲ್ಲಿ ತಿಳಿಸಿದರು.

ಇದಕ್ಕೆ ಮುನ್ನ ಶ್ರೀನಗರದ ಸುತ್ತ ಮುತ್ತ ಇದೇ ಭಯೋತ್ಪಾದಕರ ತಂಡ ಎರಡು ಗ್ರೆನೇಡ್ ದಾಳಿಗಳನ್ನು ನಡೆಸಿತ್ತು ಎಂದೂ ಪೊಲೀಸರು ಹೇಳಿದರು.

ಬಂಧಿತ ವ್ಯಕ್ತಿಗಳನ್ನು ಸದರ್ಬಾಲ್ ಹಜರತ್ಬಾಲ್ ಅಜೀಜ್ ಅಹ್ಮದ್ ಶೇಖ್, ಹಜರತ್ಬಾಲ್ ಅಸಾರ್ ಕಾಲೋನಿಯ ಉಮರ್ ಹಮೀದ್ ಶೇಖ್, ಹಜರತ್ ಬಾಲ್ ಅಸಾರ್ ಕಲೋನಿಯ ಇಮ್ತಿಯಾಜ್ ಚಿಕ್ಲಾ, ಎಲಾಹಿಬಾಗ್ ಸೌರಾದ ಸಾಹಿಲ್ ಫರೂಖ್ ಗೋಯಿಜ್ರಿ   ಹಾಗೂ ಸದರ್ ಬಾಲ್ ಹಜರತ್ ಬಾಲ್ ನಸೀರ್ ಅಹ್ಮದ್ ಮೀರ್ ಎಂಬುದಾಗಿ ಗುರುತಿಸಲಾಗಿದೆ ಎಂದು ಶ್ರೀನಗರ ಪೊಲೀಸರು ತಿಳಿಸಿದರು.                    

No comments:

Advertisement