Saturday, January 18, 2020

ತಮಿಳುನಾಡು ಜಲ್ಲಿಕಟ್ಟು: ಗೂಳಿ ತಿವಿತಕ್ಕೆ ಒಬ್ಬನ ಸಾವು

ತಮಿಳುನಾಡು ಜಲ್ಲಿಕಟ್ಟು: ಗೂಳಿ ತಿವಿತಕ್ಕೆ ಒಬ್ಬನ ಸಾವು
ಚೆನ್ನೈ: ತಮಿಳುನಾಡಿನ ಮದುರೈ ಜಿಲ್ಲೆಯ ಅಳಂಗನಲ್ಲೂರು ಪಂಚಾಯತ್ ಪಟ್ಟಣದಲ್ಲಿ ನಡೆದ ಜಲ್ಲಿಕಟ್ಟು ಗೂಳಿ ಪಳಗಿಸುವ ಆಟದಲ್ಲಿ 2020 ಜನವರಿ  17ರ ಶುಕ್ರವಾರ  ೨೬ರ ಹರೆಯದ ವ್ಯಕ್ತಿಯೊಬ್ಬ ಗೂಳಿ ತಿವಿತಕ್ಕೆ ಒಳಗಾಗಿ ಸಾವನ್ನಪ್ಪಿದ.  ಮೃತನನ್ನು ಶ್ರೀಧರ್ ಎಂಬುದಾಗಿ ಗುರುತಿಸಲಾಗಿದ್ದು, ಈತ ಸ್ಥಳದಲ್ಲೇ ಸಾವನ್ನಪ್ಪಿದ. ಈತನ ಹೊರತಾಗಿ ಇತರ ೨೯ ಮಂದಿ ಗಾಯಗೊಂಡರು.
ರಾಜ್ಯದ ಮಹತ್ವದ ಜಲ್ಲಿಕಟ್ಟು ಉತ್ಸವ ಕೇಂದ್ರಗಳಲ್ಲಿ ಒಂದಾದ ಅಳಂಗನಲ್ಲೂರು ಜಲ್ಲಿಕಟ್ಟು ಉತ್ಸವದಲ್ಲಿ ಪಾಲ್ಗೊಳ್ಳಲು ೭೦೦ ಗೂಳಿಗಳು ಮತ್ತು ೮೦೦ ಮಂದಿ ಪಳಗಿಸುವವರ ಹೆಸರುಗಳು ದಾಖಲಾಗಿದ್ದವು.

ಪೊಂಗಲ್ (ಮಕರ ಸಂಕ್ರಾಂತಿ) ಬಳಿಕ ರಾಜ್ಯದಲ್ಲಿ ನಡೆಯುವ ಮಹತ್ವದ ಉತ್ಸವ ಇದಾಗಿದ್ದು ಜನವರಿ ೩೧ರವರೆಗೆ ಮುಂದುವರೆಯುತ್ತದೆ.

ಬುಧವಾರ ಕೂಡಾ ಮದುರೈ ನಗರದಲ್ಲಿ ನಡೆದ ಜಲ್ಲಿಕಟ್ಟು ಗೂಳಿ ಪಳಗಿಸುವ ಸ್ಪರ್ಧೆಯಲ್ಲಿ ೩೨ ಮಂದಿ ಗಾಯಗೊಂಡಿದ್ದರು. ೨೦೦೦ ಗೂಳಿಗಳು ಸ್ಪರ್ಧೆಗೆ ನೋಂದಣಿಯಾಗಿದ್ದವು.

No comments:

Advertisement