ಕ್ರಿಕೆಟ್ಟಿಗೆ ಇರ್ಫಾನ್ ಪಠಾಣ್ ವಿದಾಯ
ಮುಂಬೈ: ಹದಿನಾರು ವರ್ಷಗಳ ಹಿಂದೆ ಕಪಿಲ್ ದೇವ್ ಅವರ ಉತ್ತರಾಧಿಕಾರಿ ಎಂಬ ಹೆಗ್ಗಳಿಕೆಯೊಂದಿಗೆ ಭಾರತ ತಂಡವನ್ನು ಪ್ರವೇಶಿಸಿದ್ದ ಆಲ್
ರೌಡರ್ ಇರ್ಫಾನ್ ಪಠಾಣ್ 2020
ಜನವರಿ 04ರ ಶನಿವಾರ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದರು.
ಎಡಗೈ ಸೀಮ್ ಬೌಲಿಂಗ್ ಆಲ್ ರೌಂಡ್ ಸಾಧನೆಯ ಮೂಲಕ ಮಿಂಚತೊಡಗಿದರೂ ಪದೇಪದೇ ಕಾಡುತ್ತಿದ್ದ ಗಾಯದ ಸಮಸ್ಯೆ ಇರ್ಫಾನ್ ಕ್ರಿಕೆಟ್ ಬದುಕಿಗೆ ಕಂಟಕವಾಗಿ ಕಾಡಿತ್ತು. ಹೀಗಾಗಿ ಕಪಿಲ್ ದೇವ್ ಸ್ಥಾನವನ್ನು ತುಂಬಲು ಅವರಿಂದ ಸಾಧ್ಯವಾಗಲೇ ಇಲ್ಲ.
ಎಡಗೈ ಸೀಮ್ ಬೌಲಿಂಗ್ ಆಲ್ ರೌಂಡ್ ಸಾಧನೆಯ ಮೂಲಕ ಮಿಂಚತೊಡಗಿದರೂ ಪದೇಪದೇ ಕಾಡುತ್ತಿದ್ದ ಗಾಯದ ಸಮಸ್ಯೆ ಇರ್ಫಾನ್ ಕ್ರಿಕೆಟ್ ಬದುಕಿಗೆ ಕಂಟಕವಾಗಿ ಕಾಡಿತ್ತು. ಹೀಗಾಗಿ ಕಪಿಲ್ ದೇವ್ ಸ್ಥಾನವನ್ನು ತುಂಬಲು ಅವರಿಂದ ಸಾಧ್ಯವಾಗಲೇ ಇಲ್ಲ.
ಸ್ವಿಂಗ್ ಸ್ಪೆಷಲಿಸ್ಟ್: ಬಲಗೈ ಬ್ಯಾಟ್ ಮನ್ ಗಳಿಗೆ ಎಡಗೈ ಸ್ವಿಂಗ್ ಎಸೆತಗಳ ಮೂಲಕ ಅಪಾಯಕಾರಿಯಾಗಿ ಗೋಚರಿಸುತ್ತಿದ್ದ ಇರ್ಫಾನ್ ಪಠಾಣ್ ೨೦೦೩ರ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡಿನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದರು. ೨೦೦೮ರ ಬಳಿಕ ಯಾವುದೇ ಟೆಸ್ಟಿನಲ್ಲಿ ಕಾಣಿಸಿಕೊಳ್ಳಲಿಲ್ಲ. ೨೦೦೪-೨೦೧೨ರ ಅವಧಿಯಲ್ಲಿ ಏಕದಿನ ತಂಡದ ಸದಸ್ಯರಾಗಿದ್ದರು.
೨೫ ಟೆಸ್ಟ್ ಗಳಿಂದ ೧,೧೦೫ ರನ್, ೧೦೦ ವಿಕೆಟ್; ೧೨೦ ಏಕದಿನ ಪಂದ್ಯಗಳಿಂದ ೧,೫೪೪ ರನ್ ಹಾಗೂ ೧೭೩ ವಿಕೆಟ್; ೨೪ ಟಿ೨೦ ಪಂದ್ಯಗಳಿಂದ ೧೭೨ ರನ್ ಹಾಗೂ ೨೮ ವಿಕೆಟ್ ಉರುಳಿಸಿದ್ದು ಇರ್ಫಾನ್ ಅವರ ಸಾಧನೆಯಾಗಿತ್ತು.
೨೫ ಟೆಸ್ಟ್ ಗಳಿಂದ ೧,೧೦೫ ರನ್, ೧೦೦ ವಿಕೆಟ್; ೧೨೦ ಏಕದಿನ ಪಂದ್ಯಗಳಿಂದ ೧,೫೪೪ ರನ್ ಹಾಗೂ ೧೭೩ ವಿಕೆಟ್; ೨೪ ಟಿ೨೦ ಪಂದ್ಯಗಳಿಂದ ೧೭೨ ರನ್ ಹಾಗೂ ೨೮ ವಿಕೆಟ್ ಉರುಳಿಸಿದ್ದು ಇರ್ಫಾನ್ ಅವರ ಸಾಧನೆಯಾಗಿತ್ತು.
ಟಿ೨೦ ವಿಶ್ವಕಪ್ ಹೀರೋ: ೨೦೦೭ರ ಚೊಚ್ಚಲ ಟಿ೨೦ ವಿಶ್ವಕಪ್ ಪಂದ್ಯಾವಳಿಯ ವೇಳೆ ಭಾರತ ತಂಡದ ಸ್ಟಾರ್ ಆಟಗಾರನಾಗಿದ್ದ ಪಠಾಣ್, ಪಾಕಿಸ್ಥಾನ ವಿರುದ್ಧದ ಫೈನಲ್ ಮುಖಾಮುಖಿಯಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ೨೦೦೬ರ ಪಾಕಿಸ್ಥಾನ ಪ್ರವಾಸದ ವೇಳೆ ಕರಾಚಿ ಟೆಸ್ಟ್ ಪಂದ್ಯದ ಪ್ರಥಮ ಓವರಿನಲ್ಲೇ ಹ್ಯಾಟ್ರಿಕ್ ಸಾಧಿಸಿದ್ದು ಪಠಾಣ್ ಪರಾಕ್ರಮಕ್ಕೆ ಸಾಕ್ಷಿ. ಕೊನೆಯ ೩ ಎಸೆತಗಳಲ್ಲಿ ಅವರು ಸಲ್ಮಾನ್ ಬಟ್, ಯೂನಿಸ್ ಖಾನ್ ಮತ್ತು ಮೊಹಮ್ಮದ್ ಯೂಸುಫ್ ವಿಕೆಟ್ ಉರುಳಿಸಿದ್ದರು.
ಆಸ್ಟ್ರೇಲಿಯ ವಿರುದ್ಧದ ೨೦೦೮ರ ಪರ್ತ್ ಟೆಸ್ಟ್ ಪಂದ್ಯದಲ್ಲಿ ಭಾರತದ ೭೨ ರನ್ ಜಯದಲ್ಲೂ ಇರ್ಫಾನ್ ಕೊಡುಗೆ ಮಹತ್ವದ್ದಾಗಿತ್ತು. ಆದರೆ ಸತತವಾಗಿ ಕಾಡುತ್ತಿದ್ದ ಗಾಯದ ಸಮಸ್ಯೆ ಇರ್ಫಾನ್ ಅವರ ಕ್ರಿಕೆಟ್ ಬದುಕಿನ ಹಾದಿಯನ್ನೇ ತಪ್ಪಿಸಿತು.
ಜಮ್ಮು ಕಾಶ್ಮೀರ ಪರ ಆಟ: ಮೂಲತಃ ಬರೋಡದ ಕ್ರಿಕೆಟಿಗನಾಗಿರುವ ಇರ್ಫಾನ್ ಪಠಾಣ್, ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರವನ್ನು ಪ್ರತಿನಿಧಿಸಿದ್ದರು. ಫೆಬ್ರವರಿಯಲ್ಲಿ ಈ ತಂಡದ ಪರವಾಗಿಯೇ ಕೊನೆಯ ಸಲ ಸ್ಪರ್ಧಾತ್ಮಕ ಕ್ರಿಕೆಟಿನಲ್ಲಿ ಕಾಣಿಸಿಕೊಂಡಿದ್ದರು.
No comments:
Post a Comment