ಸಿಎಎ
ವಿರುದ್ಧ ಸುಪ್ರೀಂಗೆ ಅರ್ಜಿ: ಕೇರಳ ರಾಜ್ಯಪಾಲ ಅರಿಫ್ ವ್ಯಗ್ರ
ವರದಿ
ಸಲ್ಲಿಸಲು ಸಿಎಸ್ಗೆ ಸೂಚನೆ
ತಿರುವನಂತಪುರಂ:
ತನ್ನ ಗಮನಕ್ಕೆ ತಾರದೆಯೇ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರಿಂದ ವ್ಯಗ್ರರಾಗಿರುವ ಕೇರಳದ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಅವರು ಬೆಳವಣಿಗೆ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ಮೂಲಗಳು ಅವರು
2020 ಜನವರಿ 19ರ ಭಾನುವಾರ
ಹೇಳಿದವು.
ಪೌರತ್ವ
ತಿದ್ದುಪಡಿ ಕಾಯ್ದೆಯ ಅನುಷ್ಠಾನ ವಿಚಾರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆಗೆ ಘರ್ಷಣೆಗೆ ಇಳಿದಿರುವ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಅವರು ’ತಮಗೆ ನಿರ್ಧಾರದ ಬಗ್ಗೆ ತಿಳಿಸದೇ ಇರುವುದು ಅಸಮರ್ಪಕ’ ಎಂದು ಹೇಳಿದ್ದಾರೆ ಎಂದು ವರದಿ ಹೇಳಿತು.
ರಾಜ್ಯ
ಸರ್ಕಾರವು ಸಿಎಎ ವಿರುದ್ಧ ತಮಗೆ ತಿಳಿಸದೇ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯಪಾಲರ ಕಚೇರಿಯು ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ರಾಜ್ಯಪಾಲರು
ಇದಕ್ಕೆ ಮುನ್ನ ರಾಜ್ಯಕ್ಕೆ ಸುಪ್ರೀಂಕೋರ್ಟ್ಗೆ ಹೋಗುವ ಹಕ್ಕಿದೆ
ಎಂದು ಹೇಳಿದ್ದರು. ಆದರೆ ತಮ್ಮನ್ನು ಕತ್ತಲೆಯಲ್ಲಿ ಇಡುವುದು ಅಸಮರ್ಪಕ ಎಂದು ರಾಜ್ಯಪಾಲರು ಹೇಳಿದರು.
ಪೌರತ್ವ
ತಿದ್ದುಪಡಿ ಕಾಯ್ದೆಯ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಮೂಲಕ ಕೇರಳವು ಮಂಗಳವಾರ ಕಾಯ್ದೆಯನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ ಮೊತ್ತ ಮೊದಲ ರಾಜ್ಯ ಎನಿಸಿತ್ತು. ಸುಪ್ರೀಂಕೋರ್ಟ್ ಈ ಅರ್ಜಿಯನ್ನು ಇತರ
೬೦ ಅರ್ಜಿಗಳ ಜೊತೆಗೆ ಬುಧವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ.
ಇದಕ್ಕೆ
ಮುನ್ನ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರವನ್ನು ಆಗ್ರಹಿಸಿ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿತ್ತು. ಈ ನಿರ್ಣಯಕ್ಕೆ ಕಾನೂನಿನ
ಯಾವ ಮಾನ್ಯತೆಯೂ ಇಲ್ಲ ಎಂದು ರಾಜ್ಯಪಾಲರು ಹೇಳಿದ್ದರು.
ಕೇರಳದ
ಬಳಿಕ ಪಂಜಾಬ್ ವಿಧಾನಸಭೆ ಕೂಡಾ ಇಂತಹುದೇ ನಿರ್ಣಯ ಅಂಗೀಕರಿಸಿ ತಾನೂ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಪ್ರಕಟಿಸಿತ್ತು.
No comments:
Post a Comment