Monday, January 20, 2020

ಅರಮನೆ ಜೀವನಕ್ಕೆ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅಧಿಕೃತ ಗುಡ್ ಬೈ

ಅರಮನೆ ಜೀವನಕ್ಕೆ  ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅಧಿಕೃತ ಗುಡ್ ಬೈ 
ಲಂಡನ್: ಪ್ರತಿಷ್ಠಿತ ಬ್ರಿಟನ್ ರಾಜಮನೆತನದ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಪತ್ನಿ ಮೇಘನ್ ಅರಮನೆಯ ಜವಾಬ್ದಾರಿಗಳನ್ನು  ಅವರು 2020 ಜನವರಿ 19ರ ಭಾನುವಾರ  ಅಧಿಕೃತವಾಗಿ ತೊರೆದರು.

ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಇನ್ನು ಮುಂದೆ ಅವರ ಕೆಲಸಗಳಿಗೆ ಸಾರ್ವಜನಿಕ ಹಣವನ್ನು ಬಳಸುವುದಿಲ್ಲ ಎಂದು ಬಕಿಂಗ್ ಹ್ಯಾಮ್ ಅರಮನೆಯ ಅಧಿಕೃತ ಘೋಷಣೆ ತಿಳಿಸಿತು. 

 
ಅದಲ್ಲದೆ ಮುಂದಿನ ವಸಂತ ಋತುವಿನಿಂದಲೇ ಅರಮನೆಯಲ್ಲಿ ಹೊಸ ವ್ಯವಸ್ಥೆಗಳು ಜಾರಿಯಾಗಲಿದೆ ಎಂದು ಅದು ಪ್ರಕಟಿಸಿತು.
ಹತ್ತು ದಿನಗಳ ಹಿಂದಷ್ಟೇ ಪ್ರಿನ್ಸ್ ಹ್ಯಾರಿ ದಂಪತಿ ತಾವು ಅರಮನೆ ಐಷಾರಾಮಿ ಜೀವನವನ್ನು ತೊರೆಯುವುದಾಗಿ ಘೋಷಿಸಿದ್ದರು. ರಾಜಮನೆತನದ ಗೌರವಗಳಾದ ರಾಜ ಮತ್ತು ರಾಣಿ ಪದವಿ ತಮಗೆ ಬೇಡ ಎಂದು ಹ್ಯಾರಿ ಮತ್ತು ಮೇಘನ್ ಹೇಳಿದ್ದರು.

ಹ್ಯಾರಿ ಮತ್ತು ಮೇಘನ್ ಅರಮನೆ ಜವಾಬ್ದಾರಿ ತ್ಯಜಿಸುವ ಬಗ್ಗೆ ಮಾತನಾಡಿರುವ ರಾಣಿ ಎಲಿಜಬೆತ್, ಹ್ಯಾರಿ ಮತ್ತು ಮೇಘನ್ ಅವರು ನನ್ನ ಕುಟುಂಬದಲ್ಲಿ ಅತೀ ಹೆಚ್ಚು ಪ್ರೀತಿಯ ಸದಸ್ಯರಾಗಿದ್ದರುದೇಶದಲ್ಲಿ ಇದುವರೆಗೆ ಮಾಡಿದ ಉತ್ತಮ ಕೆಲಸಗಳಿಗೆ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರು ಎಂದಿಗೂ ರಾಜಮನೆತನದ ವೈಭೋಗದಲ್ಲಿ ಇರಬೇಕೆಂದು ನನ್ನ ಇಚ್ಛೆಯಾಗಿತ್ತು ಎಂದು ಹೇಳಿದರು.

ಹ್ಯಾರಿ ಮತ್ತು ಮೇಘನ್ ಮುಂದೆ ಇಂಗ್ಲೆಂಡ್ ಫ್ರಾಗ್ ಮೋರ್ ಕಾಟೇಜ್ ನಲ್ಲಿ ಉಳಿಯಲಿದ್ದಾರೆ ಎಂದು ವರದಿಗಳು ತಿಳಿಸಿದವು.

No comments:

Advertisement