Wednesday, January 22, 2020

ನಾಮಪತ್ರ ಸಲ್ಲಿಕೆಗಾಗಿ ೬ ಗಂಟೆ ಕಾದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ನಾಮಪತ್ರ ಸಲ್ಲಿಕೆಗಾಗಿ ಗಂಟೆ ಕಾದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ಶಿರೋಮಣಿ ಅಕಾಲಿ ದಳದ ಬಳಿಕ ಜೆಜೆಪಿಯೂ ದೆಹಲಿ ಚುನಾವಣೆಯಿಂದ ಔಟ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಆಪ್) ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು 2020 ಜನವರಿ 21ರ  ಮಂಗಳವಾರ  ಆರು ಗಂಟೆಗಳ ಕಾಲ ಸರತಿಯ ಸಾಲಿನಲ್ಲಿ ಕಾದು ನಿಂತ ಬಳಿಕ ಕಡೆಗೂ ನವದೆಹಲಿ ಕ್ಷೇತ್ರದಲ್ಲಿ ದೆಹಲಿ ವಿಧಾನಸಭಾ ಚುನಾವಣೆಗಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ಕೇಜ್ರಿವಾಲ್ ಅವರು ನವದೆಹಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ರೊಮೇಶ್ ಸಭರ್ ವಾಲ್ ಮತ್ತು ಬಿಜೆಪಿಯ ಸುನಿಲ್ ಯಾದವ್ ವಿರುದ್ಧ ಸ್ಪರ್ಧಿಸಿದ್ದು ಮೂರನೇ ಬಾರಿಗೆ ಕ್ಷೇತ್ರವನ್ನು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

ಇದಕ್ಕೆ ಮುನ್ನ ಮಧ್ಯಾಹ್ನ ಬಿಜೆಪಿಯು ಉದ್ದೇಶಪೂರ್ವಕವಾಗಿ ಕೇಜ್ರಿವಾಲ್ ನಾಮಪತ್ರ ಸಲ್ಲಿಕೆಯನ್ನು ವಿಳಂಬವಾಗುವಂತೆ ಮಾಡಿದೆ ಎಂದ ಆಮ್ ಆದ್ಮಿ ಪಕ್ಷವು ಆಪಾದಿಸಿತ್ತು.

ಚುನಾವಣಾಧಿಕಾರಿಯ ಕಚೇರಿಯಲ್ಲಿ ಸೂಕ್ತ ನಾಮಪತ್ರಗಳಿಲ್ಲದ ಸುಮಾರು ೩೫ ಮಂದಿ ಅಭ್ಯರ್ಥಿಗಳು ಕುಳಿತು ಕೊಂಡಿದ್ದಾರೆ. ಕೆಲವರ ಬಳಿ ೧೦ ಮಂದಿ ಸೂಚಕರ ಹೆಸರು ಕೂಡಾ ಇಲ್ಲ. ವ್ಯಕ್ತಿಗಳನ್ನು ಬಿಜೆಪಿಯೇ ತಂದು ನಿಲ್ಲಿಸಿದೆ ಎಂದು ಆಪ್ ನಾಯಕ ಸೌರಭ್ ಭಾರದ್ವಾಜ್ ಆಪಾದಿಸಿದ್ದರು.

ಸ್ವತಃ ಕೇಜ್ರಿವಾಲ್ ಅವರೂ ನಾಮಪತ್ರ ಸಲ್ಲಿಸಲು ಸಾಲಿನಲ್ಲಿ ಕಾದಿದ್ದೇನೆ. ನನ್ನ ಕ್ರಮಸಂಖ್ಯೆ ೪೫ ಎಂದು ಟ್ವೀಟ್ ಮಾಡಿದ್ದರು.

ಕೇಜ್ರಿವಾಲ್ ಅವರು ಸೋಮವಾರ ನಿಗದಿಯಾಗಿದ್ದ ನಾಮಪತ್ರ ಸಲ್ಲಿಕೆಯ ಗಂಟೆಯ ಗಡುವಿನೊಳಗೆ ನಾಮಪತ್ರ ಸಲ್ಲಿಸಲೂ ವಿಫಲರಾಗಿದ್ದರು. ಇದಕ್ಕೆ ಅವರ ಭಾರೀ ರೋಡ್ ಶೋ ಬಳಸು ದಾರಿಯ ಮೂಲಕ ಚುನಾವಣಾ ಅಧಿಕಾರಿಯ ಕಚೇರಿಯನ್ನು ವಿಳಂಬವಾಗಿ ತಲುಪಿದ್ದು ಕಾರಣವಾಗಿತ್ತು.

ದೆಹಲಿ ವಿಧಾನಸಭೆಗೆ ಫೆಬ್ರುವರಿ ೮ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ ೧೧ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಆಮ್ ಆದ್ಮಿ ಪಕ್ಷವು ೨೦೧೫ರ ವಿಧಾನಸಭಾ ಚುನಾವಣೆಯಲ್ಲಿ ೭೦ ಸ್ಥಾನಗಳ ಪೈಕಿ ೬೭ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಪ್ರಚಂಡ ಬಹುಮತವನ್ನು ಪಡೆದಿತ್ತು. ಬಾರಿಯೂ ಉತ್ತಮ ಸಾಧನೆ ಪ್ರದರ್ಶಿಸುವ ವಿಶ್ವಾಸವನ್ನು ಕೇಜ್ರಿವಾಲ್ ಅವರ ಪಕ್ಷ ಹೊಂದಿದೆ.

ಬಿಜೆಪಿಯ ಮೂರು ದಶಕಗಳ ಬಳಿಕ ಪುನಃ ದೆಹಲಿ ಗದ್ದುಗೆ ಹಿಡಿಯುವ ಉದ್ದೇಶದೊಂದಿಗೆ ತ್ರಿಕೋನ ಸ್ಪರ್ಧೆಗೆ ಇಳಿದಿದೆ.

ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಜನತಾದಳ (ಆರ್ಜೆಡಿ) ಜೊತೆಗೆ ಚುನಾವಣಾ ಮೈತ್ರಿ ಮಾಡಿಕೊಂಡಿದ್ದು, ಪೂರ್ವ ಪ್ರದೇಶದ ಮತದಾರರನ್ನು ಸೆಳೆಯುವ ಯತ್ನ ಮಾಡಿದೆ.
ಆಮ್ ಆದ್ಮಿ ಪಕ್ಷವು ಜನವರಿ ೧೪ರಂದು ಮೊತ್ತ ಮೊದಲಿಗೆ ೭೦ ಅಭ್ಯಥಿಗಳನ್ನು ಪ್ರಕಟಿಸಿತ್ತು. ಅದು ೧೫ ಹಾಲಿ ಶಾಸಕರನ್ನು ಕೈಬಿಟ್ಟಿದ್ದು, ೨೩ ಹೊಸ ಮುಖಗಳನ್ನು ಪ್ರಕಟಿಸಿದೆ.

ಜೆಜೆಪಿಯೂ ಚುನಾವಣೆಯಿಂದ ಔಟ್: ಮಧ್ಯೆ, ಪಕ್ಷವು ಬಯಸಿದಕೀಅಥವಾಚಪ್ಪಲಿಚಿಹ್ನೆ ಲಭಿಸದೆ ಇರುವ ಕಾರಣ ಫೆಬ್ರುವರಿ ೮ರ ದೆಹಲಿ ವಿಧಾನಸಭಾ ಚುನಾವಣಾ ಕಣದಿಂದ ದೂರ ಉಳಿಯಲು ಬಿಜೆಪಿಯ ಹರಿಯಾಣದ ಮಿತ್ರ ಪಕ್ಷ ಜನನಾಯಕ ಜನತಾ ಪಕ್ಷ (ಜೆಜೆಪಿ) ತೀರ್ಮಾನಿಸಿದೆ.

ಚುನಾವಣಾ ಚಿಹ್ನೆಯು ಪ್ರಮುಖ ವಿಷಯವಾಗಿದ್ದು, ಅಪೇಕ್ಷಿತ ಚಿಹ್ನೆಯನ್ನು ಬೇರೆ ಸಂಘಟನೆಗೆ ನೀಡಲಾಗಿರುವುದರಿಂದ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಪಕ್ಷವು ತೀರ್ಮಾನಿಸಿದೆ ಎಂದು ಪಕ್ಷದ ಮುಖ್ಯಸ್ಥ ದುಷ್ಯಂತ ಚೌಟಾಲ ಮಂಗಳವಾರ ಹೇಳಿಕೆಯೊಂದರಲ್ಲಿ ದೃಢ ಪಡಿಸಿದರು.

ಚುನಾವಣಾ ಲಾಂಛನವಾಗಿ ತನಗೆಕೀಅಥವಾಚಪ್ಪಲಿಯನ್ನು ನೀಡುವಂತೆ ಜೆಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಕೋರಿದ ಲಾಂಛನ ಸಿಗದೇ ಇರುವುದರಿಂದ ಸ್ಪರ್ಧಿಸದಿರಲು ಪಕ್ಷವು ತೀರ್ಮಾನಿಸಿದೆ ಎಂದು ಜೆಜೆಪಿ ಹಿಂದಿಯಲ್ಲಿ ಮಾಡಿದ ಟ್ವೀಟ್ನಲ್ಲಿ ತಿಳಿಸಿತು.

ಬಿಜೆಪಿಯ ಇನ್ನೊಂದು ಮಿತ್ರ ಪಕ್ಷವಾದ ಶಿರೋಮಣಿ ಅಕಾಲಿ ದಳ (ಎಸ್ಎಡಿ) ಕೂಡಾ ದೆಹಲಿ ಚುನಾವಣೆಯಿಂದ ದೂರ ಉಳಿಯಲು ಈಗಾಗಲೇ ನಿರ್ಧರಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ನಿಲುವು ಬದಲಿಸಿಕೊಳ್ಳುವಂತೆ ಬಿಜೆಪಿಯು ಸೂಚಿಸಿದ ಹಿನ್ನೆಲೆಯಲ್ಲಿ ದೆಹಲಿ ಚುನಾವಣೆಗೆ ಅಭ್ಯರ್ಥಿಗಳನ್ನು ಇಳಿಸದೇ ಇರಲು ಶಿರೋಮಣಿ ಅಕಾಲಿ ದಳ (ಎಸ್ಎಡಿ) ಹಿಂದೆ ನಿರ್ಧರಿಸಿತ್ತು.

ಬಿಜೆಪಿಯು ೭೦ ಸ್ಥಾನಗಳ ಪೈಕಿ ೬೭ ಸ್ಥಾನಗಳಿಗೆ ಸ್ಪರ್ಧಿಸಲು ಯೋಜಿಸಿದ್ದು ಸ್ಥಾನಗಳಿಗೆ ಮಿತ್ರ ಪಕ್ಷಗಳು ಸ್ಪರ್ಧಿಸುವ ನಿರೀಕ್ಷೆಯಲ್ಲಿದೆ.

No comments:

Advertisement