ಮಂಗಳೂರು
ಬಾಂಬ್ ಪತ್ತೆ ಪ್ರಕರಣ: ಆರೋಪಿ ಆದಿತ್ಯ ರಾವ್ ಪೊಲೀಸರಿಗೆ ಶರಣು
ಬೆಂಗಳೂರು:
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಉಡುಪಿ ಮೂಲದ ಆದಿತ್ಯ
ರಾವ್ 2020 ಜನವರಿ
22ರ ಬುಧವಾರ ಬೆಂಗಳೂರು
ಪೊಲೀಸರ ಮುಂದೆ ಶರಣಾಗತನಾದ.
ಡಿಜಿ
ಮತ್ತು ಐಜಿಪಿ ನೀಲಮಣಿ ರಾಜು ಅವರ ಮುಂದೆ ಆರೋಪಿ ಶರಣಾಗಿದ್ದಾನೆ.
2020 ಜನವರಿ
20ರ ಸೋಮವಾರ ಮಂಗಳೂರು
ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ
ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿತ್ತು. ಅದರಲ್ಲಿ ಸ್ಪೋಟಕ ಪತ್ತೆಯಾದ ಕೂಡಲೇ ಪೊಲೀಸರು ಸುರಕ್ಷಿತ ಕ್ರಮ ಕೈಗೊಂಡಿದ್ದರು. ನಂತರ ಅದೇ ದಿನ ಸಂಜೆ ಕೆಂಜಾರು ಮೈದಾನದಲ್ಲಿ ಅದನ್ನು ನಿಯಂತ್ರಿತ ಸ್ಫೋಟ ಮಾಡಲಾಗಿತ್ತು.
ಬಿಳಿ
ಟೋಪಿ ಧರಿಸಿದ ವ್ಯಕ್ತಿಯೋರ್ವ ಬ್ಯಾಗ್ ಇರಿಸಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪೊಲೀಸರು ಈ ಚಿತ್ರವನ್ನು ಬಿಡುಗಡೆ
ಮಾಡಿದ್ದರು.
ಸ್ಟೇಟ್
ಬ್ಯಾಂಕ್ ನಿಂದ ಖಾಸಗಿ ಸಿಟಿ ಬಸ್ಸಿನಲ್ಲಿ ಬಂದು ಕೆಂಜಾರಿನಲ್ಲಿ ಇಳಿದು ಬಳಿಕ ಆಟೋ ಹಿಡಿದು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆರೋಪಿಯು ಅಲ್ಲಿ ಎಕ್ಸಿಟ್ ಟಿಕೆಟ್ ಕೌಂಟರ್ ಲಾಬಿ ಬಳಿ ಬ್ಯಾಗ್ ಅನ್ನು ಇರಿಸಿ ಬಳಿಕ ಪರಾರಿಯಾಗಿದ್ದು ಮೇಲ್ನೋಟಕ್ಕೆ ಪ್ರಾಥಮಿಕ ತನಿಖೆಯ ವೇಳೆ ಗೊತ್ತಾಗಿತ್ತು.
ಆರೋಪಿಯು
ಬ್ಯಾಗನ್ನು ಇರಿಸಿ ಎಸ್ಕಲೇಟರ್ ಇಳಿದು ಬಳಿಕ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ವೇಗವಾಗಿ ಹೊರ ಹೋಗುತ್ತಿದ್ದ ದೃಶ್ಯಗಳೂ ಸಹ ಸಿಸಿಟಿವಿಯಲ್ಲಿ ದಾಖಲಾಗಿದ್ದವು.
ಶಂಕಿತ
ಆರೋಪಿಯ ಫೋಟೋವನ್ನು ಹೋಲುವ ಉಡುಪಿ ಮೂಲದ ಆದಿತ್ಯ ರಾವ್ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಮಂಗಳವಾರ ಆತನ ಉಡುಪಿ ಮನೆಗೆ ಪೊಲೀಸರು ಭೇಟಿ ನೀಡಿ ಕುಟುಂಬ ಸದಸ್ಯರ ವಿಚಾರಣೆ ನಡೆಸಿದ್ದರು.
ಬೆಂಗಳೂರಿನಲ್ಲಿ
ಹುಸಿ ಬಾಂಬ್ ಕರೆ ಮಾಡಿ ಈತ ಎರಡು ವರ್ಷದ
ಹಿಂದೆ ಸಿಕ್ಕಿಬಿದ್ದಿದ್ದ ಎನ್ನಲಾಗಿತ್ತು. ಈತನಿಗೆ ಜೈಲು ಶಿಕ್ಷೆಯೂ ಆಗಿತ್ತು ಎಂದು ವರದಿ ತಿಳಿಸಿತು.
No comments:
Post a Comment