Sunday, January 26, 2020

ಸಮಾನತೆ, ವಿವಿಧ್ಯತೆಗೆ ಒತ್ತು: ರಾಷ್ಟ್ರಪತಿ ಕೋವಿಂದ್ ಕರೆ

ಸಮಾನತೆ, ವಿವಿಧ್ಯತೆಗೆ ಒತ್ತು: ರಾಷ್ಟ್ರಪತಿ ಕೋವಿಂದ್ ಕರೆ
ನವದೆಹಲಿ: ಗಣರಾಜ್ಯೋತ್ಸವದ ಮುನ್ನಾದಿನ 2020 ಜನವರಿ 25ರ ಶನಿವಾರ ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ ಮತ್ತು ವೈವಿಧ್ಯತೆಗೆ ಒತ್ತು ನೀಡುವಂತೆ ಜನತೆಗೆ ಕರೆ ನೀಡಿದರು.

ಸಾಮೂಹಿಕ ಭವಿಷ್ಯವನ್ನು ನಿರ್ಧರಿಸುವಲ್ಲಿ ಭಾರತೀಯ ನಾಗರಿಕರ ಸಾಮುದಾಯಿಕ ಶಕ್ತಿಯೇ ಮಹತ್ವವಾದದ್ದು ಎಂದು ಕೋವಿಂದ್ ಹೇಳಿದರು.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ರಾಷ್ಟ್ರದ ಮೂರು ಪ್ರಮುಖ ಅಂಗಗಳು. ಆದರೆ ಮೂಲತಃ ಜನರೇ ರಾಷ್ಟ್ರ. ನಾವು ಪ್ರಜಾತಾಂತ್ರಿಕ ಮೌಲ್ಯಗಳಾದ ಸಮಾನತೆ ಮತ್ತು ವೈವಿಧ್ಯತೆಯನ್ನು ಉಳಿಸಿಕೊಳ್ಳುವ ನಿಲುವನ್ನು ದೃಢವಾಗಿ ತಾಳಬೇಕು ಎಂದು ಅವರು ನುಡಿದರು.

ರಾಷ್ಟ್ರ ನಿರ್ಮಾಣಕ್ಕೆ ಮಹಾತ್ಮ ಗಾಂಧಿಯವರ ತತ್ವಗಳನ್ನು ಮುನ್ನಡೆಸಿಕೊಂಡು ಹೋಗಬೇಕಾದದು ಅತ್ಯಂತ  ಮಹತ್ವ. ವಾಸ್ತವವಾಗಿ ಅವು ಈಗ ಇನ್ನೂ ಹೆಚ್ಚು ಮಹತ್ವವನ್ನು ಗಳಿಸಿವೆ ಎಂದು ರಾಷ್ಟ್ರಪತಿ ನುಡಿದರು.

ಆರೋಗ್ಯ, ಶಿಕ್ಷಣ ಎಲ್ಲರಿಗೂ ಲಭಿಸಬೇಕು. ಉತ್ತಮ ಆಡಳಿತದ ಅಡಿಪಾಯ ಎಂಬುದಾಗಿ ಇವು ಪರಿಗಣಿತವಾಗಿವೆ. ಎರಡೂ ರಂಗಗಳಲ್ಲಿ ಕಳೆದ ೭೦ ವರ್ಷಗಳಲ್ಲಿ ನಾವು ಸುದೀರ್ಘ ಪಯಣ ನಡೆಸಿದ್ದೇವೆ. ನಮ್ಮ ಯುವಕರಿಗೆ ರಾಷ್ಟ್ರವು ಯಾವಾಗಲೂ ಪ್ರಥಮವಾಗಬೇಕು. ಅವರ ಮೂಲಕವೇ ನೂತನ ಭಾರತ ಉದಯಿಸುವುದನ್ನು ನಾವು ಕಾಣುತ್ತಿದ್ದೇವೆಎಂದು ಕೋವಿಂದ್ ಹೇಳಿದರು.

No comments:

Advertisement