Sunday, January 5, 2020

'ವೀರ ಸಾವರ್ಕರ್ ಕಿತನೆ ವೀರ್ ?’ ಪುಸ್ತಕ ವಾಪಸಿಗೆ ಎನ್‌ಸಿಪಿ ಆಗ್ರಹ

'ವೀರ ಸಾವರ್ಕರ್ ಕಿತನೆ ವೀರ್ ?’ ವಾಪಸಿಗೆ ಎನ್ಸಿಪಿ ಆಗ್ರಹ
ಮುಂಬೈ:  ಕಾಂಗ್ರೆಸ್ ಪಕ್ಷದ ಆಧೀನ ಸಂಘಟನೆ ಸೇವಾದಳವು ಪ್ರಕಟಿಸಿರುವ ವಿವಾದಾತ್ಮಕ 'ವೀರ ಸಾವರ್ಕರ್ ಕಿತನೆ ವೀರ್ ?’ ಹಿಂದಿ ಪುಸ್ತಕವನ್ನು ಹಿಂತೆಗೆದುಕೊಳ್ಳುವಂತೆ ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟದ ಅಂಗಪಕ್ಷವಾಗಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ಸಿಪಿ) 2020 ಜನವರಿ 04ರ ಶನಿವಾರ ಆಗ್ರಹಿಸಿತು.

ತ್ರಿಪಕ್ಷ
ಮೈತ್ರಿಕೂಟದಲ್ಲಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಅಂಗಪಕ್ಷಗಳಾಗಿವೆ.

ಕಾಂಗ್ರೆಸ್
ಪಕ್ಷದ ಆಧೀನ ಸಂಸ್ಥೆಯಾಗಿರುವ ಸೇವಾದಳವು ಮಧ್ಯಪ್ರದೇಶದಲ್ಲಿ ತನ್ನ ಶಿಬಿರದಲ್ಲಿ ಪುಸ್ತಕವನ್ನು ವಿತರಿಸಿದ್ದು, ಪುಸ್ತಕವು ಸಾವರ್ಕರ್ ಅವರ ದೇಶಭಕ್ತಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದೆ.

ಸಾವರ್ಕರ್ ಅವರು ಜೀವಂತರಾಗಿ ಇಲ್ಲದೇ ಇರುವುದರಿಂದ ಇಂತಹ ಪ್ರತಿಪಾದನೆ ಮಾಡುವುದು ಸರಿಯಲ್ಲಎಂದು ಎನ್ಸಿಪಿ ಮುಖ್ಯ ವಕ್ತಾರ ನವಾಬ್ ಮಲಿಕ್ ಹೇಳಿದರು.

ವಿನಾಯಕ
ದಾಮೋದರ ಸಾವರ್ಕರ್ ಅವರು ಅಂಡಮಾನ್ ಸೆಲ್ಯುಲಾರ್ ಸೆರೆಮನೆಯಿಂದ ಬಿಡುಗಡೆಯಾಗಿ ಬಂದ ಬಳಿಕ ಬ್ರಿಟಿಷರಿಂದ ಪಿಂಚಣಿ ಪಡೆದಿದ್ದಾರೆ. ಮಹಾತ್ಮಾ ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಜೊತೆಗೆ ಅವರು ದೈಹಿಕ ಸಂಬಂಧವನ್ನೂ ಹೊಂದಿದ್ದರುಎಂದು ವಿವಾದಾತ್ಮಕ ಪುಸ್ತಕವು ಆಪಾದಿಸಿದೆ.  
ಪುಸ್ತಕವನ್ನು ಹಿಂತೆಗೆದುಕೊಳ್ಳಬೇಕು. ನಿಮಗೆ ವ್ಯಕ್ತಿಗಳ ಜೊತೆಗೆ ಸೈದ್ಧಾಂತಿಕ ಭಿನ್ನಮತ ಇರಬಹುದು. ಆದರೆ ವ್ಯಕ್ತಿ ನಮ್ಮ ಸುತ್ತಮುತ್ತ ಇಲ್ಲದೇ ಇದ್ದಾಗ ಇಂತಹ ವೈಯಕ್ತಿಕ ಟೀಕೆಗಳನ್ನು ಮಾಡುವುದು ಸರಿಯಲ್ಲಎಂದು ನವಾಬ್ ಮಲಿಕ್ ಹೇಳಿದರು.

ಮೈತ್ರಿಕೂಟದ ಇನ್ನೊಂದು ಅಂಗ ಪಕ್ಷವಾಗಿರುವ ಶಿವಸೇನೆ ಕೂಡಾ ಪುಸ್ತಕವನ್ನು ಗುರಿಯಾಗಿಟ್ಟು ಟೀಕಿಸಿದೆ.

ವೀರ ಸಾವರ್ಕರ್ ಅವರು ಮಹಾನ್ ವ್ಯಕ್ತಿಯಾಗಿದ್ದರು, ಆಗಿದ್ದಾರೆ ಮತ್ತು ಮಹಾನ್ ವ್ಯಕ್ತಿಯಾಗಿಯೇ ಉಳಿಯುತ್ತಾರೆ. ಒಂದು ವರ್ಗ ಅವರ ವಿರುದ್ಧ ಮಾತನಾಡುತ್ತಿದೆ. ಇದು ಅವರ ಕೊಳಕು ಮನಸ್ಸನ್ನು ತೋರಿಸುತ್ತದೆಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಶುಕ್ರವಾರ ಹೇಳಿದ್ದರು.

ಬಿಜೆಪಿ
ನಾಯಕ ದೇವೇಂದ್ರ ಫಡ್ನವಿಸ್ ಅವರು ಕೂಡಾ ಪುಸ್ತಕವನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಕಾಂಗೆಸ್ ಪಕ್ಷವು ಪುಸ್ತಕ ವಿತರಣೆಯ ಮೂಲಕ ತನ್ನ ದುರ್ಬುದ್ಧಿಯನ್ನು ಪ್ರದರ್ಶಿಸಿದೆ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಕಳೆದ ತಿಂಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತನ್ನ ಹೆಸರುರಾಹುಲ್ ಸಾವರ್ಕರ್ ಅಲ್ಲಆದ್ದರಿಂದ ನಾನು ಕ್ಷಮೆ ಯಾಚಿಸುವುದಿಲ್ಲ ಎಂಬುದಾಗಿ ನೀಡಿದ್ದ ಹೇಳಿಕೆಯೂ ಶಿವಸೇನೆಯನ್ನು ಸಿಟ್ಟಿಗೆಬ್ಬಿಸಿತ್ತು. ಶಿವಸೇನೆಯು ಬಿಜೆಪಿ ಜೊತೆಗಿನ ತನ್ನ ಮೈತ್ರಿ ಮುರಿದುಕೊಂಡು ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದೆ.

No comments:

Advertisement