Thursday, January 23, 2020

ಮೂರ್ಜೆ ಸುನಿತಾ ಪ್ರಭುವಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ

ಮೂರ್ಜೆ ಸುನಿತಾ ಪ್ರಭುವಿಗೆ  ಪ್ರಧಾನ ಮಂತ್ರಿ
ಬಾಲ ಪುರಸ್ಕಾರ
ಬೆಳ್ತಂಗಡಿ: ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ನಡೆಸಿದ ಅಮೋಘ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಮೂರ್ಜೆ ಸುನೀತಾ ಪ್ರಭು ಅವರು ಭಾರತ ಸರ್ಕಾರದ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಕೊಡಲಾಗುವ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಯನ್ನು  2020 ಜನವರಿ 22ರ ಬುಧವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದರು.

ವಿಜ್ಞಾನ ಕ್ಷೇತ್ರದಲ್ಲಿ ವಿಶ್ವಾದ್ಯಂತ ಗಮನ ಸೆಳೆದ ಬಾಲ ಪ್ರತಿಭೆ ಸುನೀತಾ ಅವರು . ೨೬ರಂದು ಗಣರಾಜ್ಯೋತ್ಸವ ಪೆರೇಡಿನಲ್ಲಿ  ಭಾಗವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಆಗುವ ಅವಕಾಶವನ್ನು ಪಡೆದಿದ್ದಾರೆ.

ಬೆಳ್ತಂಗಡಿಯ ಉದ್ಯಮಿ ವಿವೇಕಾನಂದ ಪ್ರಭು ಮತ್ತು ಶಾಂತಲಾ ಪ್ರಭು ದಂಪತಿಯ ಪುತ್ರಿ ಸುನೀತಾ ಪ್ರಭು ಪ್ರಸ್ತುತ  ಮಂಗಳೂರಿನ ಸಿ.ಎಫ್..ಎಲ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಈಕೆ ಉಜಿರೆ ಎಸ್ಡಿಎಂ ಆಂಗ್ಲ ಮಾಧ್ಯಮ ಶಾಲೆಯ (ಸಿಬಿಯಸ್ಸಿ) ಹಳೆ ವಿದ್ಯಾರ್ಥಿನಿ.

ಡೆಂಗ್ಯೂ ಮತ್ತು ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸುನೀತಾ ಪ್ರಭು ಅವರು ಅನ್ವೇಷಿಸಿರುವ ಸೊಳ್ಳೆ ನಿವಾರಕ ಸಾಧನವನ್ನು ಪುಣೆಯ ..ಎಸ್..ಆರ್. ಮತ್ತು ಎನ್.ಸಿ.ಎಲ್.ನಲ್ಲಿ ಪರೀಕ್ಷಿಸಿ ಅಭಿವೃದ್ದಿ ಪಡಿಸಲಾಗಿದ್ದು,  ಕಡಿಮೆ ವೆಚ್ಚದ ಸಾಧನ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ  ಮಹತ್ತರ  ಕಾಣಿಕೆ ನೀಡಿದೆ.
ಇದೇ ಪ್ರಾಜೆಕ್ಟ್ ೨೦೧೮ ರಲ್ಲಿ ದೆಹಲಿಯಲ್ಲಿ ನಡೆದ .ಆರ್..ಎಸ್. ರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ರಾಷ್ಟ್ರೀಯ ಗ್ರ್ಯಾಂಡ್ ಪ್ರಶಸ್ತಿ ಗಳಿಸಿತ್ತು.. ೨೦೧೯ರಲ್ಲಿ ಫಿನೀಕ್ಸ್ (ಅಮೇರಿಕಾದಲ್ಲಿ) ನಡೆದ ೮೦ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ಸುನೀತಾ ಅವರಿಗೆ ಈ ಬಾಲ ಪುರಸ್ಕಾರ ಲಭಿಸಿದೆ.

ಹಿಂದೆ  ಸುನೀತಾ  ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ಸಿನಲ್ಲಿ  ಭಾಗವಹಿಸಿ ವಿಜ್ಞಾನ, ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿ ಆವಿಷ್ಕಾರದ ಮೇಲೆ ಪ್ರಾಜೆಕ್ಟ್ ಮಂಡಿಸಿದ್ದರು. ಇದಲ್ಲದೆ ಇವರ ಸಂಶೋಧನೆಯ ರಿಮೋಟ್ ಕಂಟ್ರೋಲ್ ರಬ್ಬರ್ ಟ್ಯಾಪಿಂಗ್ ಯಂತ್ರವು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿತ್ತು.  ಬೆಂಗಳೂರಿನ ಶಿಕ್ಷಕರ ಭವನದಲ್ಲಿ ನಡೆದ ರಾಷ್ಟ್ರ ಮಟ್ಟದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸ್ಪರ್ಧೆಯಲ್ಲಿಯೂ ಪ್ರಾಜೆಕ್ಟನ್ನು  ಸುನೀತಾ  ಮಂಡಿಸಿದ್ದರು

No comments:

Advertisement