Saturday, January 11, 2020

ಕಾಶ್ಮೀರ: ೨೬ ಮಂದಿಯ ಬಂಧನ ಆದೇಶ ವಾಪಸ್

ಕಾಶ್ಮೀರ: ೨೬ ಮಂದಿಯ ಬಂಧನ ಆದೇಶ ವಾಪಸ್
ನವದೆಹಲಿ: ನೂತನ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿವಿಧ ಸೆರೆಮನೆಗಳಲ್ಲಿ ಬಂಧಿಸಿ ಇಡಲಾಗಿರುವ ೨೬ ಮಂದಿಯ ವಿರುದ್ಧದ ಕಠಿಣ ಸಾರ್ವಜನಿಕ ಸುರಕ್ಷಾ ಕಾಯ್ದೆಯನ್ನು ಆಡಳಿತವು  2020 ಜನವರಿ 09ರ ಶುಕ್ರವಾರ ರದ್ದು ಪಡಿಸಿತು.

ಪ್ರದೇಶದ
ಪರಿಸ್ಥಿತಿಯನ್ನು ಸಹಜಗೊಳಿಸುವ ನಿಟ್ಟಿನಲ್ಲಿ ಕೇಂದ್ರಾಡಳಿತವು ನಡೆಸಿರುವ ಯತ್ನ ಇದು ಎಂದು ಭಾವಿಸಲಾಯಿತು..

೨೦೧೮ರ
ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ವ್ಯಕ್ತಿಗಳನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು.

ಕಳೆದ
ಡಿಸೆಂಬರಿನಲಿ ಒಬ್ಬ ರಾಜ್ಯ ಸಚಿವ ಮತ್ತು ಮೂವರು ಮಾಜಿ ಶಾಸಕರು ಸೇರಿದಂತೆ ಐವರು ರಾಜಕಾರಣಿಗಳನ್ನು ರಾಜ್ಯ ಆಡಳಿತವು ಬಿಡುಗಡೆ ಮಾಡಿತ್ತು.

No comments:

Advertisement