Saturday, January 18, 2020

ನಿರ್ಭಯಾ ಪ್ರಕರಣ: ಹೊಸ ’ಡೆತ್ ವಾರಂಟ್ ’ ಜಾರಿ, ಫೆ. ೧ರಂದು ಬೆಳಗ್ಗೆ ಗಲ್ಲು

ನಿರ್ಭಯಾ ಪ್ರಕರಣ:  ಹೊಸ 'ಡೆತ್ ವಾರಂಟ್ಜಾರಿ, ಫೆ. ೧ರಂದು ಬೆಳಗ್ಗೆ  ಗಲ್ಲು 
ರಾಷ್ಟ್ರಪತಿಯಿಂದ ಕ್ಷಮಾದಾನ ಅರ್ಜಿ ವಜಾ, ಸುಪ್ರೀಂ ಮೆಟ್ಟಿಲೇರಿದ ಪವನ್ ಗುಪ್ತ
ನವದೆಹಲಿ: ೨೦೧೨ರ ಡಿಸೆಂಬರ್ ತಿಂಗಳ ರಾತ್ರಿ ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ನಡೆದ ೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿನಿರ್ಭಯಾಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಧಿಸಲಾಗಿರುವ ಮರಣದಂಡನೆಯ ಜಾರಿಗಾಗಿ ದೆಹಲಿಯ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಅವರು 2020 ಜನವರಿ  17ರ ಶುಕ್ರವಾರ ಹೊಸದಾಗಿಡೆತ್ ವಾರಂಟ್ಜಾರಿಗೊಳಿಸಿದ್ದು, ಅಪರಾಧಿಗಳನ್ನು ಗಲ್ಲಿಗೇರಿಸಲು ಫೆಬ್ರುವರಿ ೧ರ ದಿನಾಂಕವನ್ನು ನಿಗದಿ ಪಡಿಸಲಾಯಿತು.

ಹಿಂದೆ ಜನವರಿ ೨೨ರಂದು ಬೆಳಗ್ಗೆ ಗಂಟೆಗೆ ಗಲ್ಲು ಶಿಕ್ಷೆ ಜಾರಿಗೊಳಿಸುವಂತೆ ತಿಂಗಳ ಆದಿಯಲ್ಲಿಬ್ಲ್ಯಾಕ್ ವಾರಂಟ್ಜಾರಿಗೊಳಿಸಿದ್ದ ನ್ಯಾಯಾಧೀಶರು,  ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಮುಖೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕೃತವಾಗಿರುವ ಬಗ್ಗೆ ತಿಳಿಸಿದ ಬಳಿಕ ಶುಕ್ರವಾರ ಹೊಸದಾಗಿಡೆತ್ ವಾರಂಟ್ಎಂದೇ ಪರಿಗಣಿಸಲಾಗುವಬ್ಲ್ಯಾಕ್ ವಾರಂಟ್ಜಾರಿಗೊಳಿಸಿದರು.

ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಅವರು ನೂತನ ವಾರಂಟ್ಗೆ ಸಹಿ ಹಾಕುವುದಕ್ಕೆ ಕೆಲವೇ ನಿಮಿಷಗಳ ಮುನ್ನ ನಡೆದ ವಿಚಾರಣೆ ವೇಳೆಯಲ್ಲಿ ಅಪರಾಧಿಗಳು ಸಲ್ಲಿಸಿದ ಇನ್ನೆರಡು ಮೇಲ್ಮನವಿಗಳು ಉನ್ನತ ನ್ಯಾಯಾಲಯಗಳಲ್ಲಿ ಈಗಲೂ ವಿಚಾರಣೆಗಾಗಿ ಬಾಕಿ ಉಳಿದಿವೆ ಎಂದು ವಕೀಲರು ತಿಳಿಸಿದರು.

ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತ ಸುಪ್ರೀಂಕೋರ್ಟಿನಲ್ಲಿ ವಿಶೇಷ ಅರ್ಜಿಯನ್ನು (ಸ್ಪೆಷಲ್ ಲೀವ್ ಪಿಟಿಷನ್- ಎಸ್ ಎಲ್ ಪಿ) ಸಲ್ಲಿಸಿ ಅಪರಾಧ ಸಂಭವಿಸಿದ ಸಮಯದಲ್ಲಿ ತಾನು ಅಪ್ರಾಪ್ತ ವಯಸ್ಕನಾಗಿದ್ದುದಾಗಿ ಪ್ರತಿಪಾದಿಸಿದ್ದಾನೆ. ಪವನ್ ಗುಪ್ತ ಇದೇ ಪ್ರತಿಪಾದನೆಯನ್ನು ದೆಹಲಿ ಹೈಕೋರ್ಟಿನ ಮುಂದೆಯೂ ಮಾಡಿದ್ದು, ಹೈಕೋರ್ಟ್ ಆತನ ಅರ್ಜಿಯನ್ನು ವಜಾಗೊಳಿಸಿದ್ದಲ್ಲದೆ ಅದನ್ನು ದಾಖಲಿಸಿದ ವಕೀಲರಿಗೆ ೨೫,೦೦೦ ರೂಪಾಯಿಗಳ ದಂಡವನ್ನೂ ವಿಧಿಸಿತ್ತು.

ಅರೋರಾ ಅವರು ವಕೀಲರು ಮಾಡಿದ ಮನವಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮರಣದಂಡನೆ ಜಾರಿಗೆ ನೂತನ ದಿನಾಕವನ್ನು ಘೋಷಿಸಿದರು.

ನಾನು ಫೆಬ್ರುವರಿ ೧ರಂದು ಬೆಳಗ್ಗೆ ಗಂಟೆಗಾಗಿ ಹೊಸ ಡೆತ್ ವಾರಂಟ್ ಜಾರಿಗೊಳಿಸುತ್ತಿದ್ದೇನೆಎಂದು ಒಂದು ವಾಕ್ಯದ ಆದೇಶದಲ್ಲಿ ಅವರು ತಿಳಿಸಿದರು.

ನಿರ್ಭಯಾ ತಾಯಿ ಭ್ರಮನಿರಸನ: ಕಳೆದ ಏಳು ವರ್ಷಗಳಿಂದ ಪ್ರಕರಣದ ಬೆನ್ನು ಹತ್ತಿರುವ ನಿರ್ಭಯಾಳ ತಾಯಿ ಬೆಳವಣಿಗೆಗಳಿಂದಾಗಿ ಭ್ರಮನಿರಸನಗೊಂಡಿದ್ದಾರೆ.

ನಾನು ಹೋರಾಡುತ್ತೇನೆ ಮತ್ತು ಹೋರಾಟ ಮಾಡುತ್ತಲೇ ಇರುತ್ತೇನೆ... ನಾನು ಕಾಯುತ್ತೇನೆಎಂದು ನ್ಯಾಯಾಧೀಶರು ಹಿಂದು ಜಾರಿಗೊಳಿಸಲಾಗಿದ್ದ ಜನವರಿ ೨೨ರ ಡೆತ್ ವಾರಂಟನ್ನು ರದ್ದುಪಡಿಸಿದಾಗ ತೀವ್ರ ಭ್ರಮನಿರಸನಗೊಂಡ ಅವರು ಹೇಳಿದ್ದರು.

ಇದಕ್ಕೂ ಮುನ್ನ ನಿರ್ಭಯಾ ಪ್ರಕರಣದ ಬಗ್ಗೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು (ಆಪ್) ರಾಜಕೀಯ ಕೆಸರು ಎರಚಾಟ ನಡೆಸಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದ ಅವರು ಬಗ್ಗೆ ಪ್ರತಿಕ್ರಿಯಿಸಲು ತಾವು ಇಚ್ಛಿಸುವುದಿಲ್ಲ ಎಂದು ಹೇಳಿದ್ದರು.

ಸುಪ್ರೀಂಕೋರ್ಟಿಗೆ ಹೊಸ ವಿಶೇಷ ಅರ್ಜಿ: ಮಧ್ಯೆ, ನಿರ್ಭಯಾ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳನ್ನು ೨೦೨೦ ಜನವರಿ ೨೨ರಂದು ಬೆಳಗ್ಗೆ ಗಂಟೆಗೆ ಗಲ್ಲಿಗೇರಿಸಲುಡೆತ್ ವಾರಂಟ್ಜಾರಿಯಾದ ಬಳಿಕ, ಗಲ್ಲುಗಂಭ ಏರುವುದನ್ನು ತಪ್ಪಿಸಿಕೊಳ್ಳಲು ನಿರಂತರವಿಳಂಬ ತಂತ್ರಗಳನ್ನು ಹೆಣೆಯುತ್ತಿರುವಂತೆ ಕಂಡು ಬಂದಿದ್ದು, ಮುಖೇಶ್ ಸಿಂಗ್ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಕೆಯ ಬಳಿಕ ಇದುವರೆಗೆ ತೆಪ್ಪಗಿದ್ದ ಪವನ್ ಗುಪ್ತ ಇದೀಗ ಶುಕ್ರವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ.

ವಿಚಾರಣಾ ನ್ಯಾಯಾಲಯವುಡೆತ್ ವಾರಂಟ್ಜಾರಿಗೊಳಿಸಿದ ಬಳಿಕ ಅಪರಾಧಿಗಳ ಪೈಕಿ ಒಬ್ಬನಾದ ಮುಖೇಶ್ ಸಿಂಗ್ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದು, ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ತಿರಸ್ಕರಿಸಿದರು.

ಆದರೆ ಕ್ಷಮಾದಾನ ಕೋರಿಕೆ ಅರ್ಜಿ ತಿರಸ್ಕೃತವಾದ ಬಳಿಕ ಗಲ್ಲಿಗೇರಿಸಲು ೧೪ ದಿನಗಳ ಅಂತರ ಇರಬೇಕು ಎಂಬ ಸೆರೆಮನೆ ನಿಯಮಾವಳಿಗಳ ಪ್ರಕಾರ ನಿಗದಿತ ದಿನವಾದ ಜನವರಿ ೨೨ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯವೇ ಗುರುವಾರ ತಿಳಿಸಿತ್ತು. ಅಲ್ಲದ ಗಲ್ಲಿಗೆ ಏರಿಸುವ ಸಂಬಂಧ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಸುಪ್ರೀಂಕೋರ್ಟಿಗೆ ಪವನ್ ಗುಪ್ತ ವಿಶೇಷ ಅರ್ಜಿ: ೨೦೧೨ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ, ಅದರ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಗಳು ವಜಾಗೊಂಡ ಬಳಿಕ ಈವರೆಗೂ ಸುಮ್ಮನಿದ್ದ ಪವನ್ ಗುಪ್ತ ಶುಕ್ರವಾರ ಸುಪ್ರೀಕೋಟ್ ಮೆಟ್ಟಿಲೇರಿ ೨೦೧೨ರಲ್ಲಿ ತಾನು ಅಪ್ರಾಪ್ತ ವಯಸ್ಕನಾಗಿದ್ದೆ, ಆದ್ದರಿಂದ ಅಪ್ರಾಪ್ತ ವಯಸ್ಸಿನ ವ್ಯಕ್ತಿಗಳಿಗೆ ಸಂಬಂಧಿಸಿದ ಕಾನೂನಿಗೆ ಅನುಗುಣವಾಗಿ ತನ್ನ ವಿಚಾರಣೆ ನಡೆಯಬೇಕು ಎಂದು ಕೋರಿದ್ದಾನೆ.

ಡಿಸೆಂಬರ್ ೧೯ರಂದು ದೆಹಲಿ ಹೈಕೋರ್ಟ್ ಆದೇಶವನ್ನು ಪವನ್ ಗುಪ್ತ ತನ್ನ ವಕೀಲ ಎಪಿ ಸಿಂಗ್ ಮೂಲಕ ಪ್ರಶ್ನಿಸಿದ್ದಾನೆ.

ದೆಹಲಿಯಲಿ ನಡೆದ ೨೦೧೨ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮುಖೇಶ್ ಸಿಂಗ್, ವಿನಯ್ ಶರ್ಮ, ಅಕ್ಷಯ್ ಕುಮಾರ್ ಸಿಂಗ್, ಪವನ್ ಗುಪ್ತ, ರಾಮ್ ಸಿಂಗ್  ಮತ್ತು ಒಬ್ಬ ಅಪ್ರಾಪ್ತ ವಯಸ್ಕ ಸೇರಿದಂತೆ ಒಟ್ಟು ಮಂದಿಯನ್ನು ೨೦೧೨ರಲ್ಲಿ ೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ಎಂಬುದಾಗಿ ಹೆಸರಿಸಲಾಗಿತ್ತು.

ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಅಮಾನವೀಯ ಹಲ್ಲೆ ನಡೆಸಿದ ಬಳಿಕ ಯುವತಿಯನ್ನು ಬಸ್ಸಿನಿಂದ ಹೊರಕ್ಕೆ ಎಸೆಯಲಾಗಿತ್ತು. ’ನಿರ್ಭಯಾಎಂಬುದಾಗಿ ಹೆಸರಿಸಲಾದ ನತದೃಷ್ಟ ಯುವತಿ ತೀವ್ರ ಗಾಯಗಳ ಪರಿಣಾಮವಾಗಿ ಜೀವನ್ಮರಣ ಹೋರಾಟ ನಡೆಸಿ ಡಿಸೆಂಬರ್ ೨೯ರಂದು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಅಪರಾಧ ಪ್ರಕರಣದ ಕ್ರೌರ್ಯಕ್ಕೆ ಇಡೀ ದೇಶವೇ ಆಘಾತಗೊಂಡಿತ್ತು. ಮತ್ತು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಮತ್ತು ಪ್ರಕರಣದ ತ್ವರಿತ ವಿಚಾರಣೆಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದಿದ್ದವು. ವಿಶೇಷ ತ್ವರಿತ ನ್ಯಾಯಾಲಯದಲ್ಲಿ ಐವರು ಪ್ರಾಪ್ತ ವಯಸ್ಸಿನ ಆರೋಪಿಗಳ ವಿಚಾರಣೆ ೨೦೧೩ರ ಮಾರ್ಚ್ ತಿಂಗಳಲ್ಲಿ ಆರಂಭವಾಗಿತ್ತು.

ವಿಚಾರಣೆ ಆರಂಭವಾದ ಕೆಲ ದಿನಗಳ ಬಳಿಕ ಮುಖ್ಯ ಆರೋಪಿ ರಾಮ್ ಸಿಂಗ್ ತಿಹಾರ್ ಸೆರೆಮನೆಯಲ್ಲೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಎಲ್ಲ ಆರೋಪಿಗಳಿಗಿಂತ ಹೆಚ್ಚು ಕ್ರೌರ್ಯ ಪ್ರದರ್ಶಿಸಿದ್ದ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಸುಧಾರಣಾ ಗೃಹದಲ್ಲಿ ಮೂರು ವರ್ಷಗಳ ಕಾಲ ಬಂಧನಕ್ಕೆ ಗುರಿಪಡಿಸಿದ ಬಳಿಕ ೨೦೧೫ರಲ್ಲಿ ಆತನಿಗೆ ೨೦ ವರ್ಷವಾದಾಗ ಆತನ ಜೀವಕ್ಕೆ ಅಪಾಯವಾಗಬಹುದೆಂಬ ಕಾರಣಕ್ಕಾಗಿ ರಹಸ್ಯ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು.

ಮುಖೇಶ್, ವಿನಯ್, ಅಕ್ಷಯ್ ಮತ್ತು ಪವನ್ ಅವರಿಗೆ ೨೦೧೩ರ ಸೆಪ್ಟೆಂಬರ್ ತಿಂಗಳಲ್ಲಿ ಮರಣದಂಡನೆ ವಿಧಿಸಲಾಗಿತ್ತು. ವಿಚಾರಣಾ ನ್ಯಾಯಾಧೀಶರು ಜಾರಿಗೊಳಿಸಿದ ಮೊದಲ ಡೆತ್ ವಾರಂಟ್ ಪ್ರಕಾರ ಅವರನ್ನು ಜನವರಿ ೨೨ರಂದು ಬೆಳಗ್ಗೆ ಗಂಟೆಗೆ ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೆ ಏರಿಸಬೇಕಾಗಿತ್ತು. 
ಏನಿದ್ದರೂ, ಮುಖೇಶ್ ಸಿಂಗ್ ಸಲ್ಲಿಸಿದ ಕ್ಷಮಾದಾನ ಕೋರಿಕೆ ಅರ್ಜಿಯ ವಿಚಾರ ಇತ್ಯರ್ಥವಾಗುವವರೆಗೆ ಗಲ್ಲು ಶಿಕ್ಷೆ ಜಾರಿ ಸಾಧ್ಯವಿಲ್ಲ ಎಂದು ದೆಹಲಿ ಸರ್ಕಾರವು ದೆಹಲಿ ಹೈಕೋರ್ಟಿಗೆ ತಿಳಿಸಿತ್ತು. ಆದಾಗ್ಯೂ ಮುಖೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸುವಂತೆ ಶಿಫಾರಸು ಮಾಡಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಕಚೇರಿಯು ಕಡತವನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿತ್ತು. ಗೃಹ ಇಲಾಖೆ ಕೂಡಾ ಅರ್ಜಿ ತಿರಸ್ಕರಿಸುವಂತೆ ಶಿಫಾರಸು ಮಾಡಿ ಕಡತವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕಳುಹಿಸಿತ್ತು. ರಾಷ್ಟ್ರಪತಿಯವರು ಅದನ್ನು ಶುಕ್ರವಾರ ತಿರಸ್ಕರಿಸಿದ್ದರು.

No comments:

Advertisement