ಮೂಲ ಸವಲತ್ತು
ಅಭಿವೃದ್ಧಿಗೆ 'ಮಹಾ' ಒತ್ತು, ೧೦೫ ಲಕ್ಷ ಕೋಟಿ ರೂ ಹೂಡಿಕೆ
೫ ವರ್ಷದಲ್ಲಿ
೫ ಟ್ರಿಲಿಯನ್ ಡಾಲರ್ ಜಿಡಿಪಿ ಸಾಧನೆಗೆ ಕ್ರಮ: ನಿರ್ಮಲಾ ಸೀತಾರಾಮನ್ ಪ್ರಕಟಣೆ
ನವದೆಹಲಿ: ೨೦೨೪-೨೫ರ ವೇಳೆಗೆ ೫ ಟ್ರಿಲಿಯನ್ ಅಮೆರಿಕನ್
ಡಾಲರ್ ಜಿಡಿಪಿ ಗುರಿ ಸಾಧನೆಗಾಗಿ ಮುಂದಿನ ಐದು ವರ್ಷಗಳಲ್ಲಿ ಮೂಲಸವಲತ್ತು ಕ್ಷೇತ್ರದಲ್ಲಿ ಹೂಡಿಕೆಯನ್ನು
ದುಪ್ಪಟ್ಟುಗೊಳಿಸುವ ಯೋಜನೆಯನ್ನು 2019 ಡಿಸೆಂಬರ್ 31ರ ಮಂಗಳವಾರ ಇಲ್ಲಿ ಅನಾವರಣಗೊಳಿಸಿದ ಕೇಂದ್ರ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ’ಮೂಲಸವಲತ್ತು ಕ್ಷೇತ್ರದಲ್ಲಿ ೧೦೫ ಲಕ್ಷ ಕೋಟಿ ರೂಪಾಯಿಗಳನ್ನು
ಹೂಡಿಕೆ ಮಾಡಲಾಗುವುದು’ಎಂದು ಪ್ರಕಟಿಸಿದರು.
ಮೂಲಸವಲತ್ತು
ನೀಲನಕ್ಷೆ ರೂಪಿಸಲು ರಚಿಸಲಾಗಿದ್ದ ಕಾರ್ಯಪಡೆ ವರದಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ
ಸಚಿವೆ ಸೀತಾರಾಮನ್ ಅವರು ಮುಂದಿನ ೫ ವರ್ಷಗಳಲ್ಲಿ ಮೂಲ ಸವಲತ್ತು ಕ್ಷೇತ್ರಕ್ಕೆ ೧೦೦ ಲಕ್ಷ ಕೋಟಿ ರೂಪಾಯಿಗಳ
ಹೂಡಿಕೆ ಮೂಲಕ ಒತ್ತು ನೀಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಯೋಚನೆಗೆ ಅನುಗುಣವಾಗಿ ವಿಸ್ತೃತ
ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಯೋಜನೆಯ ಪ್ರಕಾರ
೨.೫ ಲಕ್ಷ ಕೋಟಿ ರೂಪಾಯಿಗಳ ಬಂದರು ಮತ್ತು ವಿಮಾನ ನಿಲ್ದಾಣ ಯೋಜನೆಗಳು, ೩.೨ ಲಕ್ಷ ಕೋಟಿ ರೂಪಾಯಿಗಳ
ಡಿಜಿಟಲ್ ಮೂಲಸವಲತ್ತು ಯೋಜನೆಗಳು, ೧೬ ಲಕ್ಷ ಕೋಟಿ ರೂಪಾಯಿಗಳ ಗ್ರಾಮೀಣ, ಕೃಷಿ ಮತ್ತು ಆಹಾರ ಸಂಸ್ಕರಣೆ
ಯೋಜನೆಗಳನ್ನು ಗುರುತಿಸಲಾಗಿದೆ. ಚಲನಶೀಲತಾ ಯೋಜನೆಗಳು ಸೇರಿದಂತೆ ೧೬ ಲಕ್ಷ ಕೋಟಿ ರೂಪಾಯಿಗಳ ಮೂಲ
ಸವಲತ್ತು ಯೋಜನೆಗಳನ್ನು ಮೂಲಸವಲತ್ತು ರಾಷ್ಟ್ರೀಯ ಮೂಲಸವಲತ್ತು ಕೊಳವೆಮಾರ್ಗ (ನ್ಯಾಷನಲ್ ಇನ್‌ಫ್ರಾಸ್ಟ್ರಕ್ಚರ್
ಪೈಪ್‌ಲೈನ್- ಎನ್‌ಐಪಿ) ಯೋಜನೆಗಳಿಗೆ ಸೇರ್ಪಡೆ ಮಾಡಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದರು.
ರಾಷ್ಟ್ರೀಯ
ಮೂಲಸವಲತ್ತು ಕೊಳವೆಮಾರ್ಗ ಹೂಡಿಕೆಯಲ್ಲಿ ಶೇಕಡಾ ೨೨-೨೫ರಷ್ಟನ್ನು ಖಾಸಗಿರಂಗವು ಹಂಚಿಕೊಳ್ಳಲಿದೆ.
ಕೇಂದ್ರ ಮತ್ತು ರಾಜ್ಯಗಳು ಉಳಿದ ವೆಚ್ಚವನ್ನು ಸರಿಸಮವಾಗಿ ಹಂಚಿಕೊಳ್ಳಲಿವೆ ಎಂದು ವಿತ್ತ ಸಚಿವರು
ಹೇಳಿದರು.
ಸುಮಾರು ೨೦
ಲಕ್ಷ ಕೋಟಿ ರೂಪಾಯಿ ಮೊತ್ತದ ರಸ್ತೆ ಮತ್ತು ೧೪ ಲಕ್ಷ ಕೋಟಿ ರೂಪಾಯಿ ಮೊತ್ತದ ರೈಲ್ವೇ ಯೋಜನೆಗಳು ಕೂಡಾ
ಎನ್‌ಐಪಿಗೆ ಸೇರ್ಪಡೆಯಾಗಿವೆ. ಸುಮಾರು ೨೫ ಲಕ್ಷ ಕೋಟಿ ರೂಪಾಯಿ ಮೊತ್ತದ ಇಂಧನ ಯೋಜನೆಗಳು ಕೂಡಾ ರಾಷ್ಟ್ರೀಯ
ಮೂಲ ಸವಲತ್ತು ಕೊಳವೆಮಾರ್ಗ ಯೋಜನೆಯ ವ್ಯಾಪ್ತಿಗೆ ಬಂದಿವೆ.
ಈ ಹೂಡಿಕೆಯ
ನೆರವಿನ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ನೀಡಿದ್ದ ಭರವಸೆಯನ್ನು
ಈಡೇರಿಸಲು ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ನಿರ್ಮಲಾ ಹೇಳಿದರು.
‘ಕಾರ್ಯಪಡೆಯ
ವಿವಿಧ ಕಾರ್ಯ ತಂಡಗಳು ಕೊಟ್ಟಿರುವ ವಿವಿಧ ಸಲಹೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ’ ಎಂದೂ ಸಚಿವೆ ಹೇಳಿದರು.
‘ರೂ.೧೦೨ ಲಕ್ಷ
ಕೋಟಿ ರೂಪಾಯಿ ಮೊತ್ತದ ರಾಷ್ಟ್ರ್ರೀಯ ಮೂಲಸವಲತ್ತು ಯೋಜನೆಗಳು ಭಾರತವನ್ನು ೨೦೧೫ರ ವೇಳೆಗೆ ೫ ಟ್ರಿಲಿಯನ್
ಡಾಲರ್ ಆರ್ಥಿಕತೆಯನ್ನಾಗಿ ರೂಪಿಸಲು ನೆರವಾಗಲಿವೆ. ಮೂಲಸವಲತ್ತು ಸರ್ಕಾರವು ಗಮನ ಹರಿಸಿರುವ ಕ್ಷೇತ್ರವಾಗಿದೆ.
ಮೂಲಸವಲತ್ತು ಕೊಳವೆ ಮಾರ್ಗ (ಇನ್‌ಫ್ರಾ ಪೈಪ್‌ಲೈನ್) ರೂಪಿಸಿರುವುದು ಇದೇ ಪ್ರಥಮ. ಕಾರ್ಯಪಡೆಯು ಕೇವಲ
೪ ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿದೆ’ ಎಂದು ನಿರ್ಮಲಾ ಹೇಳಿದರು.
೧೦೨ ಲಕ್ಷ
ಕೋಟಿ ರೂಪಾಯಿಗಳ ಯೋಜನೆಗಳನ್ನು ಈಗಾಗಲೇ ಗುರುತಿಸಲಾಗಿದ್ದರೆ, ೩ ಲಕ್ಷ ಕೋಟಿ ರೂಪಾಯಿ ಮೌಲದ್ಯದ ಇನ್ನಷ್ಟು
ಯೋಜನೆಗಳನ್ನು ಮುಂದಿನ ಕೆಲವೇ ವಾರಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಅವರು ನುಡಿದರು.
ಕಳೆದ ನಾಲ್ಕು
ತಿಂಗಳುಗಳ ಅವಧಿಯಲ್ಲಿ ಸರ್ಕಾರವು ವಿವಿಧ ಮಧ್ಯಸ್ಥಗಾರರ ಜೊತೆಗೆ ೭೦ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದೆ
ಎಂದು ಸಚಿವೆ ಹೇಳಿದರು.
ಗುಣಮಟ್ಟದ
ಮೂಲಸವಲತ್ತು ಲಭ್ಯತೆಯು ಸುಸ್ಥಿರ ನೆಲೆಯ ವಿಶಾಲ ತಳಹದಿಯ ಒಳಗೊಳ್ಳುವಿಕೆಯ ಬೆಳವಣಿಗೆಗೆ ಬೇಕಾದ ಮೂಲ-ಅಗತ್ಯ
ಎಂದು ಹಣಕಾಸು ಸಚಿವಾಲಯವು ಈ ಮುನ್ನ ಹೇಳಿತ್ತು.
ಇದಕ್ಕೆ ಮುನ್ನ
ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರವು ೧೦೦ ಲಕ್ಷ ಕೋಟಿ ರೂಪಾಯಿಗಳ ಮೂಲಸವಲತ್ತು ಯೋಜನೆಯ ಅಡಿಯಲ್ಲಿ
೨೦೧೯-೨೦ರಿಂದ ೨೦೧೪-೨೫ರ ಅವಧಿಗಾಗಿ ’ರಾಷ್ಟ್ರೀಯ ಮೂಲಸವಲತ್ತು ಕೊಳವೆಮಾರ್ಗ’ (ಎನ್‌ಐಪಿ) ಯೋಜನೆಯ ಮಾರ್ಗನಕ್ಷೆ ರೂಪಿಸಲು ಆರ್ಥಿಕ ವ್ಯವಹಾರಗಳ
ಕಾರ್ಯದರ್ಶಿ ನೇತೃತ್ವದಲ್ಲಿ ಕಾರ್ಯಪಡೆಯನ್ನು ರಚಿಸಿತ್ತು.
ಕಾರ್ಯಪಡೆಯು ಹಸಿರು ಕ್ಷೇತ್ರ (ಗ್ರೀನ್ ಫೀಲ್ಡ್ ) ಮತ್ತು ಕಂದು ಕ್ಷೇತ್ರ (ಬೌನ್ ಫೀಲ್ಡ್) ಯೋಜನೆಗಳು ಸೇರಿದಂತೆ ತಲಾ ೧೦೦ಕೋಟಿ ರೂಪಾಯಿ ವೆಚ್ಚದ ೧೦ ಪ್ರಮುಖ ಮೂಲಸವಲತ್ತು ಯೋಜನೆಗಳ ಪಟ್ಟಿಯನ್ನು ರೂಪಿಸುತ್ತಿದೆ.
ಕಾರ್ಯಪಡೆಯು ಹಸಿರು ಕ್ಷೇತ್ರ (ಗ್ರೀನ್ ಫೀಲ್ಡ್ ) ಮತ್ತು ಕಂದು ಕ್ಷೇತ್ರ (ಬೌನ್ ಫೀಲ್ಡ್) ಯೋಜನೆಗಳು ಸೇರಿದಂತೆ ತಲಾ ೧೦೦ಕೋಟಿ ರೂಪಾಯಿ ವೆಚ್ಚದ ೧೦ ಪ್ರಮುಖ ಮೂಲಸವಲತ್ತು ಯೋಜನೆಗಳ ಪಟ್ಟಿಯನ್ನು ರೂಪಿಸುತ್ತಿದೆ.
ಒಟ್ಟು ೧೦೫
ಲಕ್ಷ ಕೋಟಿ ರೂಪಾಯಿಗಳ ಮೂಲಸವಲತ್ತು ಯೋಜನೆಗಳನ್ನು ನಾವು ಪಡೆಯಲಿದ್ದೇವೆ ಎಂದು ಸೀತಾರಾಮನ್ ಹೇಳಿದರು.
ಕಳೆದ ಆರು
ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು ಮೂಲಸವಲತ್ತು ಕ್ಷೇತ್ರದಲ್ಲಿ ಅಂದಾಜು ೫೧ ಲಕ್ಷ ಕೋಟಿ ರೂಪಾಯಿಗಳನ್ನು
ಹೂಡಿಕೆ ಮಾಡಿದು, ಮುಂದಿನ ಐದು ವರ್ಷಗಳಲ್ಲಿ ಇದು ದುಪ್ಪಟ್ಟಾಗಲಿದೆ ಎಂದು ಅವರು ನುಡಿದರು.
ರಾಷ್ಟ್ರೀಯ
ಮೂಲಸವಲತ್ತು ಕೊಳವೆ ಮಾರ್ಗವು (ಎನ್‌ಐಪಿ) ತಲಾ ಶೇಕಡಾ ೩೯ರಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ
ಯೋಜನೆಗಳು ಮತ್ತು ಉಳಿದ ಶೇಕಡಾ ೨೨ರಷ್ಟು ಖಾಸಗಿ ರಂಗದ ಯೋಜನೆಗಳನ್ನು ಹೊಂದಿದೆ. ೨೦೧೫ರ ವೇಳೆಗೆ ಖಾಸಗಿ
ರಂಗದ ಕಾಣಿಕೆ ಶೇಕಡಾ ೩೦ಕ್ಕೆ ಏರುವುದು ಎಂಬುದು ನಮ್ಮ ನಿರೀಕ್ಷೆ ಎಂದು ಸೀತಾರಾಮನ್ ಹೇಳಿದರು. ಈ
ವಿಷಯಕ್ಕೆ ಸಂಬಂಧಿಸಿದಂತೆ ೨೦೨೦ರ ಉತ್ತರಾರ್ಧದಲ್ಲಿ ವಾರ್ಷಿಕ ಜಾಗತಿಕ ಹೂಡಿಕೆ ಸಮಾವೇಶ ನಡೆಯಲಿದೆ
ಎಂದು ಅವರು ನುಡಿದರು.
ಕಾರ್ಯಪಡೆಯು
ಗುರುತಿಸಿರುವ ಕ್ಷೇತ್ರಗಳಲ್ಲಿ ಇಂಧನ, ರೈಲ್ವೇ, ನಗರ ನೀರಾವರಿ, ಚಲನಶೀಲತೆ, ನವೀಕರಿಸಬಹುದಾದ ಇಂಧನ, ನಗರ ಅಭಿವೃದ್ಧಿ, ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ಕೂಡಾ
ಸೇರಿವೆ.
ಏನಿದು ’ನಿಪ್’ (ಎನ್‌ಐಪಿ)?
ಏನಿದು ’ನಿಪ್’ (ಎನ್‌ಐಪಿ)?
ರಾಷ್ಟ್ರೀಯ
ಮೂಲಸವಲತ್ತುಗಳ ಅಭಿವೃದ್ಧಿಗಾಗಿ ರಾಷ್ಟ್ರಮಟ್ಟದ ಕ್ರೋಡೀಕೃತ ಯೋಜನೆ ಇದಾಗಿದೆ. ಪ್ರಸ್ತಾಪಿದ ರಾಷ್ಟ್ರೀಯ
ಮೂಲಸವಲತ್ತು ಕೊಳವೆಮಾರ್ಗ (ನ್ಯಾಷನಲ್ ಇನ್ ಫ್ರಾಸ್ಟ್ರಕ್ಟರ್ ಪೈಪ್ ಲೈನ್ -ಎನ್‌ಐಪಿ- ನಿಪ್) ಸಮನ್ವಯ
ವ್ಯವಸ್ಥೆಯು ಸರ್ಕಾರಿ ಮತ್ತು ಖಾಸಗಿ ರಂಗಗಳನ್ನು ಒಳಗೊಂಡಿದ್ದು ಯೋಜನೆಗಳ ಅನುಷ್ಠಾನಕ್ಕೆ ವಿಸ್ತೃತವಾದ
ಕಾರ್ಯಕ್ರಮ, ಮಾಹಿತಿ ಹಾಗೂ ನಿಗಾ ಚೌಕಟ್ಟುಗಳನ್ನು ಹೊಂದಿದೆ.
೨೧ ಸಚಿವಾಲಯಗಳು,
೧೮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆಗಳು ಕಾರ್ಯಗತಗೊಳ್ಳಲಿವೆ.
ಪ್ರಸ್ತುತ
ಖಚಿತಗೊಳಿಸಲಾಗಿರುವ ೧೦೨ ಲಕ್ಷ ಕೋಟಿ ರೂಪಾಯಿ ಯೋಜನೆಗಳಲ್ಲದೆ ಇನ್ನೂ ೩ ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳೂ
ಇದಕ್ಕೆ ಸೇರ್ಪಡೆಯಾಗಲಿವೆ.
No comments:
Post a Comment