ತಾಕತ್ತಿದ್ದರೆ
ಪಾಕಿಸ್ತಾನದ ದೌರ್ಜನ್ಯಗಳ ವಿರುದ್ಧ ದನಿ ಎತ್ತಿ
ಪೌರತ್ವ
ಕಾಯ್ದೆ ವಿರೋಧಕ್ಕೆ ಪ್ರಧಾನಿ ಕಿಡಿ, ಕಾಂಗ್ರೆಸ್ಸಿಗೆ ತರಾಟೆ
ತುಮಕೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧ 2020 ಜನವರಿ 02ರ ಗುರುವಾರ
ಇಲ್ಲಿ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ ಅವರು ’ಹಾಲಿ ಪ್ರತಿಭಟನೆಗಳು ಸಂಸತ್ತಿನ ವಿರುದ್ಧ’ ಎಂದು ಟೀಕಿಸಿ, ಕಳೆದ ೭೦ ವರ್ಷಗಳಿಂದ ತನ್ನ
ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳನ್ನು ಎಸಗುತ್ತಿರುವ ಪಾಕಿಸ್ತಾನದ ವಿರುದ್ಧ ದನಿ ಎತ್ತರಿಸಿ ಎಂದು ಕಾಂಗ್ರೆಸ್ ಮತ್ತು ಇತರ ಪ್ರತಿಭಟನಕಾರರಿಗೆ ಕರೆ ನೀಡಿದರು.
ಇಲ್ಲಿನ ಸಿದ್ದಗಂಗೆಯಲ್ಲಿ ಲಿಂಗೈಕ್ಯ ಸಿದ್ದಗಂಗಾ ಶಿವಕುಮಾರ ಸ್ವಾಮಿಯವರ ಗದ್ದುಗೆಗೆ ನಮನ ಸಲ್ಲಿಸಿದ ಪ್ರಧಾನಿ, ಬಳಿಕ ಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು.
ಇಲ್ಲಿನ ಸಿದ್ದಗಂಗೆಯಲ್ಲಿ ಲಿಂಗೈಕ್ಯ ಸಿದ್ದಗಂಗಾ ಶಿವಕುಮಾರ ಸ್ವಾಮಿಯವರ ಗದ್ದುಗೆಗೆ ನಮನ ಸಲ್ಲಿಸಿದ ಪ್ರಧಾನಿ, ಬಳಿಕ ಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು.
‘ಭಾರತದಲ್ಲಿ
ಆಶ್ರಯ ಕೋರಿ ಬಂದಿರುವ ನೆರೆಯ ರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ರಕ್ಷಣೆ ಮತ್ತು ಬೆಂಬಲ ನೀಡುವುದು ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರೀಯ ಹೊಣೆಗಾರಿಕೆ’ ಎಂದು
ಪ್ರಧಾನಿ ನುಡಿದರು.
ಭಾರತದ ಸಂಸತ್ತಿನ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಪಾಕಿಸ್ತಾನದ ಕುಕೃತ್ಯಗಳನ್ನು ವಿಶ್ವಮಟ್ಟದಲ್ಲಿ ಬಯಲುಗೊಳಿಸಬೇಕಾದ ಅಗತ್ಯವಿದೆ ಎಂದು ಹೇಳಲು ನಾನು ಬಯಸುತ್ತೇನೆ. ನೀವು ಪ್ರತಿಭಟಿಸಲು ಬಯಸುವಿರಾದರೆ ಕಳೆದ ೭೦ ವರ್ಷಗಳಲ್ಲಿ ಪಾಕಿಸ್ತಾನ ನಡೆಸಿರುವ ಕೃತ್ಯಗಳವಿರುದ್ಧ ದನಿಯೆತ್ತಬೇಕು ಮತ್ತು ಪ್ರತಿಭಟಿಸಬೇಕು ಎಂದು ನಾನು ಬಯಸುತ್ತೇನೆ, ನಿಮಗೆ ಅಂತಹ ಎದೆಗಾರಿಕೆ ಇರಬೇಕು’ ಎಂದು ಮೋದಿ ನುಡಿದರು.

‘ನೀವು
ಘೋಷಣೆಗಳನ್ನು ಕೂಗಲು ಬಯಸುವುದಾದರೆ ಅಲ್ಲಿ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿರುವ ರೀತಿಯ ವಿರುದ್ಧ ಘೋಷಣೆ ಕೂಗಿ. ನೀವು ರ್ಯಾಲಿ ನಡೆಸಲು
ಬಯಸುತ್ತೀರಾದರೆ ಅದನ್ನು ಪಾಕಿಸ್ತಾನದಿಂದ (ಭಾರತಕ್ಕೆ) ಬಂದಿರುವ ದಲಿತರು, ತುಳಿತಕ್ಕೆ ಒಳಗಾದವರ ಪರವಾಗಿ ಸಂಘಟಿಸಿ, ನೀವು ಧರಣಿ ನಡೆಸಲು ಬಯಸುತ್ತೀರಾದರೆ ಅದನ್ನು ಪಾಕಿಸ್ತಾನದ ಕೃತ್ಯಗಳ ವಿರುದ್ಧ ನಡೆಸಿ’ ಎಂದು ಪ್ರಧಾನಿ ಹೇಳಿದರು.
ಕೆಲವು
ವಾರಗಳ ಹಿಂದೆ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬೊಟ್ಟು ಮಾಡಿದ ಮೋದಿ, ’ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮತ್ತು ಅವರಿಂದ ಸೃಷ್ಟಿಯಾಗಿರುವ ಪರಿಸರವು ಭಾರತದ ಸಂಸತ್ತಿಗೆ ವಿರುದ್ಧವಾಗಿವೆ’ ಎಂದು
ಹೇಳಿದರು.
‘ಅವರಿಗೆ
ನಮ್ಮ (ಬಿಜೆಪಿ) ವಿರುದ್ಧ ಇರುವ ದ್ವೇಷ ಎಷ್ಟೆಂದರೆ ಇಂತಹುದೇ ದನಿಯನ್ನು ನೀವು ರಾಷ್ಟ್ರದ ಸಂಸತ್ತಿನ ವಿರುದ್ಧ ಕೂಡಾ ಈದಿನಗಳಲ್ಲಿ ಕೇಳಬಹುದು.
ಈ ಜನರು ಪಾಕಿಸ್ತಾನದಿಂದ ಇಲ್ಲಿ ಆಶ್ರಯ ಕೋರಿ ಬಂದಿರುವ ದಲಿತರು, ದಮನಿತರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ’ ಎಂದು
ಪ್ರಧಾನಿ ಹೇಳಿದರು.
ಪಾಕಿಸ್ತಾನ
ಹುಟ್ಟಿದ್ದೇ ಧರ್ಮದ ಆಧಾರದ ಮೇಲೆ ಎಂಬುದಾಗಿ ಬೊಟ್ಟು ಮಾಡಿದ ಮೋದಿ, ಭಾರತವನ್ನು ಕೂಡಾ ಧರ್ಮದ ಹೆಸರಿನಲ್ಲಿ ವಿಭಜಿಸಲಾಯಿತು, ವಿಭಜನೆಯ
ಕಾಲದಲ್ಲಿ ಪಾಕಿಸ್ತಾನದಲ್ಲಿನ ಇತರ ಧರ್ಮಗಳ ಜನರು ದೌರ್ಜನ್ಯಗಳನ್ನು ಎದುರಿಸಿದರು ಎಂದು ಹೇಳಿದರು.
ಹಿಂದುಗಳಿರಲಿ, ಸಿಕ್ಖರಿರಲಿ ಅಥವಾ ಜೈನರಿರಲಿ ಅವರ ವಿರುದ್ಧ ಪಾಕಿಸ್ತಾನದಲ್ಲಿ ಕಾಲಕಳೆದಂತೆ ದೌರ್ಜನ್ಯಗಳು ಹೆಚ್ಚುತ್ತಲೇ ಹೋದವು. ಸಹಸ್ರರು ಮಂದಿ ತಮ್ಮ ಮನೆಗಳನ್ನು ತೊರೆದು ಭಾರತಕ್ಕೆ ನಿರಾಶ್ರಿತರಾಗಿ ಬರಬೇಕಾಯಿತು’ ಎಂದು ಪ್ರಧಾನಿ ವಿವರಿಸಿದರು.

‘ಪಾಕಿಸ್ತಾನವು
ಹಿಂದುಗಳು, ಸಿಕ್ಖರು, ಜೈನರ ವಿರುದ್ಧ ದೌರ್ಜನ್ಯಗಳನ್ನು ಎಸಗಿತು, ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಪಾಕಿಸ್ತಾನದ ವಿರುದ್ಧ ಮಾತನಾಡುವುದಿಲ್ಲ, ಬದಲಿಗೆ ಅವರು ತಮ್ಮ ಜೀವ, ಸಹೋದರಿಯರು, ಪುತ್ರಿಯರ ಮಾನ, ತಮ್ಮ ಧರ್ಮ ಉಳಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ನಿರಾಶ್ರಿತರಾಗಿ ಬಂದಿರುವವರ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಮೋದಿ ನುಡಿದರು.
‘ಅವರಿಗೆ
(ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು) ತನ್ನ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳನ್ನು ಎಸಗಿರುವ ಪಾಕಿಸ್ತಾನದ ವಿರುದ್ಧ ಮಾತನಾಡಲು ಸಮಯ ಇಲ್ಲ, ಅವರ ಬಾಯಿಗೆ ಬೀಗ ಬೀಳಲು ಕಾರಣವಾದರೂ ಏನು?’ ಎಂದು ಪ್ರಧಾನಿ ಪ್ರಶ್ನಿಸಿದರು.
ಭಯೋತ್ಪಾದನೆ
ವಿರುದ್ಧದ ಭಾರತದ ನೀತಿಯಲ್ಲಿ ಬದಲಾವಣೆ ಆಗಿದೆ. ೩೭೦ನೇ ವಿಧಿ ರದ್ದತಿ ಮೂಲಕ, ಅಲ್ಲಿನ ಜನರ ಭೀತಿ ಮತ್ತು ಅನಿಶ್ಚಿತತೆಯನ್ನು ನಿವಾರಿಸಲು ಯತ್ನ ಮಾಡಲಾಗಿದೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್ನಲಿ ಈಗ ಅಭಿವೃದ್ಧಿಯ ಹೊಸ
ಶಕೆ ಆರಂಭವಾಗಿದೆ ಎಂದು ಪ್ರಧಾನಿ ಹೇಳಿದರು.
ರಾಮನ
ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಶಾಂತಿ ಹಾಗೂ ಎಲ್ಲರ ಸಹಕಾರದೊಂದಿಗೆ ಭವ್ಯ ರಾಮಮಂದಿರ ನಿರ್ಮಾಣಕ್ಕೆ ದಾರಿ ಕೂಡಾ ಈಗ ಸುಗಮಗೊಂಡಿದೆ ಎಂದು
ಪ್ರಧಾನಿ ನುಡಿದರು.
ಕನ್ನಡದಲ್ಲಿ
ಭಾಷಣ ಆರಂಭ: ಕನ್ನಡದಲ್ಲಿ ತಮ್ಮ ಮಾತು ಆರಂಭಿಸಿದ ಪ್ರಧಾನಿ ಮೋದಿ ’ನಾನು ತುಮಕೂರಿಗೆ ಆಗಮಿಸಿದ್ದು ಸಂತಸವಾಯಿತು. ಮೊದಲಿಗೆ
ನಿಮಗೆಲ್ಲರಿಗೂ ಶುಭಾಶಯಗಳು’
ಎಂದು ಭಾಷಣ ಆರಂಭಿಸಿದರು. ಸಿದ್ದಗಂಗಾ ಶ್ರೀಗಳು ಇಲ್ಲವೆಂಬ ಶೂನ್ಯ ಕಾಡುತ್ತಿದೆ ಎಂದು ಹೇಳಿದ ಪ್ರಧಾನಿ ’ಶ್ರೀಗಳ ಬಗೆಗಿನ ವಸ್ತು ಸಂಗ್ರಹಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ನಾನು ಧನ್ಯನಾದೆ’
ಎಂದು ನುಡಿದರು.
‘ಕರ್ನಾಟಕದ
ಮಹಾನ್ ಸಂತ ಪೇಜಾವರ ಶ್ರೀಗಳು ಬೌತಿಕವಾಗಿ ಇಲ್ಲವಾಗಿರುವುದೂ ನೋವಿನ ಸಂಗತಿ’ ಎಂದು ಹೇಳುವ ಮೂಲಕ ಪ್ರಧಾನಿಯವರು ಪೇಜಾವರ ಶ್ರೀಗಳನ್ನೂ ಸ್ಮರಿಸಿದರು.
ದೇಶದ ಜನರಿಗೆ ಸೌಲಭ್ಯ ಒದಗಿಸಲು ನಾವು ಹಗಲಿರುಳೂ ಶ್ರಮಿಸುತ್ತಿದ್ದೇವೆ. ಜನರಿಗೆ ಮನೆ ಬೇಕು, ಎಲ್ ಪಿಜಿ ಗ್ಯಾಸ್ ಬೇಕು, ವಿದ್ಯುತ್ ಬೇಕು, ನೀರು ಬೇಕು, ಬ್ರಾಡ್ ಬ್ಯಾಂಡ್ ಬೇಕು, ಇವೆಲ್ಲ ವ್ಯವಸ್ಥೆ ಕಲ್ಪಿಸಲು ನಾವು ಶ್ರಮಿಸುತ್ತಿದ್ದೇವೆ ಎಂದು ಮೋದಿ ನುಡಿದರು.

೨೧ನೇ
ಶತಮಾನದಲ್ಲಿ ಬಲವಾದ ಅಡಿಪಾಯ ಹಾಕಿದ್ದೇವೆ. ನವಭಾರತ ನಿರ್ಮಾಣದ ಕನಸು ಹೊತ್ತಿದ್ದೇವೆ. ಯುವ ಸಮೂಹ ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡಿದೆ. ದೊಡ್ಡ ಬದಲಾವಣೆಗಾಗಿ ಜನರು ಆಶೀರ್ವಾದ ಮಾಡಿದ್ದಾರೆ. ದೇಶವನ್ನು ಬಡತನದ ಸಂಕೋಲೆಯಿಂದ ಮುಕ್ತಗೊಳಿಸೋಣ ಎಂದು ಪ್ರಧಾನಿ ಕರೆ ನೀಡಿದರು.
ಇದೇ ವೇಳೆಯಲ್ಲಿ ನಾವು ಮೂರು ಸಂಕಲ್ಪಗಳನ್ನು ಮಾಡೋಣ. ಪ್ರಕೃತಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಜಲಸಂರಕ್ಷಣೆ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಿ ಹೇಳಿದರು.
ಸಿದ್ದಗಂಗಾ ಮಠzಲ್ಲಿ ವಿಭೂತಿ, ರುದ್ರಾಕ್ಷಿ ಮಾಲೆ ಧರಿಸಿ ಕಾಣಿಸಿಕೊಂಡ ಪ್ರಧಾನಿಯವರು ದಿವಂಗತ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು, ಶ್ರೀಮಠದಲ್ಲಿ ಸುತ್ತಾಟ ನಡೆಸಿದರು. ಶ್ರೀಗಳ ವಸ್ತು ಸಂಗ್ರಹಾಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಪ್ರಧಾನಿಯವರನ್ನು ಈ ಸಂದರ್ಭದಲ್ಲಿ ಶಿವಕುಮಾರ ಶ್ರೀಗಳ ಬೆಳ್ಳಿ ಪ್ರತಿಮೆ ನೀಡಿ ಗೌರವಿಸಲಾಯಿತು.

ಸಿದ್ಧಗಂಗಾ
ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,
ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ ಜೋಶಿ, ರಾಜ್ಯ ಸರ್ಕಾರದ ಸಚಿವರಾದ ವಿ ಸೋಮಣ್ಣ, ಆರ್
ಅಶೋಕ್ ಹಾಗೂ ಮಾಧುಸ್ವಾಮಿ ಪಾಲ್ಗೊಂಡಿದ್ದರು.
No comments:
Post a Comment