Saturday, January 11, 2020

ಕೇರಳದ ಕೋಚಿಯ ಮರಡು ಫ್ಲ್ಯಾಟ್ ಕ್ಷಣಗಳಲ್ಲಿ ನೆಲಸಮ Kochi’s Maradu flats demolished

ಕೇರಳದ ಕೋಚಿಯ ಮರಡು ಫ್ಲ್ಯಾಟ್ ಕ್ಷಣಗಳಲ್ಲಿ ನೆಲಸಮ
ತಿರುವಂತಪುರಂ:  ಸುಪ್ರೀಂಕೋರ್ಟಿನ  ಆದೇಶದ ಮೇರೆಗೆ ಕೇರಳದ ಕೋಚಿಯಲ್ಲಿನ ಮರಡುವಿನ  ಫ್ಲ್ಯಾಟ್ ಗಳ ಪೈಕಿ ಎರಡು ಅಪಾರ್ಟ್ ಮೆಂಟುಗಳನ್ನು  ನಿಯಂತ್ರಿತ ಸ್ಫೋಟದ ಮೂಲಕ 2020 ಜನವರಿ 11ರ ಬೆಳಗ್ಗೆ ಕೆಲವೇ ಸೆಕೆಂಡುಗಳಲ್ಲಿ ನೆಲಸಮಗೊಳಿಸಲಾಯಿತು.

ನಿಯಂತ್ತಿತ ಸ್ಫೋಟ ನಡೆಸುತ್ತಿದ್ದಂತೆಯೇ ಮೊದಲ ಅಪಾರ್ಟ್ ಮೆಂಟ್ ಸಮುಚ್ಚಯವು ಇಸ್ಪೀಟು ಕಾರ್ಡುಗಳಂತೆ ಕುಸಿದು ಬಿದ್ದಿತು.  ವಸತಿ ಕಟ್ಟಡಗಳೂ ಸೇರಿದಂತೆ ಭಾರತದಲ್ಲಿ ನಡೆದ ಕಟ್ಟಡ ಧ್ವಂಸ ಪ್ರಕರಣಗಳಲ್ಲೇ ಇದು ಅತ್ಯಂತ ದೊಡ್ಡ ಕಟ್ಟಡ ನೆಲಸಮ ಪ್ರಕರಣವಾಗಿದೆ.

ಪೊಲೀಸರು ಕಟ್ಟಡ ಧ್ವಂಸ ಪ್ರಕ್ರಿಯೆ ಬಗ್ಗೆ ಮುನ್ಸೂಚನೆ ನೀಡುವ ಸಲುವಾಗಿ ಎರಡು ಸೈರನ್ ಗಳನ್ನು ಮೊಳಗಿಸಿದರು. ಮೊದಲ ಸೈರನ್ ಬೆಳಗ್ಗೆ 10.30 ಗಂಟೆಗೆ ಮೊಳಗಿತು. ಬೆನ್ನಲ್ಲೇ 10.50 ಗಂಟೆಗೆ ಎರಡನೇ ಸೈರನ್ ಮೊಳಗಿತು.ಅಪಾರ್ಟ್ ಮೆಂಟ್  ಕುಸಿಯುತ್ತಿದ್ದಂತೆಯೇ  ಅಗ್ನಿಶಾಮಕ ಸಿಬ್ಬಂದಿ  ನೀರಿನ ಟ್ಯಾಂಕರುಗಳೊಂದಿಗೆ ಸ್ಥಳಕ್ಕೆ ಧಾವಿಸಿದರು.

ತಜ್ಞರ ಪ್ರಕಾರ ದೂಳು ಪರಿಸರದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇರಲಿದೆ ಎಂದು ವರದಿಗಳು ತಿಳಿಸಿವೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:



No comments:

Advertisement