ಅಯೋಧ್ಯೆಯಲ್ಲಿ ರಾಮಮಂದಿರ: ೧೯ಕ್ಕೆ ಮಂದಿರ ಟ್ರಸ್ಟ್ ಸಭೆ
ಅಲಹಾಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಉಸ್ತುವಾರಿ
ನೋಡಿಕೊಳ್ಳಲಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಇದೇ ೧೯ರಂದು ದೆಹಲಿಯಲ್ಲಿ ಮೊದಲ ಸಭೆ ನಡೆಸಲಿದ್ದು,
ದೇಗುಲ ನಿರ್ಮಾಣದ ಕುರಿತು ಚರ್ಚೆ ನಡೆಸಲಿದೆ ಎಂದು ಟ್ರಸ್ಟ್ ಸದಸ್ಯ ಸ್ವಾಮಿ ವಾಸುದೇವಾನಂದ ಸರಸ್ವತಿ
2020 ಫೆಬ್ರುವರಿ 10ರ ಸೋಮವಾರ
ತಿಳಿಸಿದರು.
ಕಳೆದ ವಾರವಷ್ಟೇ ಕೇಂದ್ರ ಸರ್ಕಾರವು ೧೫ ಸದಸ್ಯರ ಟ್ರಸ್ಟ್
ರಚನೆ ಮಾಡಿತ್ತು. ಇದೇ ತಿಂಗಳಲ್ಲಿ ಮೊದಲ ಸಭೆ ನಡೆಸಲು ಟ್ರಸ್ಟ್ ತೀರ್ಮಾನಿಸಿದ್ದು, ಟ್ರಸ್ಟಿಗೆ ಶ್ರೀ ರಾಮಮಂದಿರ ನ್ಯಾಸ್ ಮುಖ್ಯಸ್ಥ ಮಹಾಂತ ನೃತ್ಯಗೋಪಾಲ್
ದಾಸ್ ಅವರನ್ನೂ ಸೇರ್ಪಡೆ ಮಾಡಿಕೊಳ್ಳುವ ಕುರಿತೂ ಚರ್ಚೆ ನಡೆಸಲಾಗುತ್ತದೆ ಎಂದೂ ಅವರು ತಿಳಿಸಿದರು.
No comments:
Post a Comment