Wednesday, February 12, 2020

‘ಆಮ್ ಆದ್ಮಿ’ಅರವಿಂದ ಕೇಜ್ರಿವಾಲ್‌ಗೆ ಮತ್ತೆ ’ದೆಹಲಿ ಗದ್ದುಗೆ’

ಆಮ್  ಆದ್ಮಿಅರವಿಂದ ಕೇಜ್ರಿವಾಲ್ಗೆ   ಮತ್ತೆ  ’ದೆಹಲಿ ಗದ್ದುಗೆ
ಅಧಿಕಾರ ಹಿಡಿವ ಬಿಜೆಪಿ ಆಸೆ ಭಗ್ನ, ನೆಲಕಚ್ಚಿದ ಕಾಂಗ್ರೆಸ್
ನವದೆಹಲಿ: ದೇಶದ ಪ್ರತಿಷ್ಠಿತ ಚುನಾವಣಾ ಸಮರದಲ್ಲಿ ದೆಹಲಿ ವಿಧಾನಸಭೆಯ ೭೦ಸ್ಥಾನಗಳ ಪೈಕಿ ೬೨ಸ್ಥಾನಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು 2020 ಫೆಬ್ರುವರಿ 11ರ ಮಂಗಳವಾರ ಮತ್ತೆ ಪ್ರಚಂಡ ವಿಜಯ ಗಳಿಸಿದ್ದು ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿ ಗದ್ದುಗೆ ಏರಲು ಸಜ್ಜಾಗಿದ್ದಾರೆ.

ಆಪ್ ಜೊತೆಗೆ ತೀವ್ರ ಸೆಣಸಾಟ ನಡೆಸಿದ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕೇವಲ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡರೆ, ಕಾಂಗ್ರೆಸ್ ಪಕ್ಷವು ಪುನಃ ಶೂನ್ಯಸಂಪಾದನೆ ಮಾಡಿತು.

ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷವು ೨೦ ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯ ಅಧಿಕಾರ ಪಡೆದುಕೊಳ್ಳಲು ಆಮ್ ಆದ್ಮಿ ಪಕ್ಷದೊಂದಿಗೆ ನೇರಹಣಾಹಣಿ ನಡೆಸಿದರೂ, ಸಾಧ್ಯವಾಗದೆ ಸೋಲನ್ನು ಒಪ್ಪಿಕೊಂಡಿತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರುದೆಹಲಿ ಮತದಾರರ ತೀರ್ಪನ್ನು ಬಿಜೆಪಿಯ ಮಾನ್ಯ ಮಾಡುತ್ತದೆಎಂಬುದಾಗಿ ಟ್ವೀಟ್ ಮಾಡುವ ಮೂಲಕ ಚುನಾವಣಾ ಸೋಲನ್ನು ಒಪ್ಪಿಕೊಂಡರು ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅಭಿನಂದಿಸಿದರು. ಚುನಾವಣಾ ಕಾಲದಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅವರು ಅದೇ ಟ್ವೀಟ್ ಮೂಲಕ ಕೃತಜ್ಞತೆ ಸಲ್ಲಿಸಿದರು.

ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಅವರು ಫಲಿತಾಂಶ ದಿಕ್ಕನ್ನು ಗುರುತಿಸಿಫಲಿತಾಂಶ ಏನೇ ಬಂದರೂ ನಾವು ಸ್ವಾಗತಿಸುತ್ತೇವೆ. ಬಿಜೆಪಿ ಸೇಡಿನ ರಾಜಕೀಯಕ್ಕೆ ಇಳಿಯುವುದಿಲ್ಲಎಂದು ಹೇಳಿದ್ದರು. ಪಕ್ಷದ ಇನ್ನೊಬ್ಬ ನಾಯಕ, ಕ್ರಿಕೆಟಿಗ ಗೌತಮ್ ಗಂಭೀರ್ ಅವರೂ ಸೋಲನ್ನು ಒಪ್ಪಿಕೊಂಡು ಕೇಜ್ರಿವಾಲ್ ಅವರನ್ನು ಅಭಿನಂದಿಸಿದರು.
ನಾವು ದೆಹಲಿ ಜನರ ಮನಸ್ಸು ಗೆಲ್ಲಲು ಸಾಕಷ್ಟು ಪ್ರಯತ್ನ ಮಾಡಿದೆವು. ಆದರೆ ಜನರು ನಮಗೆ ಆಶೀರ್ವಾದ ಮಾಡಲಿಲ್ಲ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಜನರಿಗೆ ಉತ್ತಮ ಆಡಳಿತ ನೀಡಲಿಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸೇರಿದಂತೆ ತನ್ನ ಅತಿರಥರೆಲ್ಲರನ್ನೂ ಚುನಾವಣಾ ಹೋರಾಟದ ಕಣದಲ್ಲಿ ಸುತ್ತಾಡಿಸಿ, ಆಮ್ ಆದ್ಮಿ ಪಕ್ಷದ ಪ್ರಚಾರವನ್ನು ಮೀರುವಂತೆ ಪ್ರಚಾರ ನಡೆಸಿದರೂ ಭಾರತೀಯ ಜನತಾ ಪಕ್ಷವು ತನ್ನ ಸದಸ್ಯ ಬಲವನ್ನು ಎರಡಂಕಿ ತಲುಪಿಸಲೂ ಸಮರ್ಥವಾಗಲಿಲ್ಲ. ೨೦೧೫ರಲ್ಲಿ ಸ್ಥಾನಗಳನ್ನು ಗೆದ್ದಿದ್ದ ಪಕ್ಷದ ಬಲ ಬಾರಿ ೮ಕ್ಕೆ ಏರಿ ನಿಂತಿತು. ೨೦೧೫ರಲ್ಲಿ ೬೭ ಸ್ಥಾನಗಳನ್ನು ಗೆದ್ದಿದ್ದ ಆಮ್ ಆದ್ಮಿ ಪಕ್ಷ ಬಾರಿ ಅಲ್ಪ ಕುಸಿತವನ್ನು ಕಂಡಿದ್ದು, ೬೨ ಸ್ಥಾನಗಳಲ್ಲಷ್ಟೇ ಜಯ ಸಾಧಿಸಿತು.

ರಾಷ್ಟ್ರಮಟ್ಟದ ಪಕ್ಷವಾಗಿರುವ ಕಾಂಗ್ರೆಸ್ ಮಾತ್ರ ಚುನಾವಣೆಯಲ್ಲಿ ೬೩ ಅಭ್ಯರ್ಥಿಗಳ ಠೇವಣಿ ನಷ್ಟದೊಂದಿದೆ ದಾಖಲೆ ಮಟ್ಟದ ಕಳಪೆ ಪ್ರದರ್ಶನವನ್ನು ಮಾಡಿತು. ಚಲಾವಣೆಗೊಂಡ ಮತಗಳ ಪೈಕಿ ಕಾಂಗೆಸ್ ಪಕ್ಷವು ಶೇಕಡಾ ೫ಕ್ಕಿಂತಲೂ ಮತಗಳನ್ನು ಪಡೆಯಿತು. ಕಾಂಗ್ರೆಸ್ ಅಭ್ಯರ್ಥಿಗಳಾದ ಅರವಿಂದರ್ ಸಿಂಗ್ ಲವ್ಲಿ (ಗಾಂಧಿನಗರ), ದೇವಿಂದರ್ ಯಾದವ್ (ಬಾಡ್ಲಿ) ಮತ್ತು ಅಭಿಷೇಕ್ ದತ್ತ್ (ಕಸ್ತೂರ್ಬಾ ನಗರ) ಮಾತ್ರ ಠೇವಣಿ ಉಳಿಸಿಕೊಳ್ಳುವಲ್ಲಿ ಸಮರ್ಥರಾದರು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಪಕ್ಷದ ಬಹುತೇಕ ಪ್ರಮಖರು ಜಯಗಳಿಸಿದರೂ, ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರು ಕೂದಲೆಳೆಯ ಅಂತರದಲ್ಲಿ ಜಯಗಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿದ ಬೆನ್ನಲ್ಲೇ ಲವ್ ಯೂ (ನಾನು ನಿಮ್ಮನ್ನು ಪ್ರೀತಿಸುತ್ತೇನೆ) ಎಂಬುದಾಗಿ ಜನರನ್ನು ಉದ್ದೇಶಿಸಿ ನುಡಿದ ಅರವಿಂದ ಕೇಜ್ರಿವಾಲ್ ಮಂಗಳವಾರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪತ್ನಿ ಸುನೀತಾ, ಇಬ್ಬರು ಮಕ್ಕಳು ಮತ್ತು ಆಪ್ ನಾಯಕರಾದ ರಾಘವ್ ಛಡಾ, ಸಂಜಯ್ ಸಇಂಗ್ ಮತ್ತು ಕೈಲಾಶ್ ಗೆಹ್ಲೋಟ್ ಜೊತೆಗೆ ಸಂಭ್ರಮಿಸುತ್ತಾ ಆಪ್ ವಿಜಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು.

ಫೆಬ್ರುವರಿ ೧೪ರಂದು ಪ್ರಮಾಣ ವಚನ: ಅರವಿಂದ ಕೇಜ್ರಿವಾಲ್ ಅವರು ಪ್ರೇಮಿಗಳ ದಿನವಾದ (ವ್ಯಾಲಂಟೈನ್ ಡೇ) ಫೆಬ್ರುವರಿ ೧೪ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ೨೦೧೫ರಲ್ಲಿ ಇದೇ ದಿನ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು. ಫೆಬ್ರುವರಿ ೧೪ರ ಶುಕ್ರವಾರ ತಾವು ಹನುಮಾನ್ ಚಾಲೀಸಾವನ್ನು ಪಠಿಸಲಿದ್ದು, ಹನುಮಾನ್ ದೇವಾಲಯಕ್ಕೂ ಹೋಗುವುದಾಗಿ ಕೇಜ್ರಿವಾಲ್ ನುಡಿದರು.

ಇಂದಿನ ದಿನವು ದೆಹಲಿಯ ಜನರನ್ನು ಆಶೀರ್ವದಿಸಿದ ಭಗವಾನ್ ಹನುಮಾನ್ ದಿನ. ಮುಂಬರುವ ದಿನಗಳಲ್ಲಿ ಜನತೆಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಸರಿಯಾದ ದಾರಿ ತೋರಿಸುವಂತೆ ನಾವು ಹನುಮಾನ್ ಜಿ ಅವರಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ’ ಎಂದೂ ಕೇಜ್ರಿವಾಲ್ ಹೇಳಿದರು.

ಕುತೂಹಲಕಾರೀ ಹೋರಾಟದಲ್ಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಬಿಜೆಪಿಯ ರವೀಂದ್ರಸಿಂಗ್ ನೇಗಿ ಅವರನ್ನು ಪ್ರತಾಪಗಂಜ್ನಲ್ಲಿ ಪರಾಭವಗೊಳಿಸಿದರೆ, ಕಲ್ಕಾಜಿಯಲ್ಲಿ ಆಪ್ ಅಭ್ಯರ್ಥಿ ಅತಿಶಿ ಅವರು ಬಿಜೆಪಿಯ ಧರಮ್ ಬೀರ್ ಸಿಂಗ್ ಅವರನ್ನು ಪರಾಭವಗೊಳಿಸಿದರು.

ಬಿಜೆಪಿಯ
ತೇಜಿಂದರ್ ಬಗ್ಗಾ ಅವರು ಹರಿನಗರ ಕ್ಷೇತ್ರದಲ್ಲಿ ಸೋಲು ಅನುಭವಿಸಿದರೆ, ಕಪಿಲ್ ಮಿಶ್ರ ಅವರು ಮಾಡೆಲ್ ಟೌನಿನಲ್ಲಿ ಪರಾಭವಗೊಂಡರು. ಆಪ್ ನಾಯಕ ಅಮಾನತುಲ್ಲಾ ಖಾನ್ ಅವರು ಓಖ್ಲಾದಲ್ಲಿ ಬಿಜೆಪಿಯ ಬ್ರಹ್ಮಸಿಂಗ್ ಅವರನ್ನು ಪರಾಭವಗೊಳಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧೀ ಹೋರಾಟ ನಡೆಯುತ್ತಿರುವ ಶಾಹೀನ್ ಬಾಗ್ ವಿಧಾನಸಭಾ ಕ್ಷೇತ್ರದಲ್ಲಿಯೇ ಇದೆ.

ನನನ್ನು ಮಗನಾಗಿ ಪರಿಗಣಿಸಿ ನಮಗೆ ಮತ ನೀಡಿದ ದೆಹಲಿಯ ಕುಟುಂಬಗಳಿಗೆ ನಾನು ಧನ್ಯವಾದ ಹೇಳಬಯಸುತ್ತೇನೆಎಂದು ಕೇಜ್ರಿವಾಲ್ ನುಡಿದರು. ಪ್ರಚಾರ ಕಾಲದಲ್ಲಿ ಬಿಜೆಪಿ ನಾಯಕರನ್ನು ಕೇಜ್ರಿವಾಲ್ ಅವರನ್ನು ಒಬ್ಬ ಭಯೋತ್ಪಾದಕ ಮತ್ತು ಒಬ್ಬ ನಕ್ಸಲೀಯ ಎಂಬುದಾಗಿ ಜರೆದಿದ್ದರು.

ಬಿಜೆಪಿಯ ಟೀಕೆಗಳಿಗೆ ಸ್ವತಃ ಉತ್ತರ ನೀಡದ ಕೇಜ್ರಿವಾಲ್ ಪಕ್ಷದ ನಾಯಕರು ಕೂಡಾ ಅವುಗಳಿಗೆ ಉತ್ತರಿಸದಂತೆ ನೋಡಿಕೊಂಡಿದ್ದರು. ಬದಲಿಗೆ ತಾವು ರಾಜಕೀಯವನ್ನು ಪ್ರವೇಶಿಸಿದ ಸಂದರ್ಭವನ್ನು ಮತ್ತು ತಮ್ಮ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಮಾಡಿದ ಕೆಲಸವನ್ನು ಜನತೆಗೆ ನೆನಪಿಸಿದ್ದರು.

ಅಭಿವೃದ್ಧಿಯ ರಾಜಕಾರಣ: ದೆಹಲಿಯ ಚುನಾವಣಾ ಫಲಿತಾಂಶವುಹೊಸ ಮಾದರಿಯ ರಾಜಕಾರಣಕ್ಕೆ ಜನ್ಮ ನೀಡಿದೆ. ಇದು ಅಭಿವೃದ್ಧಿಯ ರಾಜಕಾರಣಎಂದು ಕೇಜ್ರಿವಾಲ್ ಬಣ್ಣಿಸಿದರು.

ಶಾಲೆಗಳು, ಮೊಹಲ್ಲಾ ಕ್ಲಿನಿಕ್ಗಳನ್ನು ನಿರ್ಮಿಸಿದವರು, ಅಗ್ಗದ ವಿದ್ಯುತ್, ನೀರು, ರಸ್ತೆ ಒದಗಿಸಿದವರಿಗೆ ದೆಹಲಿ ಮತ ನೀಡುತ್ತದೆ ಎಂಬ ಸಂದೇಶ ಇದು. ಇದು ಹೊಸ ಮಾದರಿಯ ರಾಜಕಾರಣ ಮತ್ತು  ರಾಷ್ಟ್ರಕ್ಕೆ ಶುಭ ಸಂದೇಶವನ್ನು ನೀಡಿದೆಎಂದು ಕೇಜ್ರಿವಾಲ್ ಅವರು ಭಾರತ ಮಾತಾ ಕೀ ಜೈಘೋಷಣೆಯೊಂದಿಗೆ ಆರಂಭಿಸಿದ ತಮ್ಮ  ವಿಜಯಭಾಷಣದಲ್ಲಿ ನುಡಿದರು.

ಇಂತಹ ರಾಜಕಾರಣ ಮಾತ್ರವೇ ಭಾರತವನ್ನು ೨೧ನೇ ಶತಮಾನಕ್ಕೆ ಮುನ್ನಡೆಸಲಿದೆ. ಇದು ಕೇವಲ ದೆಹಲಿಯ ವಿಜಯವಲ್ಲ, ಇದು ಭಾರತ ಮಾತೆಯ ಜಯ ಕೂಡಾಎಂದು ಕೇಜ್ರಿವಾಲ್ ನುಡಿದರು.

ಆಮ್ ಆದ್ಮಿಅರವಿಂದ ಕೇಜ್ರಿವಾಲ್:
ಆಮ್ ಆದ್ಮಿಅಥವಾಸಾಮಾನ್ಯ ಮನುಷ್ಯಎಂದೇ ಗುರುತಿಸಿಕೊಂಡು ರಾಷ್ಟ್ರ ರಾಜಕಾರಣದಲ್ಲೇ ತಮ್ಮ ಚಾಪು ಮೂಡಿಸುತ್ತಿರುವ ಭ್ರಷ್ಟಾಚಾರದ ವಿರುದ್ಧ ಬಹುದೊಡ್ಡ ಧ್ವನಿಯಾಗಿದ್ದ ಕೇಜ್ರಿವಾಲ್ ೨೦೧೨ರಲ್ಲಿಆಮ್ ಆದ್ಮಿ ಪಕ್ಷವನ್ನು ಕಟ್ಟಿ ೨೦೧೫ರಲ್ಲಿ ೭೦ ಸ್ಥಾನಗಳ ಪೈಕಿ ೬೭ ಸ್ಥಾನಗಳಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದು ಒಂದು ದಾಖಲೆಯಾಗಿತ್ತು.

ರಾಷ್ಟ್ರದಾದ್ಯಂತ ಆಮ್ ಆದ್ಮಿ ಪಕ್ಷವನ್ನು ವಿಸ್ತರಿಸುವ ಪ್ರಯತ್ನ ನಡೆಸಿದರಾದರೂ ಎಲ್ಲಿಯೂ ನಿರೀಕ್ಷಿತ ಫಲ ನೀಡಿರಲಿಲ್ಲ. ಪಂಜಾಬ್ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ ಅರವಿಂದ ಕೇಜ್ರಿವಾಲ್ ಭಾರಿ ಮುಖಭಂಗ ಅನುಭವಿಸಿದ್ದರು,
ಪ್ರಸ್ತುತ ಚುನಾವಣೆಯಲ್ಲಿ ಮತದಾನಕ್ಕೆ ಕೆಲವೇ ದಿನಗಳು ಇರುವಾಗ ಪಾಕಿಸ್ತಾನದ ಉಗ್ರರ ಜೊತೆ ಸಂಬಂಧವಿರುವುದಾಗಿ, ಅದಕ್ಕೆ ಪೂರಕವಾದ ಪುರಾವೆಗಳು ಇರುವುದಾಗಿ ಅರವಿಂದ ಕೇಜ್ರಿವಾಲ್ ಗಂಭೀರ ಆರೋಪಗಳನ್ನು ಎದುರಿಸಬೇಕಾಗಿ ಬಂದಿತ್ತು. ಆದರೆ ದೆಹಲಿಯ ಜನರು  ಮಂದಿ ಕೇಜ್ರಿವಾಲ್ ಕೈ ಬಿಡಲಿಲ್ಲ.

ಅರವಿಂದ ಕೇಜ್ರಿವಾಲ್ ಮೂಲತಃ ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದವರು. ಜನ ಲೋಕಪಾಲ ಮಸೂದೆಯ ಕರಡು ರಚಿಸುವಲ್ಲಿ ಕೇಜ್ರಿವಾಲ್ ಪ್ರಮುಖವಾಗಿ ಗುರುತಿಸಿಕೊಂಡಿದ್ದರು. ಎಂಜಿನಿಯರಿಂಗ್ ಓದಿ, ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಿ, ಭ್ರಷ್ಟಾಚಾರದ ವಿರುದ್ಧ ಹೋರಾಡಿ, ಇದೀಗ ರಾಜಕೀಯದಲ್ಲಿ ಭದ್ರವಾಗಿ ನೆಲೆಯೂರಿರುವ ಕೇಜ್ರಿವಾಲ್ ಹರಿಯಾಣದ ಭಿವಾನಿ ಜಿಲ್ಲೆಯ ಸಿವಾನಿ ಗ್ರಾಮದ ಗೋವಿಂದ್ ರಾಮ್ ಕೇಜ್ರಿವಾಲ್ ಮತ್ತು ಗೀತಾ ದೇವಿ ದಂಪತಿಯ ಮೂವರು ಮಕ್ಕಳಲ್ಲಿ ಮೊದಲನೇಯವರು.

೧೯೬೮ ಆಗಸ್ಟ್ ೧೬ರಂದು ಜನಿಸಿದ ಕೇಜ್ರಿವಾಲ್ ಬಾಲ್ಯದ ಶಿಕ್ಷಣ ಹಿಸಾರ್ ಮತ್ತು ಸೋನಿತ್ನಲ್ಲಿ ಪೂರೈಸಿದರು. ೧೯೮೫ರಲ್ಲಿ ಐಐಟಿ-ಜೆಇಇ ಪರೀಕ್ಷೆಯಲ್ಲಿ ೫೬೩ನೇ ಶ್ರೇಯಾಂಕ ಪಡೆದರು. ಖರಗಪುರ  ಐಐಟಿ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗಿನಲ್ಲಿ ಪದವಿ ಪಡೆದ ಅವರು ಬಳಿಕ ೧೯೮೯ರಲ್ಲಿ ಟಾಟಾ ಸ್ಟೀಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ೧೯೯೨ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸಲು ಆರಂಭಿಸಿದರು. ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೇಜ್ರಿವಾಲ್ ೧೯೯೫ರಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡರು.

೧೯೯೯ರಲ್ಲಿ ಮನೀಶ್ ಸಿಸೋಡಿಯಾ ಜೊತೆ ಸೇರಿಪರಿವರ್ತನ್ಎಂಬ ಸಂಘಟನೆಯೊಂದನ್ನು ಸ್ಥಾಪಿಸಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದರು. ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಮೂಲಕ ಪಡಿತರ ವಿತರಣೆಯಲ್ಲಿನ ಅಕ್ರಮವನ್ನು ಬಯಲಿಗೆಳೆದರು. ಸರ್ಕಾರಿ ಕೆಲಸದಲ್ಲಿದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಾಧ್ಯವಿಲ್ಲವೆಂದು ೨೦೦೬ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದರು.  ೨೦೦೫ರಲ್ಲಿಮಾಹಿತಿ ಹಕ್ಕು ಕಾಯಿದೆಜಾರಿಗೆ ತರಲು ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದವರಲ್ಲಿ ಕೇಜ್ರಿವಾಲ್ ಕೂಡ ಒಬ್ಬರು.

೨೦೧೦ರಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ ಅರವಿಂದ್ ಕೇಜ್ರಿವಾಲ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಇಂತಹ ಪ್ರಕರಣವನ್ನು ಸಿಬಿಐಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲವೆಂದು ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ಸ್ಥಾಪನೆಯಾಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭ ೨೦೧೧ರಲ್ಲಿ ಸಾಮಾಜಿಕ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಶುರುವಾದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗಿಯಾದರು. ಜನಲೋಕಪಾಲ ಮಸೂದೆಗೆ ಆಗ್ರಹಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ಆರಂಭಿಸಿದ ಅಣ್ಣಾ ಹಜಾರೆ ಜೊತೆ ಸೇರುತ್ತಿದ್ದಂತೆ ಅರವಿಂದ ಕೇಜ್ರಿವಾಲ್ ದೇಶಾದ್ಯಂತ ಹೆಸರುವಾಸಿಯಾದರು.

ಹೋರಾಟದಲ್ಲಿ
ಭಾಗಿಯಾದ ಹಿನ್ನೆಲೆ ಬಂಧನಕ್ಕೂ ಒಳಗಾದರು. ಅಣ್ಣಾ ಹಜಾರೆ, ಕೇಜ್ರಿವಾಲ್ ಮುಂತಾದವರ ಹೋರಾಟದ ಫಲವಾಗಿ ಜನಲೋಕಪಾಲ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತಾದರೂ ಮಾತು ಉಳಿಸಿಕೊಳ್ಳಲಿಲ್ಲ. ಹಿನ್ನೆಲೆ ೨೦೧೨ರಲ್ಲಿ ಮತ್ತೆ ಹೋರಾಟ ಆರಂಭವಾಯಿತು. ಹೋರಾಟದಲ್ಲಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಹವರ್ತಿಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಇದೇ ಸಂದರ್ಭಸ್ವರಾಜ್ಎಂಬ ಪುಸ್ತಕವನ್ನು ಪ್ರಕಟಿಸಿದರು.

ಜನಲೋಕಪಾಲ ಹೋರಾಟಗಾರರಿಗೆ ಚುನಾಯಿತ ಪ್ರತಿನಿಧಿಗಳಿಗೆ ನಿಯಮಗಳ ಕುರಿತು ನಿರ್ದೇಶನ ನೀಡುವ ಹಕ್ಕು ಇಲ್ಲ ಎಂಬ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ರಾಜಕೀಯ ಅಂಗಳಕ್ಕೆ ಜಿಗಿಯಲು ಅರವಿಂದ ಕೇಜ್ರಿವಾಲ್ ನಿರ್ಧರಿಸಿದರು. ರಾಜಕೀಯದ ಭಾಗವಾಗಿ ಹೋರಾಡಲು ಅಣ್ಣಾ ಹಜಾರೆ ಹಿಂದೇಟು ಹಾಕಿದರು. ಬಳಿಕ ಕೇಜ್ರಿವಾಲ್ ತಮ್ಮದೇ ಹಾದಿ ಹಿಡಿದು ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾದರು. ಇದರ ಫಲವಾಗಿ ೨೦೧೨ರ ನವೆಂಬರಿನಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಉದಯವಾಯಿತು.

೨೦೧೩ರ ಡಿಸೆಂಬರ್ ೪ರಂದು ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತು. ೨೮ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಎಎಪಿ ೨ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಸರ್ಕಾರ ರಚನೆಗೆ ೩೬ ಸ್ಥಾನಗಳು ಬೇಕಿದ್ದ ಹಿನ್ನೆಲೆ ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರವನ್ನು ರಚಿಸಿ ಮೊದಲ ಬಾರಿಗೆ ಕೇಜ್ರಿವಾಲ್ ಮುಖ್ಯಮಂತ್ರಿಯಾದರು. ಅಂದು ಬಿಜೆಪಿ ೩೧ ಸ್ಥಾನ ಗಳಿಸಿತ್ತು. ಸುಮಾರು ೧೫ ವರ್ಷಗಳಿಂದ ಆಡಳಿತ ನಡೆಸಿದ್ದ ಕಾಂಗ್ರೆಸ್ ಕೇವಲ ಸ್ಥಾನ ಗಳಿಸಿತ್ತು. ಜನಲೋಕಪಾಲ ಕಾಯಿದೆ ಅನುಷ್ಠಾನಕ್ಕೆ ಹಿನ್ನಡೆಯುಂಟಾದ ಹಿನ್ನೆಲೆ ಮತ್ತು ಕೊಟ್ಟ ಭರವಸೆ ಈಡೇರಿಸಲಾಗದ ನಾಯಕ ಎಂಬ ಟೀಕೆಗಳು ವ್ಯಕ್ತವಾದ್ದರಿಂದ ೫೦ ದಿನಗಳಲ್ಲೇ ಮೊದಲನೇ ರಾಜೀನಾಮೆ ಕೊಟ್ಟರು.

ಕಾಂಗ್ರೆಸ್ ಜೊತೆ ಸೇರಿ ತಪ್ಪು ಮಾಡಿದೆ ಕ್ಷಮಿಸಿ ಎಂದ ಕೇಜ್ರಿವಾಲರನ್ನು ದೆಹಲಿಯ ಜನತೆ ೨೦೧೫ರ ಚುನಾವಣೆಯಲ್ಲಿ ಭಾರಿ ವಿಶ್ವಾಸದಿಂದ ಕೈ ಹಿಡಿಯಿತು. ಪಕ್ಷದ ಚಿಹ್ನೆ ಪೊರಕೆಯು ರಾಷ್ಟ್ರೀಯ ಪಕ್ಷಗಳೆರೆಡನ್ನೂ ಅಕ್ಷರಶಃ ಗುಡಿಸಿಬಿಟ್ಟಿತು. ೬೭ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ದೆಹಲಿ ರಾಜಕೀಯ ಇತಿಹಾಸದಲ್ಲಿ ಪ್ರಚಂಡ ಸಾಧನೆ ಮಾಡಿದರು. ಪಂಜಾಬ್, ಗೋವಾ ವಿಧಾನಸಭೆ ಚುನಾವಣೆಗಳಲ್ಲಿ ಎಎಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ದೇಶಾದ್ಯಂತ ಪಕ್ಷವನ್ನು ವಿಸ್ತರಿಸುವ ಪ್ರಯತ್ನಕ್ಕೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.

ಸಿಸೋಡಿಯಾಗೆ ಅಲ್ಪ[ ಅಂತರದ ಗೆಲುವು: ದೆಹಲಿ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಅರಂಭಗೊಂಡ ಹಂತದಿಂದ ಆಮ್ ಆದ್ಮಿ ಪಕ್ಷವು ಗೆಲುವಿನ ನಾಗಾಲೋಟದಿಂದ ಮುನ್ನಡೆದಿದ್ದರೂ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿಕಟವರ್ತಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗೆಲ್ಲುವುದು ಅನುಮಾನ ಎಂಬ ಸ್ಥಿತಿ ನಿರ್ಮಾಣಗೊಂಡಿತ್ತು. ಅಲ್ಪ ಮತಗಳ ಅಂತರ ಕಾಯ್ದುಕೊಂಡಿದ್ದರಿಂದ ಉಸಿರು ಬಿಗಿ ಹಿಡಿದುಕೊಂಡು ಫಲಿತಾಂಶಕ್ಕಾಗಿ ಕಾದಿದ್ದರು. ಅಂತಿಮವಾಗಿ ಅತ್ಯಂತ ಪ್ರಯಾಸದಿಂದ ಮನೀಶ್ ಸಿಸೋಡಿಯಾ ಗೆಲುವು ದಾಖಲಿಸಿದರು. ಕೇವಲ ,೦೦೦ ಮತಗಳ ಅಂತರದಿಂದ ಗೆದ್ದರು.

ಪತ್ಪರ್ಗಂಜ್ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರವಿಂದರ್ ಸಿಂಗ್ ನೇಗಿ ವಿರುದ್ಧ ಎಎಪಿ ಅಭ್ಯರ್ಥಿ ಮನೀಶ್ ಸಿಸೋಡಿಯಾ ಗೆಲುವು ಸಾಧಿಸಿದರು. ಹಲವು ಸುತ್ತಿನ ಮತಗಣನೆ ನಂತರ ಸಿಸೋಡಿಯಾ ೨೦೦ ಮತಗಳಿಂದ ಹಿನ್ನಡೆ ಅನುಭವಿಸಿದ್ದರು. ಸುಮಾರು ಗಂಟೆಗೆ ಮತಗಣನೆ ಅಂತ್ಯಗೊಂಡಾಗ ,೦೦೦ ಮತಗಳ ಅಂತರದಿಂದ ಸಿಸೋಡಿಯಾ ಗೆಲುವಿನ ನಗು ಬೀರಿದರು.

ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಮನೀಶ್ ಸಿಸೋಡಿಯಾ, ”ಪತ್ಪರ್ಗಂಜ್ ಕ್ಷೇತ್ರದಿಂದ ಮತ್ತೆ ಶಾಸಕನಾಗಿ ಆಯ್ಕೆಯಾಗಿದ್ದಕ್ಕೆ ಖುಷಿಯಾಗಿದೆ. ಜನರಲ್ಲಿ ದ್ವೇಷವನ್ನು ಬಿತ್ತುವ ಮೂಲಕ ಎಎಪಿಯನ್ನು ಮಣಿಸಲು ಬಿಜೆಪಿ ತುಂಬಾ ಪ್ರಯತ್ನ ಪಟ್ಟಿದೆ. ಆದರೆ  ದೆಹಲಿಯ ಜನತೆ ಅಭಿವೃದ್ಧಿ ಪರ ಕೆಲಸ ಮಾಡುವ ಸರ್ಕಾರವನ್ನು ಆಯ್ಕೆ ಮಾಡಿದೆ.” ಎಂದು ಹೇಳಿದರು.

ಆಮ್ ಆದ್ಮಿ ಪಕ್ಷಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ಪರ್ಧಿಸಿದ್ದ ನವದೆಹಲಿ ಕ್ಷೇತ್ರ ಮತ್ತು ಉಪ ಮುಖ್ಯಮಂತ್ರಿ ಮನೀಶ್  ಸಿಸೋಡಿಯಾ ಸ್ಪರ್ಧಿಸಿದ್ದ ಪತ್ಪರ್ಗಂಜ್ ಕ್ಷೇತ್ರ ಪ್ರಮುಖವಾಗಿದ್ದವು. ಪತ್ಪರ್ಗಂಜ್ನಲ್ಲಿ ೧೯೯೩ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ನಂತರದ ಚುನಾವಣೆಗಳಲ್ಲಿ ಅದು ಕಾಂಗ್ರೆಸ್ಸಿನ ಭದ್ರಕೋಟೆಯಾಗಿ ಮಾರ್ಪಟ್ಟಿತ್ತು. ೨೦೧೩ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಿದ ಸಿಸೋಡಿಯಾ ೨೦೧೫ರಲ್ಲೂ ಜಯಭೇರಿ ಬಾರಿಸಿದ್ದರು.

No comments:

Advertisement