Thursday, February 13, 2020

ಡಿಸೈನರ್ ವೆಂಡೆಲ್ ರಾಡ್ರಿಕ್ಸ್ ನಿಧನ

ಡಿಸೈನರ್ ವೆಂಡೆಲ್ ರಾಡ್ರಿಕ್ಸ್ ನಿಧನ
ನವದೆಹಲಿ: ಪದ್ಮಶ್ರೀ ಪುರಸ್ಕೃತ್ದ ಖ್ಯಾತ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ ಅವರು 2020 ಫೆಬ್ರುವರಿ 13ರ ಬುಧವಾರ ತಮ್ಮ ಗೋವಾದ ನಿವಾಸದಲ್ಲಿ ನಿಧನರಾದರು.  ಅವರಿಗೆ ೫೯ ವರ್ಷ ವಯಸ್ಸಾಗಿತ್ತು.

ವಿನ್ಯಾಸಗಾರರಾಗಿ ಖ್ಯಾತಿ ಪಡೆದಿದ್ದ ರಾಡ್ರಿಕ್ಸ್ ಅವರು ತಮ್ಮ ಸಾಮಾಜಿಕ ಸೇವಾ ಕಾರ್ಯಗಳಿಗಾಗಿಯೂ ಪರಿಚಿತರಾಗಿದ್ದರು. ೨೦೧೪ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರವನ್ನು ನೀಡಲಾಗಿತ್ತು.

ಬಾಲಿವುಡ್ ನಲ್ಲಿ ಚಿತ್ರ ನಟ, ನಟಿಯರ ಜೊತೆಗಿನ ವೆಂಡೆಲ್ ರಾಡ್ರಿಕ್ಸ್ ಅವರ ಒಡನಾಟ ಅವರ ವಿನ್ಯಾಸಗಳಿಗಷ್ಟೇ ಸೀಮಿತವಾಗಿರಲಿಲ್ಲ.  ರಾಡ್ರಿಕ್ಸ್ ಅವರು ೨೦೦೩ರಲ್ಲಿ ಬೂಮ್ ಚಿತ್ರದಲ್ಲಿ ಅತಿಥಿ ಪಾತ್ರ ವಹಿಸಿದ್ದರು. ೨೦೦೨ರಲ್ಲಿ ಅವರು ಟೆಲಿವಿಷನ್ ನಾಟಕಟ್ರು ವೆಸ್ಟ್ನಲ್ಲಿ ನಟಿಸಿದ್ದರು.

ಪ್ರಿಯಾಂಕಾ
ಚೋಪ್ರಾ ಅವರ ೨೦೦೮ರ ಫಿಲ್ಮ್ ಫ್ಯಾಷನ್ ನಲ್ಲೂ ಅವರು ಕಾಣಿಸಿಕೊಂಡಿದ್ದರು.

No comments:

Advertisement