ಎಲ್ಲ
ಸಮೀಕ್ಷೆ ಸುಳ್ಳು: ಬಿಜೆಪಿ ಬಿಜೆಪಿ ಅಧಿಕಾರಕ್ಕೆ: ಮನೋಜ್
ತಿವಾರಿ ಟ್ವೀಟ್
ನವದೆಹಲಿ:
ದೆಹಲಿ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಲಿದ್ದು, ಬಿಜೆಪಿಯು ೪೮ ಸ್ಥಾನಗಳಲ್ಲಿ ಗೆಲುವು
ಸಾಧಿಸುವ ಮೂಲಕ ಅಧಿಕಾರಕ್ಕೆ ಏರಲಿದೆ ಎಂದು ದೆಹಲಿ ಬಿಜೆಪಿ ನಾಯಕ ಮನೋಜ್ ತಿವಾರಿ 2020 ಫೆಬ್ರುವರಿ 08ರ ಶನಿವಾರ ಟ್ವೀಟ್
ಮಾಡಿದರು.
’ಎಎಪಿ ಮತ್ತೆ ಸರ್ಕಾರ ರಚಿಸಲಿದೆ ಎಂದೇ ಸುಮಾರು
ಏಳು ಸಮೀಕ್ಷೆಗಳು ಹೇಳುತ್ತಿವೆ.
ಆದರೆ
ಮತದಾನೋತ್ತರ ಸಮೀಕ್ಷೆಗಳೆಲ್ಲ
ವಿಫಲವಾಗಲಿವೆ ಮತ್ತು ಬಿಜೆಪಿ ಅಧಿಕಾರಕ್ಕೆ ಏರುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದರು.
ಬಿಜೆಪಿ
೪೮ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಸರ್ಕಾರ ರಚಿಸಲಿದೆ. ನನ್ನ ಈ ಟ್ವೀಟ್ ಅನ್ನು
ಉಳಿಸಿ ಇಟ್ಟುಕೊಳ್ಳಿ ಎಂದು ತಿವಾರಿ ಸವಾಲು ಎಸೆದರು..
ದೆಹಲಿಯ
೭೦ ವಿಧಾನಸಭಾ ಕ್ಷೇತ್ರಗಳಿಗೆ ಈದಿನ ಮತದಾನ ನಡೆದಿದ್ದು, ಫೆಬ್ರುವರಿ ೧೧ರ ಮಂಗಳವಾರ ಮತಗಳ ಎಣಿಕೆ ನಡೆಯಲಿದೆ.
No comments:
Post a Comment