Saturday, February 29, 2020

ಮುಸ್ಲಿಮರಿಗೆ ಶೇಕಡಾ ೫ ಮೀಸಲಾತಿ: ಮತ್ತೆ ಮಹಾ ಅಘಾಡಿಯಲ್ಲಿ ಭಿನ್ನಮತ

ಮುಸ್ಲಿಮರಿಗೆ ಶೇಕಡಾ ಮೀಸಲಾತಿಮತ್ತೆ ಮಹಾ ಅಘಾಡಿಯಲ್ಲಿ ಭಿನ್ನಮತ
ಮುಂಬೈ: ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ (ಎಂವಿಎ) ಸರ್ಕಾರದಲ್ಲಿ ಮುಸ್ಲಿಮರಿಗೆ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ ಮೀಸಲಾಗಿ ವಿಸ್ತರಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ 2020 ಫೆಬ್ರುವರಿ 28ರ ಶುಕ್ರವಾರ ಮತ್ತೊಮ್ಮೆ ಭಿನ್ನಮತ ಸ್ಫೋಟಗೊಂಡಿತು. ಪ್ರಮುಖ ಅಂಗ ಪಕ್ಷಗಳಾದ ಎನ್ಸಿಪಿ ಮತ್ತು ಶಿವಸೇನೆ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ವಿರುದ್ಧ ನಿಲುವು ತಾಳಿದವು.

ರಾಜ್ಯ ಸರ್ಕಾರವು ಶೀಘ್ರವೇ ಮೀಸಲಾತಿ ಮಸೂದೆ ಅಂಗೀಕಾರದ ಬಗ್ಗೆ ಖಾತರಿ ನೀಡುವುದು ಮತ್ತು ನಿಟ್ಟಿನಲ್ಲಿ ಶಾಲಾ ಪ್ರವೇಶಾತಿ ಆರಂಭಕ್ಕೆ ಮುನ್ನವೇ ಕ್ರಮ ಕೈಗೊಳ್ಳುವುದು ಎಂದು ಎನ್ಸಿಪಿಗೆ ಸೇರಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ಶುಕ್ರವಾರ ರಾಜ್ಯ ವಿಧಾನಪರಿಷತ್ತಿನಲ್ಲಿ ಪ್ರಕಟಿಸಿದರು.

ಕಾಂಗ್ರೆಸ್ ಶಾಸಕ ಶರದ್ ರಣ್ಪಿಸೆ ಅವರ ಪ್ರಶ್ನೆಗೆ ಮಲಿಕ್ ಉತ್ತರ ನೀಡುತ್ತಿದ್ದರು.

ಆದಾಗ್ಯೂ, ಮಲಿಕ್ ಅವರ ಹೇಳಿಕೆಯ ಸ್ವಲ್ಪವೇ ಹೊತ್ತಿನ ಬಳಿಕ ಹಿರಿಯ ಸಚಿವ ಏಕನಾಥ ಶಿಂಧೆ ಅವರು ಇಂತಹ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.

ಶಿವಸೇನೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ ಪಕ್ಷಗಳನ್ನು ಒಳಗೊಂಡಿರುವ  ಅಧಿಕಾರಾರೂಡ ಮಹಾ ವಿಕಾಸ ಅಘಾಡಿಯ ನಾಯಕರು ಮಾತುಕತೆಗಳ ಬಳಿಕ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವರು ಎಂದು ಹಿರಿಯ ಸೇನಾ ರಾಜಕಾರಣಿ ನುಡಿದರು.
ವಿಧಾನಮಂಡಲ ಸಮುಚ್ಚಯದ ಹೊರಗೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ  ಶಿಂಧೆ, ಸಚಿವ ಮಲಿಕ್ ಪ್ರಕಟಣೆಯ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಹೇಳಿದರು.

ಎಂವಿಎ ನಾಯಕರು ಯಾವುದೇ ಸಮುದಾಯಕ್ಕೆ ಮೀಸಲಾತಿ ಕೊಡುವಂತಹ ನೀತಿ ನಿರ್ಣಯಗಳ ಬಗ್ಗ್ಗೆ ಒಟ್ಟಾಗಿ ಕುಳಿತು ಚರ್ಚಿಸಿ ನಿರ್ಧರಿಸುತ್ತಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಈವರೆಗೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಅವರು ನುಡಿದರು.

No comments:

Advertisement