ಅಯೋಧ್ಯಾ:
ರಾಮಮಂದಿರಕ್ಕೆ ೬೭ ಎಕರೆ ಭೂಮಿ
ವಾರಾಣಸಿಯಲ್ಲಿ
ಪ್ರಧಾನಿ ಮೋದಿ ಘೋಷಣೆ
ವಾರಾಣಸಿ:
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶ್ರೀರಾಮನಿಗಾಗಿ ಭವ್ಯ ಮಂದಿರ ನಿರ್ಮಾಣದ ಮೇಲ್ವಿಚಾರಣೆಗಾಗಿ ರಚಿಸಲಾಗಿರುವ ಶ್ರೀರಾಮ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಅಯೋಧ್ಯೆಯಲ್ಲಿ ಸ್ವಾಧೀನ
ಪಡಿಸಿಕೊಳ್ಳಲಾಗಿರುವ ೬೭ ಎಕರೆ ಭೂಮಿಯನ್ನು
ಕೇಂದ್ರ ಸರ್ಕಾರವು ಹಸ್ತಾಂತರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಫೆಬ್ರುವರಿ 16ರ ಭಾನುವಾರ ವಾರಾಣಸಿಯಲ್ಲಿ
ಘೋಷಿಸಿದರು.
ಕೇಂದ್ರವು
ಈ ಹಿಂದೆ ಅಯೋಧ್ಯೆಯಲ್ಲಿ ’ವಿವಾದಿತ ತಾಣ’ ಎಂದು ಕರೆಯಲಾಗಿದ್ದ ೬೭
ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ವಿವಾದ ಬಗೆಹರಿಯುವವರೆಗೂ ಈ ಭೂಮಿ ಕೇಂದ್ರ
ಸರ್ಕಾರದ ಬಳಿ ಇರಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.
‘ರಾಮಮಂದಿರಕ್ಕೆ
ಸಂಬಂಧಿಸಿದಂತೆ ಸರ್ಕಾರವು ಇನ್ನೊಂದು ’ದೊಡ್ಡ’ ನಿರ್ಣಯ
ಕೈಗೊಂಡಿದೆ. ಅಯೋಧ್ಯೆಯಲ್ಲಿ ಕಾನೂನಿನಡಿಯಲ್ಲಿ
ಸ್ವಾಧೀನಪಡಿಸಿಕೊಳ್ಳಲಾಗಿರುವ
೬೭ ಎಕರೆ ಭೂಮಿಯನ್ನು ಸಂಪೂರ್ಣವಾಗಿ ಹೊಸದಾಗಿ ರೂಪುಗೊಂಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ.
ಇದರೊಂದಿಗೆ ಇಲ್ಲಿ ನಿರ್ಮಿಸಲಾಗಿರುವ
ದೇವಾಲಯದ ಭವ್ಯತೆ ಮತ್ತು ದೈವತ್ವ ಹೆಚ್ಚಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಾರಾಣಸಿಯಲ್ಲಿ
ಭಾನುವಾರ ನಡೆದ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಪ್ರಧಾನಿ ಈ ಹೇಳಿಕೆ ನೀಡಿದರು.
‘ಭಾರತದ
ಅಸ್ಮಿತೆಯು ಅದರ ಸಮಗ್ರ ಪರಂಪರೆ ಮತ್ತು ಸಂಸ್ಕೃತಿಯಿಂದ ಬಂದಿದೆ ಹೊರತು ಅದನ್ನು ಆಳಿದ ಆಡಳಿತಗಾರರಿಂದ ಅಲ್ಲ’ ಎಂದು ಮೋದಿ ವ್ಯಾಖ್ಯಾನಿಸಿದರು.
‘ಯಾರು
ಗೆದ್ದರು ಮತ್ತು ಯಾರು ಸೋತರು ಎಂಬುದನ್ನು ಅವಲಂಬಿಸಿ ಭಾರತವನ್ನು ರಾಷ್ಟ್ರವಾಗಿ ಗುರುತಿಸಲಾಗಿಲ್ಲ. ಇಲ್ಲಿ ರಾಷ್ಟ್ರದ ಪರಿಕಲ್ಪನೆಯು ರೂಪುಗೊಳ್ಳುವುದು ಆಡಳಿತ ಶಕ್ತಿಯಿಂದಲ್ಲ, ಬದಲಿಗೆ ಜನರ ಸಂಸ್ಕೃತಿ ಮತ್ತು ಪರಂಪರೆಗಳಿಂದ. ಅವರ ಉದ್ಯಮಶೀಲನೆಯಿಂದ ಅದು (ರಾಷ್ಟ್ರದ ಪರಿಕಲ್ಪನೆ) ರೂಪುಗೊಂಡಿದೆ ಎಂದು ಪ್ರಧಾನಿ ಹೇಳಿದರು.
೧೯
ವಿವಿಧ ಭಾಷೆಗಳಲ್ಲಿ ಸಿದ್ಧ ಪಡಿಸಲಾದ ’ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ’ದ ಆವೃತ್ತಿಗಳನ್ನು ಮತ್ತು
ಅವುಗಳ ಮೊಬೈಲ್ ಅಪ್ಲಿಕೇಶನ್ನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಪ್ರಧಾನಿಯವರಿಗೆ ಸಮಾರಂಭದಲ್ಲಿ ಗ್ರಂಥದ ಬಿಡುಗಡೆ ಮತ್ತು ಪೂಜಾ ಕೈಂಕರ್ಯ ನೆರವೇರಿಸಲು ಗುರುಕುಲದ ಅರ್ಚಕರು ನೆರವು ನೀಡಿದರು.
ಉತ್ತರ
ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ನಾಟಕದ ಖ್ಯಮಂತ್ರಿ ಬಿ.ಎಸ್. ಯಡಿಂಯೂರಪ್ಪ
ಮತ್ತು ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನಿ
ಮೋದಿ ಅವರು ೪೩೦ ಹಾಸಿಗೆಗಳ ಸೂಪರ್-ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಮತ್ತು ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ ೭೪ ಹಾಸಿಗೆಗಳ ಮನೋವೈದ್ಯಕೀಯ
ಆಸ್ಪತ್ರೆ ಸೇರಿದಂತೆ ೩೦ಕ್ಕೂ ಹೆಚ್ಚು ಯೋಜನೆಗಳನ್ನು ತಮ್ಮ ಕ್ಷೇತ್ರವಾದ ವಾರಾಣಸಿಯಲ್ಲಿ ತಮ್ಮ ಭೇಟಿ ಸಂದರ್ಭದಲ್ಲಿ ಉದ್ಘಾಟಿಸಿದರು.
ಮೋದಿಯವರು ವೀಡಿಯೊ
ಲಿಂಕ್ ಮೂಲಕ ಭಾರತದ ಮೊತ್ತ ಮೊದಲ ರಾತ್ರಿ ಸಂಚಾರದ ’ಮಹಾಕಾಲ ಎಕ್ಸ್ಪ್ರೆಸ್ ಖಾಸಗಿ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲು ಉತ್ತರ
ಪ್ರದೇಶದ ವಾರಣಾಸಿಯ ಮೂರು ಜ್ಯೋತಿರ್ಲಿಂಗ ತೀರ್ಥ ಕ್ಷೇತ್ರಗಳು ಮತ್ತು ಮಧ್ಯಪ್ರದೇಶದ ಉಜ್ಜಯಿನಿ ಹಾಗೂ ಓಂಕಾರೇಶ್ವರವನ್ನು ಪರಸ್ಪರ ಸಂಪರ್ಕಿಸುತ್ತದೆ.
ಇದೇ
ವೇಳೆಯಲ್ಲಿ ಪಂಡಿತ ದೀನದಯಾಳು ಉಪಾಧ್ಯಾಯ ಸ್ಮಾರಕ ಕೇಂದ್ರವನ್ನು ಕೂಡಾ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿಯವರು
ಉಪಾಧ್ಯಾಯ ಅವರ ೬೩ ಅಡಿ ಎತ್ತರದ
ಪ್ರತಿಮೆಯನ್ನು ಅನಾವರಣಗೊಳಿಸಿದರು.
No comments:
Post a Comment