ಬ್ರೆಕ್ಸಿಟ್ ಅಧಿಕೃತ: ೪೭ ವರ್ಷಗಳ ಬಳಿಕ
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಔಟ್
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಔಟ್
ಲಂಡನ್: ಐರೋಪ್ಯ ಒಕ್ಕೂಟದಿಂದ (ಯುರೋಪಿಯನ್
ಯೂನಿಯನ್) ಬ್ರಿಟನ್ ದೇಶ 2020 ಫೆಬ್ರುವರಿ 01ರ
ಶನಿವಾರ ಅಧಿಕೃತವಾಗಿ ಹೊರಬಂದಿತು. ಇದರೊಂದಿಗೆ ೩-೪ ವರ್ಷಗಳಿಂದ ಹೊಯ್ದಾಡುತ್ತಿದ್ದ ಬ್ರೆಕ್ಸಿಟ್(ಬ್ರಿಟನ್
ಎಕ್ಸಿಟ್) ಕೊನೆಗೂ ನೆರವೇರಿತು.
ಈ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ
ಮಾತನಾಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇದನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.
“ನಮ್ಮ ಶ್ರೇಷ್ಠ ರಾಷ್ಟ್ರೀಯ ನಾಟಕದ ಹೊಸ ಆಟಕ್ಕೆ ಪರದೆ ಎಳೆಯಲಾಗಿದೆ” ಎಂದು ಜಾನ್ಸನ್ ತಮ್ಮದೇ ಶೈಲಿಯಲ್ಲಿ
ವಿಶ್ಲೇಷಿಸಿದರು. ೪೭ ವರ್ಷಗಳಿಂದ ಅಸ್ತಿತ್ವದಲ್ಲಿರುವ ಯೂರೋಪಿಯನ್ ಯೂನಿಯನ್ನಿನ ಸದಸ್ಯತ್ವದಿಂದ ಹೊರ
ಬಂದ ಮೊದಲ ರಾಷ್ಟ್ರ ಬ್ರಿಟನ್ ಆಗಿದ್ದು, ಈಗ ಬ್ರಿಟನ್
ದೇಶ ಮತ್ತೆ ಸಾರ್ವಭೌಮತ್ವ ಹೊಂದಿತು.
೨೦೧೬ರಲ್ಲೇ ಬ್ರಿಟನ್ನಿನಲ್ಲಿ ಬ್ರೆಕ್ಸಿಟ್ ವಿಚಾರವಿಟ್ಟುಕೊಂಡು ಜನಮತಗಣನೆ ನಡೆದಿತ್ತು. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ದೇಶ ಹೊರಬರಬೇಕೆಂಬುದು
ಕನ್ಸರ್ವೇಟಿವ್ ಪಕ್ಷದ ನಿಲುವಾಗಿತ್ತು. ಆ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಬ್ರಿಟನ್
ಪ್ರಜೆಗಳು ಬಹುಮತ ಕೊಟ್ಟಿದ್ದರು.
ಆದರೆ, ಬ್ರೆಕ್ಸಿಟ್ ಒಪ್ಪಂದದ ಕೆಲ
ಅಂಶಗಳ ಕಾರಣದಿಂದ ಅದರ ಜಾರಿ ಸಾಧ್ಯವಾಗಿರಲಿಲ್ಲ.
ಅಧಿಕೃತವಾಗಿ ಬ್ರೆಕ್ಸಿಟ್ ಪೂರ್ಣಗೊಳಿಸಲು ೪ ವರ್ಷ ಬೇಕಾಯಿತು. ಆದರೆ, ಒಕ್ಕೂಟದಿಂದ ಬ್ರಿಟನ್ ಈಗಿಂದೀಗಲೇ
ಸಂಪೂರ್ಣವಾಗಿ ಬೇರ್ಪಡುವುದಿಲ್ಲ. ಬ್ರೆಕ್ಸಿಟ್ ಒಪ್ಪಂದದ ಪ್ರಕಾರ ಡಿಸೆಂಬರಿನವರೆಗೂ ಬದಲಾವಣೆಯ(ಟ್ರಾನ್ಸಿಷನ್) ಅವಧಿಯನ್ನು ನಿಗದಿ ಪಡಿಸಲಾಗಿದೆ.
ಬದಲಾವಣೆಯ ಅವಧಿಯವರೆಗೆ ಬ್ರಿಟನ್ ದೇಶದ ನೀತಿಗಳಲ್ಲಿ ಒಂದೊಂದೇ ಬದಲಾವಣೆ ತರಲಾಗುತ್ತದೆ. ಡಿಸೆಂಬರಿನ ವೇಳೆಗೆ ಐರೋಪ್ಯ ಒಕ್ಕೂಟದಿಂದ
ಯೂರೋಪ್ ಸಂಪೂರ್ಣವಾಗಿ ಸ್ವತಂತ್ರಗೊಳ್ಳಲಿದೆ.
ಯೂರೋಪ್ ಒಕ್ಕೂಟ ಪ್ರಾರಂಭಗೊಂಡಿದ್ದು
೧೯೫೮ರಲ್ಲಿ. ಇಡೀ ಯೂರೋಪ್ ಖಂಡಕ್ಕೆ ಒಂದು ನೀತಿ ನಿಯಮಾವಳಿಗಳನ್ನು
ರೂಪಿಸುವುದು ಹಾಗೂ ಒಗ್ಗಟ್ಟು ಸಾಧಿಸುವುದು ಈ ಒಕ್ಕೂಟದ ಉದ್ದೇಶವಾಗಿತ್ತು. ಆಗ ರಾಜಕೀಯ ಮತ್ತು ಆರ್ಥಿಕವಾಗಿ
ಸಾಮಾನ್ಯ ನಿಯಮಗಳನ್ನು ರೂಪಿಸಲಾಗಿತ್ತು. ಬ್ರಿಟನ್ ಸೇರಿ ಯೂರೋಪಿನ ೨೮ ರಾಷ್ಟ್ರಗಳು ಒಕ್ಕೂಟದ ಸದಸ್ಯತ್ವ ಹೊಂದಿದ್ದವು. ಈಗ ಬ್ರಿಟನ್ ಹೊರಬಂದಿರುವುದಿಂದ
ಒಕ್ಕೂಟದಲ್ಲಿ ೨೭ ದೇಶಗಳು ಉಳಿದಂತಾಗಿದೆ.
ಒಕ್ಕೂಟದಲ್ಲಿ ಕೃಷಿ, ವಲಸೆ, ವ್ಯಾಪಾರ
ಇತ್ಯಾದಿ ಅನೇಕ ವಿಚಾರಗಳಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಅನ್ವಯಿಸುವಂತೆ ಸಾಮಾನ್ಯ ನಿಯಮಾವಳಿಯನ್ನು
ರೂಪಿಸಲಾಗಿತ್ತು.
ಆದರೆ, ಈ ಸಾಮಾನ್ಯ ನಿಯಮಾವಳಿಗಳ
ಬಗ್ಗೆ ಬ್ರಿಟನ್ ದೇಶ ಕೆಲ ವರ್ಷಗಳ ಹಿಂದೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಪ್ರಾರಂಭಿಸಿತು. ವಲಸಿಗರು
ಸಮಸ್ಯೆ, ವ್ಯಾಪಾರ ಇತ್ಯಾದಿ ವಿಚಾರಗಳಲ್ಲಿ ಬ್ರಿಟನ್ ಪ್ರತ್ಯೇಕ ನಿಲುವು ಹೊಂದಿತು. ಅದರಿಂದಾಗಿಯೇ ಬ್ರಿಟನ್ ದೇಶ ಯೂರೋಪ್ ಒಕ್ಕೂಟದಿಂದ ಹೊರಬಿದ್ದಿತು.
No comments:
Post a Comment