ನಿರ್ಮಲಾ
ಸೀತಾರಾಮನ್ ಬಜೆಟ್ ಭಾಷಣ: ಟ್ವೀಟ್ ದಾಖಲೆ
ನವದೆಹಲಿ:
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು
ಫೆಬ್ರುವರಿ ೧ರ ಶನಿವಾರ ಮಂಡಿಸಿದ ಬಜೆಟ್
ಭಾಷಣವು ೧೧ ಲಕ್ಷಕ್ಕೂ ಅಧಿಕ
ಟ್ವೀಟ್ ಗಳ ಮೂಲಕ ದಾಖಲೆ ನಿರ್ಮಿಸಿತು.
ಬರೋಬ್ಬರಿ
೨ ಗಂಟೆ ೪೦ ನಿಮಿಷಗಳ ಕಾಲ
ನಿರಂತರ ಭಾಷಣ ಮಾಡಿದ ಬಳಿಕ ಆಯಾಸದಿಂದ ಸೀತಾರಾಮನ್
ಅವರು ಅವರು ಕೊನೆಯ
೨ ಪುಟಗಳನ್ನು ಓದಿರಲೇ ಇಲ್ಲ.
“ಯೂನಿಯನ್
ಬಜೆಟ್ ೨೦೨೦’ ಎಂಬ ಹ್ಯಾಷ್ ಟ್ಯಾಗ್ ಅಡಿ
ಟ್ವೀಟುಗಳನ್ನು ಮಾಡಲಾಗಿದೆ.
ಟ್ವೀಟ್ ಮಾಡಿದವರೆಲ್ಲ ಬಜೆಟ್ ಬಗ್ಗೆ ಬಗ್ಗೆ ಪರ-ವಿರೋಧ ಅಭಿಪ್ರಾಯ
ಮಂಡನೆ ಮಾಡಿದ್ದಾರೆ. ಭಾಷಣಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ವಿರುದ್ಧ ಲೇವಡಿಯ ಮಾತುಗಳೂ ಇದ್ದವು.
ಹಂಟರ್
ಎಂಬ ಹೆಸರಿನಲ್ಲಿ ಟ್ವೀಟ್ ಮಾಡಿದವರು ಮಧ್ಯಮ ವರ್ಗದವರು ಬಜೆಟ್ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬರೆದರು. ಅಶುತೋಶ್
ಸಿಂಗ್ ಎಂಬವರು “ರಾಹುಲ್ ಗಾಂಧಿಯವರು ಇನ್ನೂ ಬಜೆಟ್ ತಿಳಿದುಕೊಳ್ಳುತ್ತಿದ್ದಾರೆ’ ಎಂದು
ಬರೆದಿದ್ದರು.
ಅದಕ್ಕೆ
ಲೋಕಸಭೆಯಲ್ಲಿ ಕುಳಿತು ಏನನ್ನೋ ನೋಡುತ್ತಿರುವ ಫೋಟೋ ಹಾಕಲಾಗಿದೆ. ಟ್ವೀಟ್ ದಾಖಲೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ಇಂಡಿಯಾದ ಅಮಿತ್ ತ್ರಿಪಾಠಿ, ಬಜೆಟ್ ಭಾಷಣ ಮತ್ತು ಅದರ ವಿಶ್ಲೇಷಣೆಯನ್ನು ಹೆಚ್ಚಿನ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದರು.
No comments:
Post a Comment