Monday, February 10, 2020

ದೆಹಲಿಯಲ್ಲಿ ಶೇ.೬೨.೫೯ ಮತದಾನ ದಾಖಲು

ದೆಹಲಿಯಲ್ಲಿ ಶೇ.೬೨.೫೯ ಮತದಾನ ದಾಖಲು
೨೪ ತಾಸುಗಳ ಬಳಿಕ ಬಹಿರಂಗ ಪಡಿಸಿದ ಚುನಾವಣಾ ಆಯೋಗ
ನವದೆಹಲಿ: ೭೦ ಸದಸ್ಯ ಬಲದ ದೆಹಲಿ ವಿಧಾನಸಭೆಗೆ  2020 ಫೆಬ್ರುವರಿ 08ರ ಶನಿವಾರ ನಡೆದ ಚುನಾವಣೆಯಲ್ಲಿ ಸರಾಸರಿ ಶೇಕಡಾ ೬೨.೫೯ರಷ್ಟು ಮತದಾನ ದಾಖಲಾಗಿದೆ ಎಂದು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಅವರು 2020 ಫೆಬ್ರುವರಿ 02ರ ಭಾನುವಾರ  ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದರು.

ಮಾಹಿತಿ ನೀಡುವಲ್ಲಿ ಯಾವುದೇ ವಿಳಂಬವಾಗಿಲ್ಲ, ನಾವು ಊಹೆಗೆ ಬದಲಾಗಿ ನಿಖರ ಅಂಕಿಸಂಖ್ಯೆ ಮತ್ತು ಖಚಿತ ಮತದಾನ ಪ್ರಮಾಣವನ್ನು ನೀಡಲು ಬಯಸಿದ್ದೆವುಎಂದು ಅವರು ಸಮರ್ಥಿಸಿದರು.
ವಿಧಾನಸಭೆಗೆ ನಡೆದ ಚುನಾವಣೆಯಲಿ ಶೇಕಡಾ ೬೨.೫೯ರಷ್ಟು ಮತದಾನವಾಗಿದೆ. ಇದು ಕಳೆದ ವರ್ಷ ನಡೆದ ಲೋಕಸಭಾ ಚುನಾವಣಾ ಮತದಾನ ಪ್ರಮಾಣಕ್ಕಿಂತ ಶೇಕಡಾ ೩ಷ್ಟು ಹೆಚ್ಚು ಎಂದು ಸಿಂಗ್ ಹೇಳಿದರು.

ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ-ಆಪ್) ನಾಯಕ ಅರವಿಂದ ಕೇಜ್ರಿವಾಲ್ ಅವರು ಮತದಾನದ ಪ್ರಮಾಣವನ್ನು ಅಧಿಕೃತವಾಗಿ ಬಿಡುಗಡೆ ಮಾಡುವಲ್ಲಿನ ವಿಳಂಬವನ್ನು ಪ್ರಶ್ನಿಸಿದ ಗಂಟೆಗಳ ಬಳಿಕ ಚುನಾವಣಾ ಆಯೋಗದಿಂದ ಮಾಹಿತಿ ಹೊರಬಿದ್ದಿತು.

ಚುನಾವಣೆ ಮುಗಿದು ಹಲವಾರು ಗಂಟೆಗಳು ಕಳೆದರೂ ಚುನಾವಣಾ ಆಯೋಗವು ಮತಚಲಾವಣೆಯ ಅಂತಿಮ ಅಂಕಿಸಂಖ್ಯೆಗಳನ್ನು ಬಹಿರಂಗ ಪಡಿಸದೇ ಇರುವುದುಸಂಪೂರ್ಣ ಆಘಾತಕಾರಿ. ಚುನಾವಣಾ ಆಯೋಗ ಏನು ಮಾಡುತ್ತಿದೆ? ಮತದಾನ ಮುಗಿದು ಹಲವಾರು ಗಂಟೆಗಳು ಕಳೆದಿದ್ದರೂ ಅವರು ಏಕೆ ಮತಚಲಾವಣೆಯ ಅಂತಿಮ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡುತ್ತಿಲ್ಲ? ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.
ಚುನಾವಣಾ ಆಯೋಗವು 2020 ಫೆಬ್ರುವರಿ 08ರ ಶನಿವಾರ ರಾತ್ರಿ ಬಿಡುಗಡೆ ಮಾಡಿದ್ದ ಮತದಾನದ ಅಂಕಿಅಂಶದ ಪ್ರಕಾರ ಶೇಕಡಾ ೬೧.೪೬ರಷ್ಟು ಮತದಾನವಾಗಿದೆ ಎಂದು ತಿಳಿಸಲಾಗಿತ್ತು.  ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಸಂಜೆ ಗಂಟೆಗೆ ಮತದಾನ ಮುಕ್ತಾಯಗೊಂಡಿತ್ತು.

ಮಧ್ಯೆ, ಬಿಜೆಪಿಯು ಮತಗಟ್ಟೆಗಳಲ್ಲಿ ಗಂಟೆಯ ಬಳಿಕ ಬಿಜೆಪಿಗೆ ಭಾರೀ ಬೆಂಬಲ ವ್ಯಕ್ತವಾಗಿತ್ತು ಎಂದು ಪ್ರತಿಪಾದಿಸಿದೆ. ಮಧ್ಯಾಹ್ನ ೩ರಿಂದ ರಾತ್ರಿ .೩೦ರವರೆಗೆ ಬಿಜೆಪಿ ಪರವಾಗಿ ಭಾರೀ ಮತದಾನ ನಡೆದಿದೆ ಎಂದು ಪಕ್ಷವು ಹೇಳಿತ್ತು.

ಇದಕ್ಕೆ ಮುನ್ನ ಭಾನುವಾರ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಆಮ್ ಆದ್ಮಿ ಪಕ್ಷದ ನಾಯಕ, ಅರವಿಂದ ಕೇಜ್ರಿವಾಲ್ ಅವರ ನಿಕಟವರ್ತಿ ಮನಿಷ್ ಸಿಸೋಡಿಯಾ ಅವರುಚುನಾವಣಾ ಆಯೋಗಕ್ಕೆ ಬಿಜೆಪಿ ಕಚೇರಿಯಿಂದ ಮತದಾನದ ಅಂತಿಮ ಅಂಕಿಸಂಖ್ಯೆ ಇನ್ನಷ್ಟೇ ಬರಬೇಕಾಗಿದೆಯೇ?’ ಎಂದು ಪ್ರಶ್ನಿಸಿದ್ದರು.

ಬಿಜೆಪಿ ನಾಯಕರು ಮತದಾನದ ಅಂಕಿಸಂಖ್ಯೆಗಳನ್ನು ಹೇಳುತಿದ್ದಾರೆ. ಆದರೆ ಚುನಾವಣಾ ಆಯೋಗಕ್ಕೆ ಮಾತ್ರ  ಚುನಾವಣೆ ಮುಗಿದು ೨೪ ಗಂಟೆಗಳು ಕಳೆದರೂ ಮತದಾನದ ಅಂತಿಮ ಅಂಕಿಅಂಶ ನೀಡಲು ಸಾಧ್ಯವಾಗುತ್ತಿಲ್ಲಎಂದು ಸಿಸೋಡಿಯಾ ಹಿಂದಿಯಲ್ಲಿ ಮಾಡಿದ ಟ್ವೀಟಿನಲ್ಲಿ ತಿಳಿಸಿದ್ದರು.

ಚುನಾವಣಾ ಆಯೋಗವು ತಾನು ಇನ್ನೂ ಮಾಹಿತಿ ಕ್ರೋಡೀಕರಿಸುತ್ತಿರುವುದಾಗಿ ಹೇಳಿದೆ. ಏನಾಗುತ್ತಿದೆ? ಬಿಜೆಪಿ ಕಚೇರಿಯು ನಿಮಗೆ ಅಂತಿಮ ಅಂಕಿ ಅಂಶ ನೀಡಬೇಕು ಎಂದು ನೀವು ಕಾಯುತ್ತಿದ್ದೀರಾ?’ ಎಂದು ಸಿಸೋಡಿಯಾ ಪ್ರಶ್ನಿಸಿದ್ದರು.

ಆಪ್ ನಾಯಕ ಸಂಜಯ್ ಸಿಂಗ್ ಅವರುಏನೋ ಬೇಯುತ್ತಿದೆ, ರಹಸ್ಯ ಆಟ ನಡೆಯುತ್ತಿದೆಎಂದು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.

ರಾಷ್ಟ್ರದ ೭೦ ವರ್ಷಗಳ ಇತಿಹಾಸದಲ್ಲಿ ಚುನಾವಣಾ ಆಯೋಗವು ಮತಚಲಾಯಿಸಿದವರ ವಿವರ ಬಿಡುಗಡೆ ಮಾಡಲು ಚುನಾವಣಾ ಆಯೋಗವು ಸಿದ್ಧವಾಗದೇ ಇರುವುದು ಬಹುಶಃ ಇದೇ ಮೊದಲು. ಇಡೀ ರಾಷ್ಟ್ರ ಮತ್ತು ದೆಹಲಿ ಶನಿವಾರದಿಂದ ಮತದಾನದ ಅಂಕಿಅಂಶಕ್ಕಾಗಿ ಕಾದಿದೆಎಂದು ಅವರು ನುಡಿದರು.

ಶನಿವಾರ ಮತದಾನದ ವೇಳೆಯಲ್ಲಿ ನಡೆಸಲಾದ ವಿವಿಧ ಮತಗಟ್ಟೆ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷಕ್ಕೆ ಸರಳ ಬಹುಮತ ಲಭಿಸುವುದಾಗಿ ಭವಿಷ್ಯ ನುಡಿದಿವೆ. ಬಿಜೆಪಿ ಸ್ಥಿತಿ ಸುಧಾರಿಸಿಕೊಳ್ಳಲಿದ್ದರೂ, ಎರಡನೇ ಸ್ಥಾನವನ್ನಷ್ಟೇ ಪಡೆಯುವುದು, ಕಾಂಗ್ರೆಸ್ ಮತ್ತೆ ಶೂನ್ಯ ಸಂಪಾದನೆ ಮಾಡುವುದು ಎಂದು ಸಮೀಕ್ಷೆಗಳು ತಿಳಿಸಿದ್ದವು.

ಆಮ್ ಆದ್ಮಿ ಪಕ್ಷವು ೨೦೧೫ರ ಚುನಾವಣೆಯಲ್ಲಿ ೬೭ ಸ್ಥಾನಗಳೊಂದಿಗೆ ಪ್ರಚಂಡ ಬಹುಮತ ಪಡೆದಿತ್ತು. ಬಿಜೆಪಿ ಕೇವಲ ಸ್ಥಾನ ಪಡೆದರೆ, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು.

No comments:

Advertisement