Saturday, February 29, 2020

ಕೊರೊನಾ ವೈರಸ್ ಪರಿಣಾಮ: ಷೇರು ಮಾರುಕಟ್ಟೆ ಕುಸಿತ

ಕೊರೊನಾ ವೈರಸ್ ಪರಿಣಾಮ: ಷೇರು ಮಾರುಕಟ್ಟೆ ಕುಸಿತ
ಹೂಡಿಕೆದಾರರಿಗೆ ನಿಮಿಷದಲ್ಲಿ ಲಕ್ಷ ಕೋಟಿ ರೂ. ನಷ್ಟ
ಮುಂಬಯಿ: ಕೊರೊನಾ ವೈರಸ್ ಸೋಂಕು ಭಾರತೀಯ ಷೇರು ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿದ್ದು, 2020 ಫೆಬ್ರುವರಿ 28ರ ಶುಕ್ರವಾರ ದೇಶದ ಷೇರು ಮಾರುಕಟ್ಟೆಯಲ್ಲಿ ದಿಢೀರನೆ ಕುಸಿತ ಉಂಟಾಗಿ ಹೂಡಿಕೆದಾರರಿಗೆ ಕೇವಲ ನಿಮಿಷದಲ್ಲಿ ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿತು. ಇದರೊಂದಿಗೆ ಹೂಡಿಕೆದಾರರಲ್ಲಿ ಮಹಾ ಭೀತಿ ಎದುರಾಯಿತು.

ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ದಿನದ ಅಂತ್ಯಕ್ಕೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) ,೪೪೮ ಅಂಕ ಕುಸಿತವಾಗಿ ಅಂಶಗಳ ಇಳಿಕೆಯೊಂದಿಗೆ ೩೮,೨೯೭ ಅಂಶಗಳಿಗೆ ತಲುಪಿತು. ಇದರಿಂದಾಗಿ ಹೂಡಿಕೆದಾರರು ನಷ್ಟ ಅನುಭವಿಸಿದರು.

ರಾಷ್ಟ್ರೀಯ ಷೇರು ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ೪೨೩ ಅಂಶ ಇಳಿಕೆಯಾಗಿ ೧೧,೨೧೦ ಅಂಶಗಳನ್ನು ಮುಟ್ಟಿತು.

ಚೀನಾ, ದಕ್ಷಿಣ ಕೊರಿಯಾ, ಇಟಲಿ ಸೇರಿದಂತೆ ನಾನಾ ದೇಶಗಳಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಉತ್ಪಾದನಾ ವಲಯದ ಮೇಲೆ ಭಾರಿ ಪರಿಣಾಮವಾಗಿದ್ದು, ಇದರಿಂದ ಬಹುತೇಕ ದೇಶಗಳಲ್ಲಿ ಷೇರು ಮಾರುಕಟ್ಟೆ ಕುಸಿದಿದೆ.

ವಾರದ ಕೊನೆಯ ದಿನವಾದ ಶುಕ್ರವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಸಂವೇದಿ ಸೂಚ್ಯಂಕವು ,೧೦೦ ಅಂಕಗಳ ಕುಸಿತ ಕಂಡಿತು. ಇದರಿಂದ ಹೂಡಿಕೆದಾರರು ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದರು. ಸೂಚ್ಯಂಕ ಕುಸಿತ ಮುಂದುವರೆದು, ದಿನದಂತ್ಯಕ್ಕೆ ೧೪೪೮ ಅಂಕ ಕುಸಿತವನ್ನು ದಾಖಲಿಸಿತು. ಪರಿಣಾಮವಾಗಿ ಹೂಡಿಕೆದಾರರು ಕೇವಲ ನಿಮಿಷದಲ್ಲಿ ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದರು.

ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ ಮಾರುಕಟ್ಟೆಯಲ್ಲೂ ಭಾರಿ ಪ್ರಮಾಣದಲ್ಲಿ ಕುಸಿvವಾಗಿದೆ.

ವಿಶ್ವವ್ಯಾಪಿಯಾಗಿ ಹಬ್ಬುತ್ತಿರುವ ಕೊರೊನಾ ವೈರಸ್ ಉದ್ಯಮ ವಲಯದ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾದ ಡಾ. ಟೆಡ್ರೊಸ್ ಆಡ್ಹನಾಮ್ ಗೆಬ್ರಿಯೆಸಸ್ ತಿಳಿಸಿದರು.

ಷೇರು ಸೂಚ್ಯಂಕ ಕುಸಿತದಿಂದಾಗಿ ಮುಂಬೈ ಷೇರುಪೇಟೆಯ ಸುಮಾರು ,೭೦೦ ಕಂಪನಿಗಳ ಷೇರುಗಳು ನಷ್ಟಕ್ಕೆ ಒಳಗಾದವು.

ಫೆಬ್ರುವರಿ ೨೪ರಿಂದ ೨೮ರ ವರೆಗೂ, ಐದು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ,೩೦೦ ಅಂಶಗಳಿಗೂ ಅಧಿಕ ಇಳಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಭೀತಿ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಪರಿಣಾಮ ದೇಶದ ಷೇರುಪೇಟೆಗಳಲ್ಲಿ ತಲ್ಲಣ ಸೃಷ್ಟಿಸಿದೆ.

೨೦೦೮ರಲ್ಲಿ ಉಂಟಾಗಿದ್ದ ಜಾಗತಿಕ ಮಟ್ಟದ ಷೇರುಪೇಟೆ ಮಹಾ ಕುಸಿತದ ನಂತರ ಇದೀಗ ಅತಿ ದೊಡ್ಡ ಪತನ ದಾಖಲಾಗಿದೆ.

ಕೊರೊನಾ ಪ್ರಭಾವದಿಂದ ಅಮೆರಿಕ ಷೇರುಪೇಟೆ ಡೌ ಜೋನ್ಸ್ನಲ್ಲಿ ,೧೯೦.೯೫ ಅಂಶಗಳ ಕುಸಿತ ಕಂಡಿರುವುದು ಏಷ್ಯಾ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿತು. ಜಪಾನಿನ ಟೋಕಿಯೊ ಷೇರುಪೇಟೆ ಶೇ . ಹಾಗೂ ಚೀನಾದ ಶಾಂಘೈ ಷೇರುಪೇಟೆ ಶೇ .೫ರಷ್ಟು ಇಳಿ ಮುಖವಾಗಿವೆ.

ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫೈನಾನ್ಸ್, ಎಚ್ಸಿಎಲ್ ಟೆಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ಗಳ ಷೇರು ಮೌಲ್ಯದಲ್ಲಿ ಶುಕ್ರವಾರ ಕುಸಿತ ಉಂಟಾಗಿದೆ.

ಕೊರೊನಾ ವೈರಸ್ ಸೋಂಕಿನಿಂದ ಸುಮಾರು ,೮೦೦ ಮಂದಿ ಸಾವಿಗೀಡಾಗಿದ್ದು, ಜಾಗತಿಕವಾಗಿ ೮೩,೦೦೦ ಜನರಿಗೆ ಸೋಂಕು ತಗುಲಿದೆ.

No comments:

Advertisement