Wednesday, February 12, 2020

ಕೇಜ್ರಿವಾಲ್‌ಗೆ ಪ್ರಧಾನಿ ಮೋದಿ ಅಭಿನಂದನೆ, ಕೇಜ್ರಿ ಧನ್ಯವಾದ

ಕೇಜ್ರಿವಾಲ್ಗೆ ಪ್ರಧಾನಿ ಮೋದಿ ಅಭಿನಂದನೆ, ಕೇಜ್ರಿ ಧನ್ಯವಾದ
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಪ್ರಚಂಡ ವಿಜಯಗಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು 2020 ಫೆಬ್ರುವರಿ 11ರ ಮಂಗಳವಾರ ಅಭಿನಂದಿಸಿದರು.

ಆಪ್ ಮತ್ತು ಶ್ರಿ ಅರವಿಂದ ಕೇಜ್ರಿವಾಲ್ ಜಿ ಅವರಿಗೆ ದೆಹಲಿ ವಿಧಾನಸಭಾ ಚುನಾವಣೆಯ ವಿಜಯಕ್ಕಾಗಿ ಅಭಿನಂದನೆಗಳು. ದೆಹಲಿಯ ಜನರ ಆಶಯಗಳನ್ನು ಈಡೇರಿಸುವಲ್ಲಿ ಅವರಿಗೆ ಯಶಸ್ಸು ಸಿಗಲಿ ಹಾರೈಸುತ್ತೇನೆಎಂದು ಪ್ರಧಾನಿ ಟ್ವೀಟ್ ಮಾಡಿದರು.

ಪ್ರಧಾನಿ ಮೋದಿ ಅವರ ಟ್ವೀಟ್ಗೆ ತತ್ ಕ್ಷಣವೇ ಸ್ಪಂದಿಸಿದ ಅರವಿಂದ ಕೇಜ್ರಿವಾಲ್ ಅವರು ಧನ್ಯವಾದಗಳನ್ನು ಹೇಳಿ, ಕೇಂದ್ರದ ಜೊತೆ ನಿಕಟವಾಗಿ ಕೆಲಸ ಮಾಡಲು ಬಯಸುವುದಾಗಿ ತಿಳಿಸಿದರು.

'ತುಂಬಾ ಧನ್ಯವಾದಗಳು ಸರ್. ನಮ್ಮ ರಾಜಧಾನಿ ನಗರವನ್ನು ನಿಜವಾದ ವಿಶ್ವದರ್ಜೆಯ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರದ ಜೊತೆಗೆ ನಿಕಟವಾಗಿ ಶ್ರಮಿಸುವುದನ್ನು ಎದುರು ನೋಡುತ್ತಿದ್ದೇನೆಎಂದು ಕೇಜ್ರಿವಾಲ್ ಅವರು ಟ್ವೀಟ್ ಮೂಲಕವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತರಿಸಿದರು.

No comments:

Advertisement