ಭಯೋತ್ಪಾದನೆಗೆ
ಹಣಕಾಸು ನೆರವು: ಹಫೀಜ್ ಸಯೀದ್‌ಗೆ ೫ ವರ್ಷಗಳ
ಸಜೆ
ಕಪ್ಪುಪಟ್ಟಿಗೆ
ಪಾಕಿಸ್ತಾನ ಸೇರ್ಪಡೆ ಕುರಿತ ಎಫ್ಎಟಿಎಫ್ ವಿಚಾರಣೆಗೆ ೨ ದಿನ ಮುನ್ನ
ಕ್ರಮ
ನವದೆಹಲಿ:
೨೦೦೮ರಲ್ಲಿ ೧೬೬
ಮಂದಿಯನ್ನು ಬಲಿತೆಗೆದುಕೊಂಡ ಮುಂಬೈ ದಾಳಿಗಳ ಸೂತ್ರಧಾರಿ ಜಮಾತ್-ಉದ್-ದವಾ (ಜೆಯುಡಿ) ಹಾಗೂ ಲಷ್ಕರ್ -ಇ- ತೊಯ್ಬಾ (ಎಲ್ಇಟಿ) ಮುಖ್ಯಸ್ಥ ಹಫೀಜ್ ಸಯೀದ್ಗೆ ಪಾಕಿಸ್ತಾನಿ ನ್ಯಾಯಾಲಯವೊಂದು
ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ್ದಕ್ಕಾಗಿ 2020 ಫೆಬ್ರುವರಿ 13ರ ಬುಧವಾರ ಐದು ವರ್ಷಗಳ ಸೆರೆವಾಸವನ್ನು ವಿಧಿಸಿತು.
೨೦೦೮ರ ಮುಂಬೈ ಭಯೋತ್ಪಾದಕ ದಾಳಿಗಳ ಬಳಿಕ ಹಫೀಜ್ ಸಯೀದ್ ಸೆರೆವಾಸದ ಶಿಕ್ಷೆಗೆ ಗುರಿಯಾಗಿರುವುದು ಇದೇ ಪ್ರಪ್ರಥಮ.
೨೦೦೮ರ ಮುಂಬೈ ಭಯೋತ್ಪಾದಕ ದಾಳಿಗಳ ಬಳಿಕ ಹಫೀಜ್ ಸಯೀದ್ ಸೆರೆವಾಸದ ಶಿಕ್ಷೆಗೆ ಗುರಿಯಾಗಿರುವುದು ಇದೇ ಪ್ರಪ್ರಥಮ.
ಹಫೀಜ್
ಸಯೀದ್ ನಿಷೇಧಿತ ಭಯೋತ್ಪಾದಕ ಸಂಘಟನೆಯ ಭಾಗವಾಗಿದ್ದ ಮತ್ತು ಅಕ್ರಮ ಸಂಪತ್ತು ಹೊಂದಿದ್ದ ವಿಚಾರಗಳಲ್ಲಿ ತಪ್ಪಿತಸ್ಥ ಎಂಬುದು ಸಾಬೀತಾಗಿದೆ ಎಂದು ಆತನ ವಕೀಲ ಇಮ್ರಾನ್ ಗಿಲ್ ಹೇಳಿದರು.
ಪಾಕಿಸ್ತಾನವನ್ನು
ಕಪ್ಪು ಪಟ್ಟಿ ಅಥವಾ ಬೂದು ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ ಪ್ಯಾರಿಸ್ಸಿನಲ್ಲಿ ನಡೆಯಲಿರುವ ಹಣಕಾಸು ಕಾರ್ಯ ಪಡೆಯ (ಎಫ್ಎಟಿಎಫ್) ವಿಚಾರಣೆಗೆ ಎರಡು ದಿನ ಮುಂಚಿತವಾಗಿ ಪಾಕಿಸ್ತಾನದಲ್ಲಿ ಈ ಬೆಳವಣಿಗೆಯಾಗಿದೆ.
‘ಡಾನ್’ ಪತ್ರಿಕಾ
ವರದಿಯ ಪ್ರಕಾರ ಸಯೀದ್ಗೆ ಎರಡೂ ಪ್ರಕರಣಗಳಲ್ಲಿ
ಸೆರೆವಾಸದ ಜೊತೆಗೆ ತಲಾ ೧೫,೦೦೦ ರೂಪಾಯಿಗಳ
ದಂಡವನ್ನೂ ವಿಧಿಸಲಾಗಿದೆ. ಉಭಯ ಪ್ರಕರಣಗಳ ಶಿಕ್ಷೆಗಳನ್ನೂ ಸಯೀದ್ ಏಕಕಾಲದಲ್ಲೇ ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಇದಕ್ಕೆ
ಮುನ್ನ ಮಂಗಳವಾರ ಲಾಹೋರಿನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು (ಎಟಿಸಿ) ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪಗಳಿಗೆ ಸಂಬಂಧಿಸಿದಂತೆ ತನ್ನ ಹಾಗೂ ನಿಕಟವರ್ತಿಗಳ ವಿರುದ್ಧದ ಎಲ್ಲ ಆರು ಪ್ರಕರಣಗಳನ್ನು ಒಟ್ಟುಗೂಡಿಸುವಂತೆ ಸಯೀದ್ ಮಾಡಿದ ಮನವಿಯನ್ನು ಅಂಗೀಕರಿಸಿತ್ತು. ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ದೈನಂದಿನ ವಿಚಾರಣೆಗಳ ಬಳಿಕ ಡಿಸೆಂಬರ್ ೧೧ರಂದು ಸಯೀದ್ ಮತ್ತು ಆತನ ನಿಕಟವರ್ತಿಗಳು ಭಯೋತ್ಪಾದನೆಗೆ ನೆರವು ನೀಡಿದ ಪ್ರಕರಣಗಳಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು.
‘ಸಯೀದ್
ಮತ್ತು ಅವರ ಆಪ್ತ ಸಹಾಯಕರ ಮನವಿಯನ್ನು ಅಂಗೀಕರಿಸಿತು, ತಮ್ಮ ವಿರುದ್ಧ
ತೀರ್ಮಾನಕ್ಕೆ ಬಂದ ಎರಡು ಭಯೋತ್ಪಾದಕ ಹಣಕಾಸು ಪ್ರಕರಣಗಳಲ್ಲಿ ತೀರ್ಪು ವಿಳಂಬ ಮಾಡುವಂತೆ ಕೋರಿದ ಸಯೀದ್ ಮತ್ತು ಅವರ ಆಪ್ತ ಸಹಾಯಕರ ಮನವಿಯನ್ನು ಲಾಹೋರ್ನ ಭಯೋತ್ಪಾದನಾ-ವಿರೋಧಿ
ನ್ಯಾಯಾಲಯವು ಅಂಗೀಕರಿಸಿತು’ ಎಂದು
ಕೋರ್ಟ್ ಅಧಿಕಾರಿಯೊಬ್ಬರು ವಿಚಾರಣೆಯ ಬಳಿಕ ತಿಳಿಸಿದರು.
ದೂರುಗಳ
ಪ್ರಕಾರ ಸಯೀದ್, ಜಾಫರ್, ಇಕ್ಬಾಲ್, ಯಾಹ್ಯಾ ಅಜೀಜ್, ಅಬ್ದುಲ್ ರೆಹಮಾನ್ ಮಕ್ಕಿ ಈ ನಾಲ್ವರ ವಿರುದ್ಧದ
ಭಯೋತ್ಪಾದನೆಗೆ ಹಣಕಾಸು ನೆರವಿನ ನಾಲ್ಕು ಪ್ರಕರಣಗಳು ಇದೇ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದ ಮುಂದೆ ಬಾಕಿ ಇವೆ. ’ಸಾಕ್ಷ್ಯ ನೀಡಿಕೆಯಲ್ಲಿ ಪ್ರಗತಿಯಾಗಿರುವುದರಿಂದ ನ್ಯಾಯಾಲಯವು ವಿಚಾರಣೆ ಮುಕ್ತಾಯಗೊಂಡಿರುವ ವಿಚಾರಣಾ ನ್ಯಾಯಾಲಯದಲ್ಲಿನ ಪ್ರಕರಣಗಳು ಸೇರಿದಂತೆ ಆರು ಪ್ರಕರಣಗಳ ತೀರ್ಪುಗಳನ್ನು ಪ್ರಕಟಿಸಬಹುದು ಎಂದು ವರದಿ ಹೇಳಿದೆ.
ಕಳೆದ
ತಿಂಗಳು ಸಯೀದ್ ತನ್ನ ವಿರುದ್ಧದ ಎರಡು ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಗಳಲ್ಲಿ ತಾನು ನಿರಪರಾಧಿ ಎಂದು ವಾದಿಸಿದ್ದ.
ಭಯೋತ್ಪಾದನೆ
ನಿಗ್ರಹ ಇಲಾಖೆಯು ಸಯೀದ್ ಮತ್ತು ಆತನ ಸಹಚರರ ವಿರುದ್ಧ ೨೩ ಪ್ರಥಮ ಮಾಹಿತಿ
ವರದಿಗಳನ್ನು (ಎಫ್ಐಆರ್) ದಾಖಲಿಸಿತ್ತು. ಪಂಜಾಬ್ ಪ್ರಾಂತದ ವಿವಿಧ ನಗರಗಳಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಡಿಯಲ್ಲಿ ಈ ಪ್ರಕರಣಗಳನ್ನು ದಾಖಲಿಸಿ
ಕಳೆದ ಜುಲೈ ೧೭ರಂದು ಸಯೀದನನ್ನು ಬಂಧಿಸಲಾಗಿತ್ತು. ಆತನನ್ನು ಲಾಹೋರಿನ ಕೋಟ್ ಲಖ್ಪತಿ ಸೆರೆಮನೆಯಲ್ಲಿ ಇರಿಸಲಾಗಿತ್ತು.
ಹಣಕಾಸು
ಕಾರ್ಯಪಡೆಯ (ಎಫ್ಎಟಿಎಫ್) ಬೂದು ಪಟ್ಟಿಯಿಂದ ತನ್ನನ್ನು ಹೊರಗಿಡುವಂತೆ ಅಂತಾರಾಷ್ಟ್ರೀಯ ಸಮುದಾಯದ ಮನವೊಲಿಸಲು ಪಾಕಿಸ್ತಾನ ಶತಾಯಗತಾಯ ಯತ್ನಿಸುತ್ತಿದೆ. ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದನ್ನು ದಮನಿಸುವ ನಿಟ್ಟಿನಲ್ಲಿ ತಾನು ಅತ್ಯಂತ ಗಂಭೀರವಾಗಿರುವುದಾಗಿ ಅಂತಾರಾಷ್ಟೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಡಲು ಪಾಕಿಸ್ತಾನ ಯತ್ನಿಸುತ್ತಿದೆ ಇದೇ ವೇಳೆಯಲ್ಲಿ ಭಯೋತ್ಪಾದನೆಗೆ ನೆರವಾದ ಅಪರಾಧಕ್ಕಾಗಿ ಸಯೀದ್ ಸೆರೆವಾಸ ಮತ್ತು ದಂಡ ಶಿಕ್ಷೆಗೆ ಒಳಗಾಗಿರುವುದು ಪಾಕಿಸ್ತಾನಕ್ಕೆ ಇರುಸು ಮುರುಸು ಉಂಟು ಮಾಡಿದೆ.
ಬೂದು
ಪಟ್ಟಿಯಲ್ಲಿ ಮುಂದುವರೆಯುವುದರಿಂದ ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳು ಚಟುವಟಿಕೆ ನಡೆಸುತ್ತಿರುವುದು ಮತ್ತು ಹಣ ಸಂಗ್ರಹ ನಡೆಸುತ್ತಿರುವುದನ್ನು
ಕಾರ್ಯಪಡೆಯು ಖಚಿತ ಪಡಿಸಿದಂತಾಗುತ್ತದೆ. ಈ ಹಣೆಟ್ಟಿಯು ಪಾಕಿಸ್ತಾನಕ್ಕೆ
ಜಾಗತಿಕ ಹಣಕಾಸು ಸಂಸ್ಥೆಗಳಿಂದ ವಿದೇಶೀ ಹೂಡಿಕೆ, ಸಲ ಪಡೆಯುವಿಕೆಯನ್ನು ಕಷ್ಟಕರವಾಗುವಂತೆ
ಮಾಡುತ್ತದೆ.
೨೦೦೮ರ
ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ರೂವಾರಿ ಎಂಬುದಾಗಿ ಶಂಕಿಸಲಾಗಿದ್ದರೂ, ಸಯೀದ್ ವಿರುದ್ಧ ಭಯೋತ್ಪಾದಕ ದಾಳಿಯ ಆಪಾದನೆ ಹೊರಿಸಲಾಗಿಲ್ಲ.
ಪಾಕಿಸ್ತಾನದ
ಪ್ರಧಾನಿ ಇಮ್ರಾನ್ ಖಾನ್ ಅವರು ಕಳೆದ ವರ್ಷ ಅಂತಾರಾಷ್ಟೀಯ ಒತ್ತಡ ಮತ್ತು ಎಫ್ಎಟಿಎಫ್ ಬೂದು ಪಟ್ಟಿಯ ಹಿನ್ನೆಲೆಯಲ್ಲಿ ಹಫೀಜ್ ಸಯೀದ್ ವಿರುದ್ಧ ಕ್ರಮಕ್ಕೆ ಆದೇಶ ನೀಡಿದ್ದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ಇಮ್ರಾನ್ ಖಾನ್ ಅವರು ಅಮೆರಿಕಕ್ಕೆ ನೀಡಿದ ಮೂರು ದಿನಗಳ ಭೇಟಿಗೆ ಮುನ್ನ ಸಯೀದನನ್ನು ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಬಂಧಿಸಲಾಗಿತ್ತು.
No comments:
Post a Comment