ಜಪಾನೀ
ವಿಹಾರ ನೌಕೆಯ ಇಬ್ಬರು ಭಾರತೀಯ
ಸಿಬ್ಬಂದಿಗೆ
ಕೊರೋನಾವೈರಸ್ ಸೋಂಕು ದೃಢ
ನವದೆಹಲಿ:
ಜಪಾನ್ ಕರಾವಳಿಯಲ್ಲಿರುವ ವಿಹಾರ ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ನೂತನ ಕೊರೋನಾವೈರಸ್ ಸೋಂಕು ಬಾಧಿಸಿರುವುದು
ದೃಢಪಟ್ಟಿದೆ ಎಂದು ಜಪಾನಿನಲ್ಲಿನ ಭಾರತೀಯ ರಾಯಭಾರ ಕಚೇರಿ 2020 ಫೆಬ್ರುವರಿ
13ರ ಬುಧವಾರ ತಿಳಿಸಿದೆ.
ನೌಕೆಯಲ್ಲಿದ್ದ ಒಟ್ಟು ೧೭೪ ಮಂದಿಗೆ ಮಾರಕ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತ ಪಟ್ಟಿದೆ ಎಂದೂ ಅಧಿಕಾರಿಗಳು ಹೇಳಿದರು.
೩,೭೧೧ ಮಂದಿ ಇದ್ದ ವಿಹಾರ ನೌಕೆ ಡೈಮಂಡ್ ಪ್ರಿನ್ಸೆಸ್ ಜಪಾನೀ ಕರಾವಳಿಗೆ ಕಳೆದ ವಾರಾರಂಭದಲ್ಲಿ ಆಗಮಿಸಿತ್ತು. ಕಳೆದ ತಿಂಗಳು ನೌಕೆಗೆ ಕೊರೋನಾವೈರಸ್ನ್ನು ತಂದಿದ್ದ ಎನ್ನಲಾದ ವ್ಯಕ್ತಿ ಹಾಂಕಾಂಗ್ನಲ್ಲಿ ಇಳಿದ ಬಳಿಕ ನೌಕೆಯನ್ನು ಕಳೆದ ವಾರಾರಂಭದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು.
ಪ್ರಯಾಣಿಕರು
ಮತ್ತು ಸಿಬ್ಬಂದಿ ಸೇರಿ ನೌಕೆಯಲ್ಲಿ ಒಟ್ಟು ೧೩೮ ಮಂದಿ ಭಾರತೀಯರು ಇದ್ದರು.
‘ನೂತನ
ಕೊರೋನಾವೈರಸ್ ಸೋಂಕು ಬಾಧಿಸಿದೆ ಎಂಬ ಶಂಕೆಯಲ್ಲಿ ನೌಕೆಯನ್ನು ಜಪಾನೀ ಅಧಿಕಾರಿಗಳು ೨೦೨೦ ಫೆಬ್ರುವರಿ ೧೯ರವರೆಗೆ ಪ್ರತ್ಯೇಕವಾಗಿ ಇರಿಸಿತ್ತು’
ಎಂದು ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ’ಇಬ್ಬರು ಭಾರತೀಯ ಸಿಬ್ಬಂದಿ ಸೇರಿದಂತೆ ಒಟ್ಟು ೧೭೪ ಮಂದಿಗೆ ಕೊರೋನಾವೈರಸ್ ಸೋಂಕು ತಗುಲಿರುವುದ ದೃಢಪಟ್ಟಿದೆ’ ಎಂದು
ಹೇಳಿಕೆ ತಿಳಿಸಿತು.
ಸೋಂಕು
ಬಾಧಿತರನ್ನು ಜಪಾನೀಯ ಆರೋಗ್ಯ ಪ್ರೊಟೋಕಾಲ್ ಪ್ರಕಾರ ಇನ್ನಷ್ಟು ಏಕಾಂಗಿವಾಸ ಸೇರಿದಂತೆ ಸೂಕ್ತ ಚಿಕಿತ್ಸೆ ಸಲುವಾಗಿ ಆಸ್ಪತ್ರೆಗಳಿಗೆ ಒಯ್ಯಲಾಗಿದೆ ಎಂದೂ ಹೇಳಿಕೆ ತಿಳಿಸಿತು.
ಪರಿಸ್ಥಿತಿಯ
ಮೇಲೆ ನಿಗಾ ಇಡಲಾಗಿದ್ದು, ಸಂಬಂಧಪಟ್ಟ
ಜಪಾನೀ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿ ಇದ್ದೇವೆ ಎಂದು ಭಾರತೀಯ ರಾಯಭಾರಿ ಕಚೇರಿ ಹೇಳಿತು.
‘ಭಾರತೀಯ
ರಾಯಭಾರ ಕಚೇರಿ ಅಧಿಕಾರಿಗಳು ವಿಹಾರ ನೌಕೆಯಲ್ಲಿದ್ದ ಭಾರತೀಯ
ಪ್ರಜೆಗಳನ್ನು ಸಂಪರ್ಕಿಸಿ ಆರೋಗ್ಯ ಮತ್ತು ಸುರಕ್ಷತೆಗೆ
ಸಂಬಂಧಿಸಿದ ಜಪಾನೀ ನಿಯಮಾವಳಿಗಳನ್ನು ವಿವರಿಸಿ ಅವರ ಸಹಕಾರ ಕೋರಿದ್ದಾರೆ. ನೌಕೆಯಲ್ಲಿನ ಭಾರತೀಯರ ಕಳವಳವನ್ನು ಸಂಬಂಧಪಟ್ಟ ಜಪಾನೀ ಅಧಿಕಾರಿಗಳು ಮತ್ತು ಜಪಾನೀ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹಾಗೂ ವಿಹಾರ ನೌಕೆಯ ಕಂಪೆನಿಯ ಗಮನಕ್ಕೂ ತರಲಾಗಿದೆ ಎಂದು ಹೇಳಿಕೆ ತಿಳಿಸಿತು.
No comments:
Post a Comment