ಶಾಹೀನ್
ಬಾಗ್ - ಹೊಸ ತಿರುವು:
ಗುಂಡು ಹಾರಿಸಿದ ವ್ಯಕ್ತಿ ಆಪ್ ಸದಸ್ಯ
ಗುಂಡು ಹಾರಿಸಿದ ವ್ಯಕ್ತಿ ಆಪ್ ಸದಸ್ಯ
ನವದಹಲಿ:
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಶಾಹೀನ್ ಬಾಗ್ ಸಮೀಪ ಶನಿವಾರ ಗುಂಡು ಹಾರಿಸಿರುವ ವ್ಯಕ್ತಿ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಆಪ್) ಸದಸ್ಯ ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು 2020 ಫೆಬ್ರುವರಿ 04ರ ಮಂಗಳವಾರ ಸುದ್ದಿಗಾರರಿಗೆ
ತಿಳಿಸಿದ್ದು, ಇದರೊಂದಿಗೆ ಪ್ರಕರಣ ಕುತೂಹಲಕಾರಿ ತಿರುವು ಪಡೆಯಿತು.
ಶಾಹೀನ್
ಬಾಗ್ನಲ್ಲಿ ಪೊಲೀಸ್ ಬ್ಯಾರಿಕೇಡ್ ಸಮೀಪದಿಂದ ’ಜೈ ಶ್ರೀರಾಮ್’ ಎಂಬುದಾಗಿ ಕೂಗಿ ಗುಂಡು ಹಾರಿಸಿದ ೨೫ರ ಹರೆಯದ ಕಪಿಲ್ ಗುಜ್ಜಾರ್ ತಾನು ಆಪ್ ಸದಸ್ಯ ಎಂಬುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು ಹೇಳಿದರು.
ಶನಿವಾರ
ನೂರಾರು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ಶಾಹೀನ್ ಬಾಗ್ ಸಮೀಪದ ಬ್ಯಾರಿಕೇಡ್ ಹಿಂಭಾಗದಿಂದ ಈ ವ್ಯಕ್ತಿ ಗಾಳಿಯಲ್ಲಿ
ಗುಂಡು ಹಾರಿಸಿದ್ದ. ಪೊಲೀಸರು ಎಳೆದೊಯ್ಯುವಾಗ ಆತ ’ಜೈಶ್ರೀರಾಮ್’ ಎಂಬುದಾಗಿ
ಕೂಗಿದ್ದಲ್ಲದೆ, ’ನಮ್ಮ ದೇಶದಲ್ಲಿ ಹಿಂದುಗಳು ಮಾತ್ರ ಉಳಿಯುತ್ತಾರೆ’ ಎಂದು
ಹೇಳಿದ್ದು ಕೇಳಿಸಿತ್ತು. ಪೊಲೀಸರು ಆತನನ್ನು ವಿಚಾರಣೆ ಸಲುವಾಗಿ ಎರಡು ದಿನಗಳ ಅವಧಿಗೆ ವಶಕ್ಕೆ ಪಡೆದಿದ್ದರು.
‘ನಮ್ಮ
ಪ್ರಾಥಮಿಕ ತನಿಖೆಯಲ್ಲಿ ನಮಗೆ ಕೆಲವು ಫೋಟೋಗಳು ಕಪಿಲ್ ಗುಜ್ಜಾರನ ಫೋನಿನಲ್ಲಿ ಲಭಿಸಿವೆ. ಅವುಗಳು ಆತ ಅತಿಶಿ ಮತ್ತು
ಸಂಜಯ್ ಸಿಂಗ್ ಅವರಂತಹ ಆಪ್ ನಾಯಕರ ಜೊತೆಗೆ ಇದ್ದುದನ್ನು ತೋರಿಸಿವೆ. ಇದಕ್ಕೂ ಮುನ್ನ ಆತ ತಾನು ಮತ್ತು
ತನ್ನ ತಂದೆ ವರ್ಷದ ಹಿಂದೆ ಆಫ್ ಸೇರಿದ್ದುದಾಗಿ ಬಹಿರಂಗ ಪಡಿಸಿದ್ದ’
ಎಂದು ಅಪರಾಧ ವಿಭಾಗದ ಹಿರಿಯ ಅಧಿಕಾರಿ ರಾಜೇಶ್ ದೇವ್ ಹೇಳಿದರು.
ದೆಹಲಿ
ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಇರುವಾಗ ಪೊಲೀಸರು ಈ ವಿಚಾರವನ್ನು ಬಹಿರಂಗ
ಪಡಿಸಿದ್ದಾರೆ. ೫೦ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಶಾಹೀನ್ ಬಾಗ್ ಪ್ರತಿಭಟನೆಯು ಚುನಾವಣಾ ಪ್ರಚಾರದಲ್ಲೂ ಪ್ರಮುಖ ವಿಷಯವಾಗಿ ಪ್ರಸ್ತಾಪಗೊಂಡಿದೆ.
ಆಮ್
ಆದ್ಮಿ ಪಕ್ಷವು ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದು, ಪ್ರತಿಭಟನಕಾರರಿಗೆ ನೆರವು ಒದಗಿಸುತ್ತಿದೆ ಎಂದು ಬಿಜೆಪಿ ಪದೇ ಪದೇ ಆಪಾದನೆ ಮಾಡಿತ್ತು.
No comments:
Post a Comment