‘ನಾವು
ಹೋರಾಡಬೇಕಾಗಿದೆ, ಹೋರಾಡುತ್ತೇವೆ’
ದೆಹಲಿ
ಕಳಪೆಸಾಧನೆಗೆ ಪ್ರಿಯಾಂಕಾ ಪ್ರತಿಕ್ರಿಯೆ
ನವದೆಹಲಿ:
’ಹಳೆಯ ಮಹಾನ್ ಪಕ್ಷಕ್ಕೆ ಈಗ ಹೋರಾಟದ ಸಮಯ’ ಎಂಬುದಾಗಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಳಿಕ ಬುಧವಾರ ಇಲ್ಲಿ ಹೇಳಿದರು.
‘ಸಾರ್ವಜನಿಕರು
ಏನು ಮಾಡುತ್ತಾರೋ ಅದು ಸರಿ. ನಮಗೆ ಇದೀಗ ಹೋರಾಟದ ಸಮಯ. ನಾವು ಬಹಳಷ್ಟು ಹೋರಾಟ ಮಾಡಬೇಕಾಗಿದೆ, ಮತ್ತು ನಾವು ಹೋರಾಡುತ್ತೇವೆ’ ಎಂದು
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶಗಳಿಗೆ ಆಜಂಗಢದ ಬಿಲಾರಿಗಂಜ್ನಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಅವರು ಪ್ರತಿಕ್ರಿಯಿಸಿದರು.
ಸತತ
ಎರಡನೇ ಬಾರಿಗೆ ದೆಹಲಿಯ ವಿಧಾನಸಭಾ ಚುನಾವಣೆಗಳಲ್ಲಿ ಒಂದು ಸ್ಥಾನವನ್ನು ಗಳಿಸಲು ಕೂಡಾ ಕಾಂಗ್ರೆಸ್ ವಿಫಲವಾಗಿದೆ. ೭೦ ಸದಸ್ಯಬಲದ ವಿಧಾನಸಭಾ
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ೬೬ ಕಾಂಗ್ರೆಸ್ ಅಭ್ಯರ್ಥಿಗಳ
ಪೈಕಿ ಮೂವರು ಮಾತ್ರ ತಮ್ಮ ಭದ್ರತಾ ಠೇವಣಿ ಉಳಿಸಿಕೊಳ್ಳಲು ಸಫಲರಾಗಿದ್ದಾರೆ. ಶೇಕಡಾ ೨೧.೪೩ರಷ್ಟು ಮತಗಳ
ಪಾಲು ಪಡೆಯುವಲ್ಲಿ ಸಫಲರಾದ ಕಸ್ತೂರ್ಬಾ ನಗರದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ದತ್ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅತ್ಯಂತ ಹೆಚ್ಚು ಮತಪಾಲು ಪಡೆದವರಾಗಿದ್ದಾರೆ.
ಪಕ್ಷದ
ಪರಾಭವಕ್ಕೆ ಇಬ್ಬರು ಪ್ರಮುಖರು ಈಗಾಗಲೇ ಹೊಣೆ ಹೊತ್ತಿದ್ದಾರೆ. ದೆಹಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿದ ಪಿಸಿ ಚಾಕೋ ಅವರು ತಮ್ಮ ಹುದ್ದೆಗೆ ಚುನಾವಣಾ ಫಲಿತಾಂಶ ಪ್ರಕಟಗೊಂಡ ಮರುದಿನವಾದ ಬುಧವಾರ ರಾಜೀನಾಮೆ ನೀಡಿದ್ದಾರೆ. ದೆಹಲಿ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸುಭಾಶ್ ಛೋಪ್ರಾ ಅವರು ಮಂಗಳವಾರ, ಕಾಂಗ್ರೆಸ್ ದೋಣಿ ಹೇಳಹೆಸರಿಲ್ಲದಂತೆ ಮುಳುಗುತ್ತಿದ್ದಂತೆಯೇ ರಾಜೀನಾಮೆ ನೀಡಿದ್ದರು.
ಕಾಂಗೆಸ್
ಪಕ್ಷವು ೧೯೯೮ರಿಂದ ೨೦೧೩ರ ನಡುವಣ ೧೫ ವರ್ಷಗಳ ಅವಧಿಯಲ್ಲಿನ
ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಕಾಲದ ’ಒಳ್ಳೆಯ ಕೆಲಸ’ಗಳ ಸುತ್ತ ತನ್ನ
ದುರ್ಬಲ ಪ್ರಚಾರವನ್ನು ನಡೆಸಿತ್ತು. ಆದರೆ ಇದಕ್ಕೆ ಮತದಾರರು ಸ್ಪಂದಿಸಲಿಲ್ಲ.
ಕಾಂಗ್ರೆಸ್
ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆರೋಗ್ಯದ ಕಾರಣ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪ್ರಚಾರ ಅಭಿಯಾನದ ಕೊನೆಯಲ್ಲಿ ಕೆಲವು ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ಅರವಿಂದ
ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ೭೦ ಸ್ಥಾನಗಳ ಪೈಕಿ
೬೨ ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದ ಅಲೆಯನ್ನೇ ಎಬ್ಬಿಸಿತು.
ದೆಹಲಿ ಚುನಾವಣೆಗೆ ಅಗ್ರ ಪ್ರಾಶಸ್ತ್ಯ ನೀಡಿದ್ದ ಬಿಜೆಪಿಯು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ತನ್ನ
ಪ್ರಮುಖ ನಾಯಕರ ಮೂಲಕ ’ಹೈ ವೋಲ್ಟೇಜ್’ ಪ್ರಚಾರ ನಡೆಸಿದರೂ ಕೇವಲ ೮ ಸ್ಥಾನಗಳನ್ನು ಗೆದ್ದುಕೊಂಡಿತ್ತು.
No comments:
Post a Comment