ಮಾರ್ಚ್
೫ಕ್ಕೆ ರಾಜ್ಯ ಬಜೆಟ್: ಟಿವಿ
ಕ್ಯಾಮರಾಗಳಿಗೆ ನಕಾರ
ಸ್ಪೀಕರ್
ವಿಶ್ವೇಶ್ವರ ಹೆಗಡೆ ಆದೇಶ
ಬೆಂಗಳೂರು:
ರಾಜ್ಯ ಸರ್ಕಾರದ ಮುಂಗಡಪತ್ರ (ಬಜೆಟ್) ಮಾರ್ಚ್ ೫ ರಂದು ಮಂಡನೆಯಾಗಲಿದ್ದು,
ಈ ಬಾರಿಯ ಅಧಿವೇಶನಕ್ಕೆ
ಎಲೆಕ್ಟ್ರಾನಿಕ್ ಮಾಧ್ಯಮಗಳ ಕ್ಯಾಮರಾಗಳಿಗೆ ವಿಧಾನಸಭೆಯ ಒಳಗೆ ಅವಕಾಶವಿಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಮಾಧ್ಯಮಗಳಿಗೆ
2020 ಫೆಬ್ರುವರಿ 14ರ ಶುಕ್ರವಾರ
ಈ ವಿಷಯ ತಿಳಿಸಿರುವ ಕಾಗೇರಿ, ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯ ವ್ಯವಸ್ಥೆಯನ್ನು ರಾಜ್ಯದಲ್ಲೂ ಪಾಲಿಸಲಾಗುತ್ತದೆ ಎಂದು ಹೇಳಿದರು.
ಫೆಬ್ರುವರಿ
೧೭ರಿಂದ ೩೧ರವರಗೆ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಮಾರ್ಚ್
೨ ಮತ್ತು ೩ರಂದು ಸಂವಿಧಾನದ ಕುರಿತು ಚರ್ಚೆ ನಡೆಯಲಿದೆ. ಮಾರ್ಚ್ ೫ ರಂದು ಬಜೆಟ್
ಮಂಡನೆ ಆಗಲಿದೆ ಎಂದು ಕಾಗೇರಿ ಹೇಳಿದರು.
ಅಧಿವೇಶನದಲ್ಲಿ
ಒಟ್ಟು ೬ ಮಸೂದೆಗಳು ಮಂಡನೆ
ಆಗಲಿವೆ. ಎಲ್ಲಾ ಸದಸ್ಯರು ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾಗೇರಿ ಸೂಚಿಸಿದರು.
No comments:
Post a Comment