ಪತ್ತೆ ಹಚ್ಚಿದ
ವೈದ್ಯನನ್ನೇ ಬಲಿ ಪಡೆದ ಕೊರೋನಾವೈರಸ್
ನವದೆಹಲಿ/
ಬೀಜಿಂಗ್: ಜಗತ್ತನ್ನು ಬೆಚ್ಚಿ ಬೀಳಿಸಿರುವ ನೂತನ ಕೊರೋನಾವೈರಸ್ ಬಗ್ಗೆ ತನ್ನ ಸರ್ಕಾರಕ್ಕೆ ಮೊತ್ತ ಮೊದಲಿಗೆ ವರದಿ ಮಾಡಿದ್ದ ಚೀನೀ ವೈದ್ಯನೇ ಇದೀಗ (2020 ಫೆಬ್ರುವರಿ 06ರ ಗುರುವಾರ) ಕೊರೋನಾವೈರಸ್ಗೆ ಬಲಿಯಾಗಿರುವ ವರದಿ
ಬಂದಿತು. ಈ
ವೈದ್ಯ ಮಾರಕ ಸೋಂಕಿನ ಬಗ್ಗೆ ವರದಿ ಮಾಡಿದಾಗ ಅದನ್ನು ನಿರ್ಲಕ್ಷಿಸಲಾಗಿತ್ತು.
ಚೀನಾದ
ಸರ್ಕಾರಿ ಸ್ವಾಮ್ಯದ ’ಗ್ಲೋಬಲ್
ಟೈಮ್ಸ್’ ವರದಿಯ
ಪ್ರಕಾರ ಡಾಕ್ಟರ್ ಲೀ ವೆನ್ಲಿಯಾಂಗ್ ಅವರು
ಶಂಕಿತ ಸಾರ್ಸ್ ಮಾದರಿಯ ಮಾರಕ ಸೋಂಕು ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಲ್ಲಿ ಹರಡುತ್ತಿರುವ ಬಗ್ಗೆ ಮೊತ್ತ ಮೊದಲಿಗೆ ವರದಿ ಮಾಡಿದ್ದರು. ಬಳಿಕ ಇದೇ ಕೊರೋನಾ ವೈರಸ್ಗೆ ಬಲಿಯಾಗಿ ಅವರು
ಸಾವನ್ನಪ್ಪಿದರು.
೩೪ರ
ಹರೆಯದ ವೆನ್ಲಿಯಾಂಗ್ ನೇತ್ರ ತಜ್ಞರಾಗಿದ್ದು ವುಹಾನ್ ಕೇಂದ್ರೀಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಮೊತ್ತ ಮೊದಲಿಗೆ ತಮ್ಮ ಜಿಲ್ಲೆಯಲ್ಲಿ ಸಾಂಕ್ರಾಮಿಕ ವೈರಸ್ ಸೋಂಕು ಹರಡುತ್ತಿರುವ ಬಗ್ಗೆ ತಮ್ಮ ಗೆಳೆಯರಿಗೆ ಡಿಸೆಂಬರ್ ೩೦ರಷ್ಟು ಹಿಂದೆಯೇ ಸಂದೇಶಗಳ (ಮೆಸ್ಸೇಜ್) ಮೂಲಕ ತಿಳಿಸಿದ್ದರು.
ಕಳೆದ
ವರ್ಷ ಡಿಸೆಂಬರಿನಷ್ಟು ಹಿಂದೆಯೇ ವೈರಸ್ ಬಗ್ಗೆ ವರದಿ ಮಾಡಿದ ಪ್ರಥಮ ವ್ಯಕ್ತಿ ಅವರಾಗಿದ್ದರು. ಕೇಂದ್ರ ಹುಬೇ ಪ್ರಾಂತದ ರಾಜಧಾನಿಯಾದ ವುಹಾನ್ ನಗರದಲ್ಲಿ ವ್ಯಾಧಿ ಮೊತ್ತ ಮೊದಲಿಗೆ ಕಾಣಿಸಿಕೊಂಡು ಹರಡಲು ಆರಂಭವಾದಾಗಲೇ ಅವರು ಈ ಬಗ್ಗೆ ಗಮನ
ಸೆಳೆದಿದ್ದರು.
ತಮ್ಮ
ಆಸ್ಪತ್ರೆಗೆ ದಾಖಲಾದ ೭ ಮಂದಿ ರೋಗಿಗಳಲ್ಲಿ
ಸಾರ್ಸ್ ಮಾದರಿಯ ರೋಗ ಲಕ್ಷಣಗಳು ಕಾಣುತ್ತಿವೆ ಎಂದು ಇನ್ ಸ್ಟಾಂಟ್ ಮೆಸ್ಸೇಜಿಂಗ್ ಆಪ್ ಮೂಲಕ ಅವರು ಇತರ ವೈದ್ಯರಿಗೆ ತಿಳಿಸಿದ್ದರು. ಎಲ್ಲ ಏಳೂ ಮಂದಿ ರೋಗಿಗಳೂ ಹುಬೇಯ ಒಂದೇ ಸಾಗರ ಆಹಾರ ಮಾರುಕಟ್ಟೆಯಿಂದ ಪ್ರಾಣಿಗಳ ಮಾಂಸ ತಿಂದಿದ್ದರು ಎಂದು ನೇತ್ರ ತಜ್ಞ ತಿಳಿಸಿದ್ದರು.
ತಾವು
ನಡೆಸಿದ ಪರೀಕ್ಷೆಗಳ ಪ್ರಕಾರ ಇದು ವೈರಸ್ ಕುಟುಂಬಕ್ಕೆ ಸೇರಿದ ’ಕೊರೋನಾ ವೈರಸ್’ ಆಗಿದೆ. ಚೀನಾದಲ್ಲಿ ೨೦೦೩ರಲ್ಲಿ ೮೦೦ ಮಂದಿಯನ್ನು ಬಲಿ ತೆಗೆದುಕೊಂಡ ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಇದೇ ವೈರಸ್ ಕುಟುಂಬಕ್ಕೆ ಸೇರಿದ್ದು ಎಂದು ಲೀ ವಿವರಿಸಿದ್ದರು.
ಲೀ
ಅವರ ಸಂದೇಶ ಅವರು ವೈದ್ಯಕೀಯ ಗೆಳೆಯರಿಗೆ ಪ್ರೀತಿಪಾತ್ರರ ಬಗ್ಗೆ ಕಾಳಜಿ ವಹಿಸಲು ನೀಡಿದ್ದ ಎಚ್ಚರಿಕೆಯ ಗಂಟೆಯಾಗಿತ್ತು. ಆದರೆ ವೆನ್ ಲಿಯಾಂಗ್ ಅವರು ಮಾಹಿತಿ ನೀಡಿದ ಗಂಟೆಗಳ ಒಳಗಾಗಿ ಚೀನೀ ಸಾಮಾಜಿಕ ಮಾಧ್ಯಮದಲ್ಲಿ ಚಾಟ್ಗಳು ಕಾಳ್ಗಿಚ್ಚಿನಂತೆ ಹರಡಿದ್ದವು.
ಅವರ
ಹೆಸರು ನೂರಾರು ಮಂದಿಗೆ ಪರಿಚಿತವಾಯಿತು. ’ಆನ್ ಲೈನ್ ನಲ್ಲಿ ವಿಷಯ ಪ್ರಸಾರವಾಗುತ್ತಿರುವುದನ್ನು ಕಂಡಾಗ, ನನಗೆ ಇದು ನನ್ನ ನಿಯಂತ್ರಣ ಮೀರಿದೆ ಎಂಬುದು ಗೊತ್ತಾಯಿತು. ನಾನು ಶಿಕ್ಷೆಗೊಳಗಾಗಬಹುದು ಎಂದು ದಿಗಿಲಾಯಿತು’ ಎಂದು ಲೀ
ಹೇಳಿದ್ದನ್ನು ಸಿಎನ್ಎನ್ ಇತ್ತೀಚೆಗೆ ಉಲ್ಲೇಖಿಸಿತ್ತು.
ದುರ್ದೈವ ಎಂದರೆ
ಲೀ ಭಯಪಟ್ಟದ್ದು ನಿಜವಾಗಿ ಬಿಟ್ಟಿತು. ಜನವರಿ ೩ರಂದು ಚೀನೀ ಅಧಿಕಾರಿಗಳು ಲೀ ಮತ್ತು ಇತರ
೭ ಮಂದಿ ವೈದ್ಯರಿಗೆ ಸಮನ್ಸ್ ನೀಡಿದರು ಮತ್ತು ಅವರು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆಪಾದಿಸಿದರು. ವದಂತಿಗಳಿಗೆ ಕಡಿವಾಣ ಹಾಕುವಂತೆ ಕಠಿಣ ಎಚ್ಚರಿಕೆಯನ್ನು ಚೀನಾದ್ಯಂತ ಪ್ರಸಾರ ಮಾಡಲಾಯಿತು.
‘ವದಂತಿಗಳನ್ನು
ಸೃಷ್ಟಿಸಬೇಡಿ, ವದಂತಿಗಳನ್ನು ಹರಡಬೇಡಿ, ವದಂತಿಗಳನ್ನು ನಂಬಬೇಡಿ’ ಎಂಬ ಸಂದೇಶವನ್ನು ಪೊಲೀಸರು ಎಲ್ಲ ನೆಟಿಜನ್ಗಳಿಗೆ ನೀಡಿದರು.
ತನ್ನ
ಅಪರಾಧವನ್ನು ಒಪ್ಪಿಕೊಳ್ಳುವ ಪ್ರಮಾಣಪತ್ರಕ್ಕೆ ಲೀ ಸಹಿ ಮಾಡಬೇಕಾಯಿತು.
ಭವಿಷ್ಯದಲ್ಲಿ ಇನ್ನೆಂದೂ ಇಂತಹ ಚಟುವಟಿಕೆ ನಡೆಸುವುದಿಲ್ಲ ಎಂಬ ಭರವಸೆಗೂ ಅವರು ಸಹಿ ಮಾಡಬೇಕಾಯಿತು.
ಬಳಿಕ
ನೇತ್ರ ತಜ್ಞ ತಮ್ಮ ಕೆಲಸಕ್ಕೆ ಮರಳಿದರು. ಕೊರೋನಾವೈರಸ್ ಅಂಟಿದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿದ್ದಾಗ ಸೋಂಕು ಲೀ ಅವರಿಗೂ ವರ್ಗಾವಣೆಯಾಯಿತು.
ಬಳಿಕದ ಕೆಲ ದಿನಗಳಲ್ಲಿ ಲೀ ಅವರಲ್ಲೂ ಕೊರೋನಾ
ವೈರಸ್ ರೋಗ ಲಕ್ಷಣಗಳು ಕಾಣಿಸಿಕೊಂಡವು. ಜನವರಿ ೧೨ರ ವೇಳೆಗೆ ಲೀ ಆಸ್ಪತ್ರೆಗೆ ಸೇರಿಸಲ್ಪಟ್ಟರು.
ಅವರ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು.
ಜನವರಿ
೨೦ರವರೆಗೂ ಚೀನಾವು ಕೊರೋನಾವೈರಸ್ ಹರಡುತ್ತಿರುವ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಆದರೆ ಜನವರಿ ೨೦ರ ವೇಳೆಗೆ ಚೀನಾವು ಕೊರೋನಾವೈರಸ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ತುರ್ತು ಸ್ಥಿತಿ ಘೋಷಿಸಿತು. ಚೀನೀ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ’ಜನರ ಪ್ರಾಣ ಮತ್ತು ಆರೋಗ್ಯಕ್ಕೆ ಅಗ್ರ ಪ್ರಾಶಸ್ತ್ಯ ನೀಡಬೇಕು ಮತ್ತು ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು’ ಎಂದು
ಸೂಚಿಸಿದರು.
ನೇತ್ರ
ತಜ್ಞ ಲೀ ಅವರಿಗೆ ಸೋಂಕಿದ್ದು
’ಕೊರೋನಾ ವೈರಸ್’ ಎಂಬುದು ರೋಗ ತಪಾಸಣೆಗಳಿಂದ ಫೆಬ್ರುವರಿ ೧ರಂದು ದೃಢಪಟ್ಟಿತು. ಆ ಬಳಿಕ ಅವರು
ಬದುಕಿದ್ದು ಐದು ದಿನ ಮಾತ್ರ. ಫೆಬ್ರುವರಿ ೬ರಂದು ಲೀ ಇಹಲೋಕ ತ್ಯಜಿಸಿದರು.
No comments:
Post a Comment