ದೆಹಲಿ
ಗಲಭೆ ಪೂರ್ವ ನಿಯೋಜಿತ, ತಪ್ಪಿತಸ್ಥರನ್ನು ಬಿಡೆವು: ಅಮಿತ್
ಶಾ ಗುಡುಗು
ನವದೆಹಲಿ:
ರಾಷ್ಟ್ರ ರಾಜಧಾನಿಯಲ್ಲಿ ಫೆಬ್ರುವರಿ ತಿಂಗಳಲ್ಲಿ ೫೨ ಮಂದಿಯನ್ನು ಬಲಿ
ಪಡೆದ ಕೋಮು ಗಲಭೆಯು ಪೂರ್ವ ನಿಯೋಜಿತ ಸಂಚಿನ ಭಾಗವಾಗಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಸಂಸತ್ತಿಗೆ 2020 ಮಾರ್ಚ್ 11ರ ಬುಧವಾರ ತಿಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈವರೆಗಿನ
ತನಿಖೆಗಳು ಗಲಭೆಯು ಸಂಘಟಿತವಾದುದಾಗಿತ್ತು ಎಂಬುದಾಗಿ ಸೂಚಿಸಿವೆ ಎಂದು ಹೇಳಿದರು.
ಇಷ್ಟೊಂದು
ಸಂಘಟಿತವಾದ ಗಲಭೆಗಳು ಪೂರ್ವ ನಿಯೋಜಿತವಾಗಿ ಇಲ್ಲದೇ ಇದ್ದಲ್ಲಿ ನಡೆಯಲು ಸಾಧ್ಯವಿರಲಿಲ್ಲ ಎಂದು ಶಾ ಲೋಕಸಭೆಯಲ್ಲಿ ನಡೆದ
ಚರ್ಚೆಗೆ ಉತ್ತರ ನೀಡುತ್ತಾ ನುಡಿದರು. ಆದರೆ
ಯಾರೇ ಶಿಕ್ಷಿಸದೆ ತಪ್ಪಿತಸ್ಥರನ್ನೂ ಬಿಡುವುದಿಲ್ಲ ಎಂದು ಶಾ ಗುಡುಗಿದರು.
ಲೋಕಸಭೆಯಲ್ಲಿ
ಮೀನಾಕ್ಷಿ ಲೇಖಿ ಅವರ ಬಳಿಕ ಮಾತನಾಡಿದ ಗೃಹ ಸಚಿವರು ’ಫೆಬ್ರುವರಿ ೨೫ರ ಮಧ್ಯಾಹ್ನ ೧೧ ಗಂಟೆಯ ಬಳಿ
ಗಲಭೆಯ ಒಂದೇ ಒಂದು ಘಟನೆಯೂ ಘಟಿಸಿಲ್ಲ, ದೆಹಲಿ ಪೊಲೀಸರು ೩೬ ಗಂಟೆಗಳ ಒಳಗಾಗಿ
ಗಲಭೆಗಳನ್ನು ಹತೋಟಿಗೆ ತಂದಿದ್ದಾರೆ ಎಂದು ಹೇಳಿ ಅವರನ್ನು ಅಭಿನಂದಿಸಿದರು.
ದೆಹಲಿ
ಗಲಭೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ದಾಂಜಲಿ ಮತ್ತು ಅವರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಶಾ ಫೆಬ್ರುವರಿ ೨೫ರ
ನಂತರ ದೆಹಲಿಯಲ್ಲಿ ಯಾವುದೇ ಗಲಭೆ ನಡೆದಿಲ್ಲ. ಈ ಗಲಭೆಗಳಿಗೆ ರಾಜಕೀಯ
ಬೆರೆಸುವ ಹುನ್ನಾರ ನಡೆದಿದೆ ಎಂದು ನುಡಿದರು.
ಹೋಳಿ
ಹಬ್ಬದ ನಂತರವೇ ದೆಹಲಿ ಗಲಭೆ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಕ್ಕೆ ಕಾರಣ, ಹಬ್ಬದ ಸಮಯದಲ್ಲಿ ಕೋಮು ಗಲಭೆಯುಂಟಾಗಬಾರದು ಎಂಬ ಉದ್ದೇಶದಿಂದ ಎಂದು ಸ್ಪಷ್ಟ ಪಡಿಸಿದ ಗೃಹಸಚಿವರು ’ಗಲಭೆ ವೇಳೆ ದೆಹಲಿ ಪೊಲೀಸರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಲಾಗುತ್ತಿದೆ. ಪೊಲೀಸರು
ಅಲ್ಲಿಯೇ ಇದ್ದರು. ಗಲಭೆ
ಬಗ್ಗೆ ತನಿಖೆ ನಡೆಸಿ ಪೊಲೀಸರು ಶೀಘ್ರವೇ ವರದಿ ಸಲ್ಲಿಸಲಿದ್ದಾರೆ. ಇತರ ಪ್ರದೇಶಗಳಿಗೆ ಗಲಭೆ ಹರಡದಂತೆ ತಡೆಯುವಲ್ಲಿ ಅವರು ಸಫಲರಾಗಿದ್ದಾರೆ’ ಎಂದು
ವಿವರಿಸಿದರು.
‘ದೆಹಲಿ
ಪೊಲೀಸರು ೩೬ ಗಂಟೆಗಳೊಳಗೆ ಗಲಭೆ
ನಿಯಂತ್ರಿಸಿದ್ದರು. ದೆಹಲಿಯ ಜನಸಂಖ್ಯೆ ೧.೭ ಕೋಟಿ. ಹಿಂಸಾಚಾರ
ನಡೆದ ಪ್ರದೇಶದಲ್ಲಿರುವ ಜನರ ಸಂಖ್ಯೆ
೨೦ ಲಕ್ಷ . ದೆಹಲಿ
ಪೊಲೀಸರು ಗಲಭೆ ನಿಯಂತ್ರಿಸಿದರು. ಶೇ.೪ ಭೂಪ್ರದೇಶದಲ್ಲಿ ಮತ್ತು
ದೆಹಲಿಯ ಶೇ.೧೩ ಭೂಪ್ರದೇಶವನ್ನು
ಹೊರತುಪಡಿಸಿ ಬೇರೆಲ್ಲಿಯೂ ಗಲಭೆ ಹಬ್ಬದಂತೆ ಪೊಲೀಸರು ನೋಡಿಕೊಂಡರು’
‘ಅಮೆರಿಕದ
ಅಧ್ಯಕ್ಷರ ಕಾರ್ಯಕ್ರಮ ಪೂರ್ವ ನಿಗದಿತವಾಗಿತ್ತು. ನನ್ನ ಚುನಾವಣಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮ ಅದಾಗಿದ್ದು ನನ್ನ ಭೇಟಿಯೂ
ಪೂರ್ವ ನಿಗದಿಯಾದಿತ್ತು. ಮರುದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಗೆ ಭೇಟಿ ನೀಡಿದಾಗ ನಾನು ಅಲ್ಲಿರಲಿಲ್ಲ. ಇಡೀ ದಿನ ನಾನು ಪೊಲೀಸ್ ಅಧಿಕಾರಿಗಳೊಂದಿಗೆ ಕುಳಿತಿದ್ದೆ. ಆ
ಪ್ರದೇಶಕ್ಕೆ ಭೇಟಿ
ನೀಡುವಂತೆ ನಾನು ರಾಷ್ಟ್ರೀಯ ಭದ್ರತಾ ಸಂಸ್ಥೆಗೆ ಮನವಿ ಮಾಡಿದ್ದೆ.’ ಎಂದು ಶಾ ಹೇಳಿದರು.
‘ಗಲಭೆ
ಪೀಡಿತ ಪ್ರದೇಶಕ್ಕೆ ಭೇಟಿ ನೀಡದೇ ಇದ್ದುದಕ್ಕೆ ಕಾರಣ ನನ್ನ ಸುರಕ್ಷೆಗಾಗಿ ಅಲ್ಲಿರುವ ಭದ್ರತಾ ಸಂಪನ್ಮೂಲಗಳು ಬಳಕೆಯಾಗದಿರಲಿ ಎಂಬುದಾಗಿತ್ತು. ದೆಹಲಿ ಪೊಲೀಸರು ಏನು ಮಾಡುತ್ತಿದ್ದರು ಎಂದು ಹಲವಾರು ಸದಸ್ಯರು ಪ್ರಶ್ನೆಗಳನ್ನೆತ್ತಿದ್ದಾರೆ. ವಿರೋಧ
ಪಕ್ಷದ ಜವಾಬ್ದಾರಿ ಅದು. ಸಂಸತ್ತಿನ
ಒಳಗೂ ಹೊರಗೂ ಇದನ್ನು ಪ್ರಶ್ನಿಸಬೇಕು’ ಎಂದು
ಶಾ ನುಡಿದರು.
‘ಯಾವೊಬ್ಬ
ಅಮಾಯಕ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡುತ್ತೇವೆ. ಸಶಸ್ತ್ರ ಕಾಯ್ದೆಯಡಿ ೪೯ ಪ್ರಕರಣ ದಾಖಲಾಗಿದ್ದು
೧೫೩ ಸಶಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಫೆಬ್ರುವರಿ ೨೫ರ
ನಂತರ ಶಾಂತಿ
ಸಮಿತಿಯು ೬೫೦ಕ್ಕಿಂತಲೂ ಹೆಚ್ಚು ಸಭೆ ನಡೆಸಿದೆ.’
‘ಒಂದು
ದೊಡ್ಡ ಪಕ್ಷದ ಪ್ರದರ್ಶನ ನಡೆಯಿತು. ಮನೆಯಿಂದ ಹೊರಗೆ ಬನ್ನಿ. ಇದು ಆಕಡೆ ಈಕಡೆ ನಡುವಿನ ಜಗಳ ಎಂದು ಹೇಳಲಾಯಿತು. ಇದು ದ್ವೇಷ ಭಾಷಣ ಎಂದು ನಿಮಗನಿಸುವುದಿಲ್ಲವೇ? ಇಷ್ಟೊಂದು
ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯಿತು. ಕಡಿಮೆ ಸಮಯದಲ್ಲಿ ಇದೆಲ್ಲ ನಡೆಯಲು ಸಂಚು ಕಾರಣ. ಈ ಹಿಂಸಾಚಾರದ ಹಿಂದೆ
ಸಂಚು ನಡೆದಿದೆ ಎಂದು ನಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಈಶಾನ್ಯ ದೆಹಲಿ ಗಲಭೆಗೆ ಹಣಕಾಸು ನೆರವು ನೀಡಿದ ಮೂವರನ್ನು ಬಂಧಿಸಿದ್ದೇವೆ’ ಎಂದು
ಶಾ ಸದನಕ್ಕೆ ವಿವರಿಸಿದರು.
ಹಿಂಸಾಚಾರದ
ವಿಡಿಯೊಗಳನ್ನು ಕಳುಹಿಸಿ ಎಂದು ಜನರಲ್ಲಿ ಮತ್ತು ಮಾಧ್ಯಮದವರಿಗೆ ನಾವು ಹೇಳಿದ್ದೆವು. ಆದರೆ ದೆಹಲಿಯ ಜನರು ವಿಡಿಯೊಗಳನ್ನು ಸಾವಿರ ಬಾರಿ ಪೊಲೀಸರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದೂ ಅವರು ನುಡಿದರು.
ಪ್ರಜಾಪ್ರಭುತ್ವದ
ರೀತಿಯಲ್ಲಿಯೇ ಸಿಎಎಗೆ ಮತ ನೀಡಿ ಅಂಗೀಕರಿಸಲ್ಪಟ್ಟಿತ್ತು.
ಸಿಎಎಯಿಂದಾಗಿ ಧಾರ್ಮಿಕ ಅಲ್ಪಸಂಖ್ಯಾತರು ಪೌರತ್ವ ಕಳೆದುಕೊಳ್ಳುತ್ತಾರೆ ಎಂದು ತಪ್ಪಾದ ಮಾಹಿತಿ ದೇಶದಾದ್ಯಂತ ಹಬ್ಬಿದೆ. ಪೌರತ್ವ ನಷ್ಟವಾಗಲಿದೆ ಎಂದು ಹೇಳಿರುವುದು ಎಲ್ಲಿ ಎಂದು ಪ್ರಶ್ನಿಸಿದ ಅವರು ಫೆಬ್ರುವರಿ ೨೨ರಂದು
ಸಾಮಾಜಿಕ ಮಾಧ್ಯಮಗಳಲ್ಲಿ ೬೦ ಖಾತೆಗಳು ತೆರೆಯಲಾಗಿದ್ದು,
ಫೆಬ್ರುವರಿ ೨೬ಕ್ಕೆ ಅವುಗಳನ್ನು
ಮುಚ್ಚಲಾಯಿತು. ಇದರ
ಹಿಂದಿರುವವರು ಯಾರು ಎಂದು ಪೊಲೀಸರು ಪತ್ತೆ ಹಚ್ಚಲಿದ್ದಾರೆ. ದ್ವೇಷವುಂಟು ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸಲಾಗಿದೆ ಎಂದು ನುಡಿದರು.
No comments:
Post a Comment