Tuesday, March 24, 2020

ಭಾರತಕ್ಕಿದೆ ಕೊರೊನಾವೈರಸ್ ನಿರ್ಮೂಲನಾ ಸಾಮರ್ಥ್ಯ: ವಿಶ್ವ ಆರೋಗ್ಯ ಸಂಸ್ಥೆ

ಭಾರತಕ್ಕಿದೆ ಕೊರೊನಾವೈರಸ್  ನಿರ್ಮೂಲನಾ ಸಾಮರ್ಥ್ಯ: ವಿಶ್ವ ಆರೋಗ್ಯ ಸಂಸ್ಥೆ
ಜಿನೇವಾ: ಸಿಡುಬು ಮತ್ತು ಪೋಲಿಯೊ ಎಂಬ ಎರಡು ಮೌನ ಕೊಲೆಗಡುಕ ನಿರ್ಮೂಲನೆ ಮಾಡುವಲ್ಲಿ ಹಿಂದೆ ಜಗತ್ತನ್ನು ಮುನ್ನಡೆಸಿದ ಭಾರತ, ಇದೀಗ ಜಾಗತಿಕವಾಗಿ ಸುಮಾರು ೧೫,೦೦೦ ಜೀವಗಳನ್ನು ಬಲಿ ಪಡೆದಿರುವ ಮಾರಣಾಂತಿಕ ಕೊರೊನೊವೈರಸ್ ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವಲ್ಲಿಯೂ ಮಾರ್ಗದರ್ಶನ ಮಾಡುವ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್) ಉನ್ನತ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತ ಪಡಿಸಿದರು.

ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತವು ಏಕಾಏಕಿ ಎದುರಾಗಿರುವ ಕೊರೋನವೈರಸ್ ಸೋಂಕನ್ನು ಎದುರಿಸಿ ನಿವಾರಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ ಏಕೆಂದರೆ ಇದು ಸಿಡುಬು ಮತ್ತು ಮತ್ತು ಪೋಲಿಯೊವ ನಿರ್ಮೂಲನೆ ಮಾಡಿದ ಅನುಭವವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್) ಆಡಳಿತ ನಿರ್ದೇಶಕ ಮೈಕೆಲ್ ರಯಾನ್ ಹೇಳಿದರು.

ಕೋವಿಡ್-೧೯ ಸಾಂಕ್ರಾಮಿಕ ರೋಗದ ಕುರಿತು ಜಿನೀವಾದಲ್ಲಿ 2020 ಮಾರ್ಚ್ 23ರ ಸೋಮವಾರ (ಭಾರತದಲ್ಲಿ ಮಾರ್ಚ್ 24 ಮಂಗಳವಾರ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಎರಡು ಸದ್ದು ರಹಿತ ಕೊಲೆಗಡುಕರನ್ನು ನಿರ್ಮೂಲನೆ ಮಾಡಿ ಒದ್ದೋಡಿಸುವ ನಿಟ್ಟಿನಲ್ಲಿ ಭಾರತವು ಇಡೀ ಜಗತನ್ನೇ ಮುನ್ನಡೆಸಿದೆ ಎಂದು ಹೇಳಿದರು.

ಭಾರvವು ಸಾರ್ವಜನಿಕ ಜಾಗೃತಿಯ ಮೂಲಕ ಸಿಡುಬು ಮಹಾಮಾರಿಯನ್ನು ನಿವಾರಿಸಿ ಜಗತ್ತಿಗೆ ಒಂದು ದೊಡ್ಡ ಉಡುಗೊರೆಯನ್ನು ನೀಡಿತು. ಅಷ್ಟೇ ಅಲ್ಲ, ಭಾರತವು ಪೋಲಿಯೊವನ್ನು ಕೂಡಾ ನಿರ್ಮೂಲನೆ ಮಾಡಿದೆ ಎಂಂಬುದನ್ನೂ ಗಮನಿಸಬೇಕು ಎಂದು ಅವರು ಹೇಳಿದರು.

"ಭಾರತವು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಜಗತ್ತು ಹೇಗೆ ಮುನ್ನಡೆಯಬಹುದು ಎಂಬುದನ್ನು ಭಾರತದಂತಹ ದೇಶಗಳು ತೋರಿಸಿಕೊಡಬಲ್ಲವು ಎಂದು ಅವರು ನುಡಿದರು.

"ಸುಲಭವಾದ ಉತ್ತರಗಳಿಲ್ಲ. ಹಿಂದಿನ ತಮ್ಮ ಅನುಭವದ ಮೂಲಕ ಜಗತ್ತಿಗೆ ದಾರಿತೋರುವ ಅಸಾಧಾರಣ ಸಾಮರ್ಥ್ಯ ಭಾರತದಂತಹ ದೇಗಳಿಗೆ ಇದೆ ಎಂದು ಅವರು ಹೇಳಿದರು.

ವಿಶ್ವದಾದ್ಯಂತ ,೩೪,೦೦೦ ಕ್ಕೂ ಹೆಚ್ಚು ಜನರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಸಾವಿನ ಸಂಖ್ಯೆ ೧೪,೬೫೨ ಕ್ಕೆ ಏರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ ತಿಳಿಸಿದೆ.

ಭಾರತವು ೪೯೨ ಕೊರೋನವೈರಸ್  ಸೋಂಕಿನ ಪ್ರಕರಣಗಳು ಮತ್ತು ಸಾವುಗಳನ್ನು ದಾಖಲಿಸಿದೆ ಎಂದು  ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಮಂಗಳವಾರ ತಿಳಿಸಿವೆ. ೨೨ ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾದ ನಂತರ ದೇಶಾದ್ಯಂತ ಒಟ್ಟು ಸಕ್ರಿಯ ಕೋವಿಡ್-೧೯ ಪ್ರಕರಣಗಳು ೪೪೬ ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಏತನ್ಮಧ್ಯೆ,  ಕೊರೋನವೈರಸ್ ಸಾಂಕ್ರಾಮಿಕ ರೋಗವು ಸ್ಪಷ್ಟವಾಗಿ "ವೇಗ ಪಡೆಯುತ್ತಿದೆ ಎಂದು ಡಬ್ಲ್ಯುಎಚ್ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ ಆದರೆ ಏಕಾಏಕಿ ಏರಿಕೆಯ ಅದರ  "ಪಥವನ್ನು ಬದಲಾಯಿಸಲು" ಇನ್ನೂ ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ ಅಂತ್ಯದಲ್ಲಿ ಚೀನಾದಲ್ಲಿ ಏಕಾಏಕಿ ಆರಂಭವಾದ ಕೊರೋನಾವೈರಸ್ ಸೋಂಕು ವಿಶ್ವಾದ್ಯಂತ ಮೊದಲ ೧೦೦,೦೦೦ ಜನರಿಗೆ ತಲುಪಲು  ಆರಂಭದಿಂದ ೬೭ ದಿನಗಳನ್ನು ತೆಗೆದುಕೊಂಡಿದೆ. ಇದಕ್ಕೆ ಹೋಲಿಸಿದರೆ, ಎರಡನೇ ೧೦೦,೦೦೦ ಪ್ರಕರಣಗಳಿಗೆ ೧೧ ದಿನಗಳು ಮತ್ತು ಮೂರನೇ ೧೦೦,೦೦೦ ಪ್ರಕರಣಗಳಿಗೆ ಕೇವಲ ನಾಲ್ಕು ದಿನಗಳು ಬೇಕಾದವು ಎಂದು ಫೆಬ್ರೆಯೆಸಸ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

"ಕೋವಿಡ್ -೧೯ ಹರಡುವಿಕೆಯ ವೇಗ ಹೆಚ್ಚುತ್ತಿರುವುದನ್ನು ತೋರಿಸಿರುವ ಸಂಖ್ಯೆಗಳು ಬಹಳ ಮುಖ್ಯ, ರೋಗವು ಜನರು, ಅವರ ಜೀವನ ಮತ್ತು ಕುಟುಂಬಗಳನ್ನು ತಲೆಕೆಗು ಮಾಡಿದೆ ಎಂದು ಟೆಡ್ರೊಸ್ ಪತ್ರಿಕಾಗೋಷ್ಠಿಯ ಬಳಿಕ ಟ್ವೀಟ್ ಮಾಡಿದರು.

"ನಾವು ಅಸಹಾಯಕ ಪ್ರೇಕ್ಷಕರಲ್ಲ. ಸಾಂಕ್ರಾಮಿಕದ ಪಥವನ್ನು ನಾವು ಬದಲಾಯಿಸಬಹುದು ಎಂದು ಅವರು ಆಶಾಭಾವನೆ ವ್ಯಕ್ತ ಪಡಿಸಿದರು.

No comments:

Advertisement