ಸ್ಪೇನ್‌ನಲ್ಲಿ
ಕೊರೋನಾ ತಾಂಡವ,
೨೦೦೦ ಹೊಸ
ಪ್ರಕರಣ, ೧೦೦ ಸಾವು
ಮ್ಯಾಡ್ರಿಡ್: ವಿಶ್ವಾದ್ಯಂತ ತನ್ನ
ಕಬಂಧಬಾಹುವನ್ನು
ಬಿಗಿಗೊಳಿಸುತ್ತಿರುವ
ಕೊರೋನಾವೈರಸ್
ಕಳೆದ ೨೪ ಗಂಟೆಗಳಲ್ಲಿ ಸ್ಪೇನಿನಲ್ಲಿ ರುದ್ರ
ತಾಂಡವ ನಡೆಸಿದ್ದು, ೨೦೦೦ ಹೊಸ
ಪ್ರಕರಣಗಳು
ಮತ್ತು ಇನ್ನೂ ೧೦೦
ಸಾವಿನ ಪ್ರಕರಣಗಳು 2020 ಮಾರ್ಚ್ 15ರ ಭಾನುವಾರ ವರದಿಯಾದವು.
ಯುರೋಪಿನಲ್ಲಿ ಇಟಲಿಯ
ಬಳಿಕ ಅತ್ಯಂತ ಹೆಚ್ಚು ಕೊರೋನಾಬಾಧೆಗೆ ಒಳಗಾದ
ದೇಶ ಎಂಬ ಕುಖ್ಯಾತಿಗೆ ಇದೀಗ
ಸ್ಪೇನ್ ಪಾತ್ರವಾಗಿದೆ.
ಹೊಸ
ಪ್ರಕರಣಗಳು
ವರದಿಯಾಗುವುದರೊಂದಿಗೆ
ಸ್ಪೇನಿನಲ್ಲಿ
ಕೋವಿಡ್ -೧೯ ಪ್ರಕರಣಗಳ ಸಂಖ್ಯೆ ೭,೭೫೩ಕ್ಕೆ ಏರಿದ್ದು, ಸಾವಿನ ಸಂಖ್ಯೆ ೨೮೮ನ್ನು ತಲುಪಿದೆ. ಸರ್ಕಾರವು ಇಡೀ
ರಾಷ್ಟ್ರದಲ್ಲಿ
ತುರ್ತು ಸ್ಥಿತಿ ಘೋಷಿಸಿದ್ದು, ಜನರಿಗೆ ಮನೆಗಳಿಂದ ಹೊರಕ್ಕೆ ಬರದಂತೆ ಸೂಚನೆ
ನೀಡಿದೆ.
ಕೆಲಸಕ್ಕೆ ಹೋಗಲು ಇಲ್ಲವೇ ಔಷಧ, ಆಹಾರ ಖರೀದಿಗಾಗಿ ಮಾತ್ರವೇ ಮನೆಯಿಂದ ಹೊರಬರಲು ಅವಕಾಶ ಕಲ್ಪಿಸಿದೆ.
ಕೆಲಸಕ್ಕೆ ಹೋಗಲು ಇಲ್ಲವೇ ಔಷಧ, ಆಹಾರ ಖರೀದಿಗಾಗಿ ಮಾತ್ರವೇ ಮನೆಯಿಂದ ಹೊರಬರಲು ಅವಕಾಶ ಕಲ್ಪಿಸಿದೆ.
No comments:
Post a Comment