ರಾಜ್ಯಸಭಾ
ಸದಸ್ಯರಾಗಿ ಇಂದು ಮಾಜಿ ಸಿಜೆಐ ರಂಜನ್ ಗೊಗೋಯಿ ಪ್ರಮಾಣ ವಚನ
ನವದೆಹಲಿ:
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರು ರಾಜ್ಯಸಭಾ ಸದಸ್ಯರಾಗಿ 2020 ಮಾರ್ಚ್ 19ರ ಗುರುವಾರ
ಬೆಳಗ್ಗೆ ೧೧ ಗಂಟೆಗೆ ಪ್ರಮಾಣವಚನ
ಸ್ವೀಕರಿಸಿಲಿದ್ದಾರೆ ಎಂದು ಮೂಲಗಳು 2020 ಮಾರ್ಚ್
18ರ ಬುಧವಾರ ತಿಳಿಸಿದವು.
ಗೊಗೋಯಿ
ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾರ್ಚ್ ೧೬ರಂದು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು.
ಅತಿ
ಸೂಕ್ಷ್ಮ ಪ್ರಕರಣವಾಗಿದ್ದ ಅಯೋಧ್ಯಾ ಭೂ ವಿವಾದ ಪ್ರಕರಣ
ಸೇರಿದಂತೆ ಹಲವಾರು ಪ್ರಮುಖ ತೀರ್ಪುಗಳನ್ನು ಪ್ರಕಟಿಸಿದ್ದ ಸುಪ್ರೀಂಕೋರ್ಟ್ ಪೀಠಗಳ ನೇತೃತ್ವ ವಹಿಸಿದ್ದ ಗೊಗೋಯಿ ಅವರು ರಾಜ್ಯಸಭಾ ಸದಸ್ಯರ ಕೆಟಿಎಸ್ ತುಳಸಿ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದು, ರಾಜ್ಯಸಭೆಗೆ ನೇಮಕಗೊಂಡಿರುವ ಮೊತ್ತ ಮೊದಲ ಸಿಜೆಐ ಆಗಿದ್ದಾರೆ.
ಗೊಗೋಯಿ
ನೇಮಕವನ್ನು ಟೀಕಿಸುವ ಮೂಲಕ ವಿರೋಧ ಪಕ್ಷಗಳು ವಿವಾದ ಹುಟ್ಟುಹಾಕಿದ್ದು, ನೇಮಕಾತಿ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.
No comments:
Post a Comment