Wednesday, March 18, 2020

ವೈಷ್ಣೊದೇವಿ ಯಾತ್ರೆ ರದ್ದು; ಅಂತರರಾಜ್ಯ ಬಸ್ ಸಂಚಾರಕ್ಕೆ ನಿರ್ಬಂಧ

             ವೈಷ್ಣೊದೇವಿ ಯಾತ್ರೆ ರದ್ದು; ಅಂತರರಾಜ್ಯ
                          ಬಸ್ ಸಂಚಾರಕ್ಕೆ ನಿರ್ಬಂಧ
ನವದೆಹಲಿ/ ಕಾಶ್ಮೀರ: ಕೊರೊನಾವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ಮುಂಜಾಗರೂಕತಾ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು 2020 ಮಾರ್ಚ್  18ರ  ಬುಧವಾರ ನಾಡಿನ ಪ್ರಖ್ಯಾತ ವೈಷ್ಣೊದೇವಿ ಯಾತ್ರೆಯನ್ನು ರದ್ದುಪಡಿಸಿತು.

ವೈಷ್ಣೊದೇವಿ ಯಾತ್ರೆಯನ್ನು ಬುಧವಾರದಿಂದಲೇ ರದ್ದುಪಡಿಸಲಾಗಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಅಂತರರಾಜ್ಯ ಬಸ್ಸುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವಕ್ತಾರರು ಶ್ರೀನಗರದಲ್ಲಿ ತಿಳಿಸಿದರು.

ಯಾತ್ರೆಯ ಆರಂಭಿಕ ಸ್ಥಳವಾದ ಕತ್ರಾವನ್ನು ಈಗಾಗಲೇ ತಲುಪಿರುವ ಯಾತ್ರಿಕರು ಹಾಗೂ ಪ್ರಸ್ತುತ ಯಾತ್ರೆ ಆರಂಭಿಸಿರುವ ಯಾತ್ರಿಕರು ಮುಂಜಾಗ್ರತೆ ವಹಿಸಬೇಕು ಎಂದು ದೇವಸ್ಥಾನ ಸಮಿತಿ ಮನವಿ ಮಾಡಿತು.

ಎಲ್ಲೆಡೆ ಕೊರೊನಾವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಯಾತ್ರೆಯನ್ನು ಮುಂದೂಡುವಂತೆ ಶ್ರೀಮಾತಾ ವೈಷ್ಣೊದೇವಿ ದೇವಸ್ಥಾನ ಮಂಡಳಿಯು ಮಂಗಳವಾರ ಮನವಿ ಮಾಡಿತ್ತು. ಅಲ್ಲದೇ ಯಾತ್ರಿಕರ ಸುರಕ್ಷತೆಗಾಗಿ ದೇವಸ್ಥಾನ ಮಂಡಳಿಯು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು, ಅಧುಕುವರಿ ಪ್ರದೇಶದ ಗುಹೆಯ ಪ್ರವೇಶವನ್ನು ನಿಷೇಧಿಸಿತ್ತು.

ಪೊಲೀಸ್ ಅಧಿಕಾರಿ ನಿಯೋಜನೆ: ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ ಕೊರೊನಾವೈರಸ್ ತಡೆಗಟ್ಟಲು ಜಿಲ್ಲಾಡಳಿತಕ್ಕೆ ನೆರವಾಗುವ ನಿಟ್ಟಿನಲ್ಲಿ ೨೦ ಡಿವೈಎಸ್ಪಿಗಳನ್ನು ಸರ್ಕಾರ ನಿಯೋಜಿಸಿದೆ.

ಕುರಿತು ಆದೇಶ ಹೊರಡಿಸಿರುವ ಗೃಹ ಇಲಾಖೆಯು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿರುವ ಕೇಂದ್ರಗಳಲ್ಲಿ ಪೊಲೀಸ್ ಅಧಿಕಾರಿಗಳು ಉಳಿದುಕೊಂಡು, ಸೋಕಿತರ ಸಂಪರ್ಕ ವಿವರ ಪತ್ತೆ, ರೋಗ ಪೀಡಿತರು ಹಾಗೂ ಶಂಕಿತರನ್ನು ಪ್ರತ್ಯೇಕವಾಗಿ ಇರಿಸುವ ಕಾರ್ಯದಲ್ಲಿ ನೆರವಾಗುತ್ತಾರೆ ಎಂದು ತಿಳಿಸಿತು.

No comments:

Advertisement