Saturday, March 28, 2020

ಚೀನಾ ದಿಗ್ಬಂಧನ ಸಡಿಲಿಕೆ ಬೆನ್ನಲ್ಲೇ ಹುಬೈಯಲ್ಲಿ ಹಿಂಸೆ, ಜನರ ವಲಸೆ

ಚೀನಾ ದಿಗ್ಬಂಧನ ಸಡಿಲಿಕೆ ಬೆನ್ನಲ್ಲೇ
ಹುಬೈಯಲ್ಲಿ ಹಿಂಸೆ, ಜನರ ವಲಸೆ
ಬೀಜಿಂಗ್: ಕೋವಿಡ್ ೧೯ ಸಾಂಕ್ರಾಮಿಕ ಸೋಂಕಿನ ತವರು ಎನ್ನಿಸಿಕೊಂಡ ಚೀನಾದ ಹುಬೈ ಪ್ರಾಂತ್ಯದಲ್ಲಿ ಸುಮಾರು ಎರಡು ತಿಂಗಳ ಬಳಿಕ ಚೀನಾ ಸರ್ಕಾರ ಎರಡು ತಿಂಗಳ ದಿಗ್ಬಂಧನವನ್ನು (ಲಾಕ್ ಡೌನ್) ಸಡಿಲಿಕೆ ಮಾಡಿದೆ. ಆದರೆ ಅದರ ಬೆನ್ನಲ್ಲೇ ಸಹಸ್ರಾರು ಮಂದಿ ಹುಬೈ ಪ್ರಾಂತ್ಯ ತೊರೆಯಲು ಮುಂದಾಗಿದ್ದು, ಪರಿಣಾಮವಾಗಿ ಹಿಂಸಾಚಾರ, ಅಪಾರ ಜನಸಂದಣಿಯಿಂದ ಸಂಚಾರ ದಟ್ಟಣೆ ಉಂಟಾಗಿದೆ ಎಂದು ವರದಿಗಳು 2020 ಮಾರ್ಚ್ 28ರ ಶನಿವಾರ ತಿಳಿಸಿದವು.

ರೈಲುಗಳಲ್ಲಿ ಜನರು ಕಿಕ್ಕಿರಿದಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿತು.

ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳನ್ನು ಪ್ರಕಟಿಸಲಾಗಿದ್ದು, ಹುಬೈ ಪ್ರಾಂತ್ಯ ಮತ್ತು ನೆರೆಯ ಜಿಯಾಂಕ್ಸಿ ಪ್ರಾಂತ್ಯವನ್ನು ಸಂಪರ್ಕಿಸುವ ಸೇತುವೆ ಸ್ಥಳದಲ್ಲಿ ಮಾರಾಮಾರಿ ನಡೆದಿದೆ ಎಂದು ಕೆನಡಾ ಮಾಧ್ಯಮಗಳಾದ ಗ್ಲೋಬ್ ಮತ್ತು ಮೇಲ್ ವರದಿ ಮಾಡಿದವು.

ಅಡೆತಡೆಗಳನ್ನು ತೆರವುಗೊಳಿಸುವಂತೆ ಜನರು ಕೂಗುತಿದ್ದಾರೆ. ಅಪಾರ ಪ್ರಮಾಣದಲ್ಲಿ ಸೇರಿರುವ ಜನರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ ಎಂದು ವರದಿ ವಿವರಿಸಿದೆತು.

ಹುಬೈ ಪ್ರಾಂತ್ಯದಿಂದ ಜಿಯಾಂಕ್ಸಿ ಪ್ರಾಂತ್ಯಕ್ಕೆ ತೆರಳಲು ಹೊರಟ ಜನರನ್ನು ತಡೆದ ಪರಿಣಾಮ ಗಲಭೆ ಆರಂಭವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

No comments:

Advertisement