ನಿರ್ಭಯಾ: ಶುಕ್ರವಾರ ಬೆಳಗ್ಗೆ ೫.೩೦ಕ್ಕೆ ಹಂತಕರಿಗೆ
ನೇಣು
ತಿಹಾರ್
ಸೆರೆಮನೆಯಲ್ಲಿ ಸಿದ್ಧತೆ, ಕಾನೂನು ಹೋರಾಟಗಳಿಗೆ ತೆರೆ
ನವದೆಹಲಿ:
೨೦೧೨ರಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ ೨೦ರ ಶುಕ್ರವಾರ ಬೆಳಗ್ಗೆ ೫.೩೦ಕ್ಕೆ ಗಲ್ಲಿಗೇರಿಸುವುದನ್ನು
ತಡೆ ಹಿಡಿಯುವಂತೆ ಕೊನೆ ಕ್ಷಣದಲ್ಲಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ 2020 ಮಾರ್ಚ್
19ರ ತಡರಾತ್ರಿ/ 2020 ಮಾರ್ಚ್ 20 ನಸುಕಿನಲ್ಲಿ ವಜಾಗೊಳಿಸಿತು.
ಇದರೊಂದಿಗೆ ಮರಣದಂಡನೆ ಶಿಕ್ಷೆಗೆ ತಡೆಯೊಡ್ಡುವ ಎಲ್ಲಾ ಕಾನೂನು ಹೋರಾಟಗಳು ಅಂತ್ಯಗೊಂಡಿದ್ದು, ದೆಹಲಿ
ಕೋರ್ಟ್ ಆದೇಶದಂತೆ ತಿಹಾರ್ ಸೆರೆಮನೆಯಲ್ಲಿ
2020 ಮಾರ್ಚ್ 20ರ ಬೆಳಗ್ಗೆ
5.30 ಗಂಟೆಗೆ ನಾಲ್ಕೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲಿದೆ.
ಅಧಿಕಾರಿಗಳು ಗಲ್ಲಿಗೇರಿಸಲು ಅಂತಿಮ ಹಂತದ ಸಿದ್ಧತೆಗಳನ್ನು 2020 ಮಾರ್ಚ್ 19ರ ಗುರುವಾರ ಅರಂಭಿಸಿದರು. ತಡರಾತ್ರಿಯ ತನ್ನ ತೀರ್ಪಿನಲ್ಲಿ ದೆಹಲಿ ಹೈಕೋರ್ಟ್ ಅಕ್ಷಯ್ ಕುಮಾರ್ ಸಿಂಗ್ ಪತ್ನಿಯ ವಿಚ್ಛೇದನ ಕೋರಿಕೆ ಅರ್ಜಿಯು ಇತರ ಮೂವರು ಅಪರಾಧಿಗಳೊಂದಿಗೆ ಆತನನ್ನು ಗಲ್ಲಿಗೆ ಏರಿಸದಂತೆ ತಡೆ ನೀಡಲು ಪ್ರಸ್ತುತವಾಗುವುದಿಲ್ಲ ಎಂದು ಹೇಳಿತು.
ಅಧಿಕಾರಿಗಳು ಗಲ್ಲಿಗೇರಿಸಲು ಅಂತಿಮ ಹಂತದ ಸಿದ್ಧತೆಗಳನ್ನು 2020 ಮಾರ್ಚ್ 19ರ ಗುರುವಾರ ಅರಂಭಿಸಿದರು. ತಡರಾತ್ರಿಯ ತನ್ನ ತೀರ್ಪಿನಲ್ಲಿ ದೆಹಲಿ ಹೈಕೋರ್ಟ್ ಅಕ್ಷಯ್ ಕುಮಾರ್ ಸಿಂಗ್ ಪತ್ನಿಯ ವಿಚ್ಛೇದನ ಕೋರಿಕೆ ಅರ್ಜಿಯು ಇತರ ಮೂವರು ಅಪರಾಧಿಗಳೊಂದಿಗೆ ಆತನನ್ನು ಗಲ್ಲಿಗೆ ಏರಿಸದಂತೆ ತಡೆ ನೀಡಲು ಪ್ರಸ್ತುತವಾಗುವುದಿಲ್ಲ ಎಂದು ಹೇಳಿತು.
ಪ್ರಕರಣದ
ನಾಲ್ವರು ಅಪರಾಧಿಗಳಾದ ಅಕ್ಷಯ್ ಠಾಕೂರ್ (೩೧ವರ್ಷ), ಪವನ್ ಗುಪ್ತಾ (೨೫ವರ್ಷ), ವಿನಯ್ ಶರ್ಮಾ (೨೬ವರ್ಷ) ಹಾಗೂ ಮುಖೇಶ್ ಸಿಂಗ್ (೩೨ ವರ್ಷ) ಇವರ
ಎಲ್ಲ್ಲ ಅರ್ಜಿಗಳನ್ನು ಪಟಿಯಾಲಾ ಹೌಸ್ ಕೋರ್ಟ್ ವಜಾಗೊಳಿಸಿ ನಿಗದಿತ ದಿನಾಂಕದಂದು (೨೦-೦೩-೨೦೨೦)
ಗಲ್ಲಿಗೇರಿಸಲು ನಿರ್ದೇಶನ ನೀಡಿತು.
ಶುಕ್ರವಾರ
ಬೆಳಿಗ್ಗೆ ೫.೩೦ ಕ್ಕೆ
ಮುಖೇಶ್ ಸಿಂಗ್, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ಈ ನಾಲ್ಕೂ ಮಂದಿ
ಅಪರಾಧಿಗಳನ್ನು ಸೆರೆಮನೆ
ಸಂಖ್ಯೆ ೩ರಲ್ಲಿ ಏಕಕಾಲಕ್ಕೆ ಗಲ್ಲಿಗೇರಿಸಲಾಗುವುದು.
ಅಧಿಕಾರಿಗಳು
ಬುಧವಾರ ಫಾನ್ಸಿ ಕೋಥಾ’ದಲ್ಲಿ (ನೇಣು
ಪ್ರಾಂಗಣ) ಮರಣದಂಡನೆಯ ರಿಹರ್ಸಲ್ ನಡೆಸಿದ್ದರು ಎಂದು ಜೈಲು ಅಧಿಕಾರಿಗಳು ತಿಳಿಸಿದರು. ವಧಕಾರ ಪವನ್ ಜಲ್ಲಾಡ್ ಜೊತೆಗೆ ಸೆರೆಮನೆ ಅಧಿಕಾರಿಗಳ ಗುರುವಾರ ಬೆಳಿಗ್ಗೆ ಮತ್ತೆ ಸೆರೆಮನೆ ಸಂಖ್ಯೆ ೩ ರ ಒಳಗಿನ
ನೇಣು ಹಾಕುವ ಪ್ರಾಂಗಣವನ್ನು ಪರಿಶೀಲಿಸಿದರು.
ನೇಣು
ಹಾಕುವ ಸಲುವಾಗಿ ಬಿಹಾರದ ಬಕ್ಸಾರ್ನಿಂದ ತರಲಾದ ೧೦ ಹಗ್ಗಗಳನ್ನು ಗಲ್ಲುಗಂಭಕ್ಕೆ ಕಟ್ಟಲಾಗಿದ್ದು,
ಗುರುವಾರ ಸಂಜೆ ಕೊನೆಯ ಬಾರಿಗೆ ಅವುಗಳನ್ನು ಪರಿಶೀಲಿಸಲಾಗುತ್ತದೆ.
ಮೀರತ್
ನಿವಾಸಿ ಪವನ್ ಜಲ್ಲಾಡ್ ಉತ್ತರ ಪ್ರದೇಶದ ಸೆರೆಮನೆ ವಿಭಾಗದವರಾಗಿದ್ದು, ಮರಣದಂಡನೆಗಾಗಿ ತಿಹಾರ್ ಸೆರೆಮನೆ ಅಧಿಕಾರಿಗಳು ಅವರನ್ನು ದೆಹಲಿಗೆ ಕರೆಸಿದ್ದಾರೆ.
ಪ್ರತಿಯೊಬ್ಬ
ಅಪರಾಧಿಗೆ ನೇಣು ಬಿಗಿದದ್ದಕ್ಕಾಗಿ ಪವನ್ ಜಲ್ಲದ್ ಅವರಿಗೆ ತಲಾ ೧೫,೦೦೦ ರೂಪಾಯಿ
ಸಂಭಾವನೆ ನೀಡಲಾಗುತ್ತದೆ. ತಿಹಾರ್
ಸೆರೆಮನೆಯಲ್ಲಿ ನಾಲ್ಕು ಜನರನ್ನು ಏಕಕಾಲಕ್ಕೆ ಗಲ್ಲಿಗೇರಿಸುತ್ತಿರುವುದು ಇದೇ ಮೊದಲು.
ಶುಕ್ರವಾರ
ಬೆಳಗ್ಗೆ ಪವನ್ ಜಲ್ಲದ್ ಜೊತೆಗೆ, ಸೆರೆಮನೆ ಅಧೀಕ್ಷಕ ಮತ್ತು ಸೆರೆಮನೆ ವೈದ್ಯರು ಸೇರಿದಂತೆ ಕೆಲವೇ ಅಧಿಕಾರಿಗಳು ಹಾಜರು ಇರುತ್ತಾರೆ.
‘ಮರಣದಂಡನೆಗೆ
ಮುನ್ನ ಗುರುವಾರ ಸಂಜೆ ನಾವು ಕೊನೆಯ ಬಾರಿ ನೇಣು ಹಾಕುವ ಪ್ರಾಂಗಣವನ್ನು ಸಿದ್ಧಪಡಿಸುತ್ತೇವೆ. ಸೆರೆಮನೆ ಅಧೀಕ್ಷಕರು ಸಂಜೆ ಅಪರಾಧಿಗಳೊಂದಿಗೆ ಮಾತನಾಡುತ್ತಾರೆ ಮತ್ತು ಅವರು ಪತ್ರ ಬರೆಯಲು ಬಯಸುವರೇ ಅಥವಾ ಅಂತಿಮ ಹಾರೈಕೆ ಹೊಂದಿದ್ದಾರೆಯೇ ಎಂದು ಕೇಳುತ್ತಾರೆ. ಸೆರೆಮನೆ ತರಬೇತಿ ಪಡೆದ ಸಲಹೆಗಾರರು ಅವರೊಂದಿಗೆ ಸಮಾಲೋಚನೆ ನಡೆಸುತ್ತಾರೆ’ ಎಂದು
ಸೆರೆಮನೆ ಅಧಿಕಾರಿಯೊಬ್ಬರು ಹೇಳಿದರು.
ಬೆಳಿಗ್ಗೆ
೬.೩೦ ಕ್ಕೆ ಮೊದಲು
ಮರಣದಂಡನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿ ನುಡಿದರು.
ಈ
ನಾಲ್ವರೂ ಅಪರಾಧಿಗಳನ್ನು ಪ್ರಸ್ತುತ ನೇಣು ಹಾಕುವ ಪ್ರಾಂಗಣವಿರುವ ಸೆರೆಮನೆ ಸಂಖ್ಯೆ ೩ ರ ಪಕ್ಕದಲ್ಲಿ
ಪ್ರತಿಯೊಬ್ಬ ಅಪರಾಧಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಮತ್ತು ಕನಿಷ್ಠ ೨-೩ ಸೆರೆಮನೆ
ವಾರ್ಡನ್ಗಳು ಅವರ ಚಲನವಲನಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
‘ಬುಧವಾರದವರೆಗೆ
ಅಪರಾಧಿಗಳು ಯಾವುದೇ ಆತಂಕದ ಲಕ್ಷಣಗಳನ್ನು ತೋರಿಸಲಿಲ್ಲ. ಆದರೆ ಗುರುವಾರ ಹೆಚ್ಚಿನವರು ಮೌನಕ್ಕೆ ಶರಣಾಗಿದ್ದಾರೆ’ ಎಂದು
ಹೆಸರು ಹೇಳಲು ಇಚ್ಛಿಸದ ಇನ್ನೊಬ್ಬ ಸೆರೆಮನೆ ಅಧಿಕಾರಿ ನುಡಿದರು.
‘ಕೆಲವು
ದಿನಗಳ ಹಿಂದೆ ಅವರು ಮರಣದಂಡನೆಗೆ ಗುರಿಯಾಗಿರುವವರಂತೆ ಕಾಣಿಸುತ್ತಿರಲ್ಲ. ಗಲ್ಲು ಜಾರಿಯನ್ನು ಈಗಾಗಲೇ
ಎರಡು ಬಾರಿ ಮುಂದೂಡಲಾಗಿತ್ತು. ತಮ್ಮ ಕೊನೆಯ ಇಚ್ಛೆಯ ಯಾವುದೇ ನಿರ್ದಿಷ್ಟ ಬೇಡಿಕೆಗಳನ್ನು ಸಹ ಅವರು ಮಾಡಿಲ್ಲ.
ಖಿನ್ನತೆ ಅಥವಾ ಭಯದ ಯಾವುದೇ ಚಿಹ್ನೆಗಳನ್ನು ಕೂಡಾ ಅವರು ಪ್ರದರ್ಶಿಸಲಿಲ್ಲ. ಆದರೆ ಬುಧವಾರ ರಾತ್ರಿಯಿಂದ ಅವರ ವರ್ತನೆ ಬದಲಾಗಿದೆ. ಅವರು ಸೆರೆಮನೆ ಕಾವಲುಗಾರರೊಂದಿಗೆ ಹೆಚ್ಚು ಮಾತನಾಡುತ್ತಿಲ್ಲ ಎಂಬುದಾಗಿ ನಮಗೆ ತಿಳಿಸಲಾಗಿದೆ’ ಎಂದು
ಎರಡನೇ ಅಧಿಕಾರಿ ಹೇಳಿದರು.
ಸಿದ್ಧತೆಗಳು
ನಡೆಯುತ್ತಿರುವಾಗಲೇ, ಸೆರೆಮನೆ ಅಧಿಕಾರಿಗಳು ದೆಹಲಿ ನ್ಯಾಯಾಲಯದ ಬೆಳವಣಿಗೆಗಳ ಬಗ್ಗೆ ಕೂಡಾ ನಿಗಾ ಇಟ್ಟಿದ್ದರು. ಮರಣದಂಡನೆ ತಡೆ ಹಿಡಿಯಲು ಕೋರಿದ ಅರ್ಜಿಗಳಲ್ಲದೆ, ಇಬ್ಬರು ಅಪರಾಧಿಗಳಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಎರಡನೇ ಬಾರಿಗೆ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ಸಲ್ಲಿಸಿದ್ದರು.
ನಾಲ್ಕು
ಅಪರಾಧಿಗಳು ಸಲ್ಲಿಸಿದ್ದ ಮೊದಲ ಕ್ಷಮಾದಾನ ಅರ್ಜಿಗಳನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು.
೨೦೧೨
ರ ಡಿಸೆಂಬರ್ ೧೬ ರಂದು ದಕ್ಷಿಣ
ದೆಹಲಿಯ ಚಲಿಸುವ ಬಸ್ಸಿನಲ್ಲಿ ೨೩ ವರ್ಷದ ಅರೆ
ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ, ಅಮಾನುಷ ಹಲ್ಲೆ ನಡೆಸಿದ್ದರು. ಎರಡು ವಾರಗಳ ಜೀವನ್ಮರಣ ಹೋರಾಟದ ಬಳಿಕ ಯುವತಿ ಸಿಂಗಾಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
೨೦೧೩ರ
ಫೆಬ್ರುವರಿ ೯ರಂದು ತಿಹಾರ್ ಸೆರೆಮನೆಯ ಒಳಗೆ ಈ ಹಿಂದೆ ೨೦೦೧ರ
ಸಂಸತ್ ಮೇಲಿನ ದಾಳಿಯಲ್ಲಿ ವಹಿಸಿದ್ದ ಪಾತ್ರಕ್ಕಾಗಿ ಭಯೋತ್ಪಾದಕ ಅಫ್ಜಲ್ ಗುರುವಿಗೆ ಮರಣದಂಡನೆ ವಿಧಿಸಲಾಗಿತ್ತು. ಇದೇ ತಿಹಾರ್ ಸೆರೆಮನೆಯಲ್ಲಿ ಜಾರಿಗೊಂಡಿದ್ದ ಕೊನೆಯ ಗಲ್ಲು ಶಿಕ್ಷೆಯಾಗಿತ್ತು.
No comments:
Post a Comment