Friday, March 27, 2020

ಕೊರೋನಾ ವೈರಸ್ ತಟಸ್ಥಗೊಳಿಸುವ ಸಾಧನ: ಬೆಂಗಳೂರು ವಿಜ್ಞಾನಿಯ ಆವಿಷ್ಕಾರ

ಕೊರೋನಾ ವೈರಸ್ ತಟಸ್ಥಗೊಳಿಸುವ ಸಾಧನ: ಬೆಂಗಳೂರು ವಿಜ್ಞಾನಿಯ ಆವಿಷ್ಕಾರ
ಬೆಂಗಳೂರು: ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮಾರ್ಗ ಕಂಡು ಹಿಡಿಯಲು ವೈದ್ಯಕೀಯ ವಿಜ್ಞಾನವು ಹೆಣಗುತ್ತಿರುವಾಗಲೇ, ತಾವು ಕಂಡು ಹಿಡಿದ ವೈದ್ಯಕೀಯ ಎಲೆಕ್ಟ್ರಾನಿಕ್ ಉಪಕರಣವು ಕೊರೋನಾವೈರಸ್ಸುಗಳನ್ನು ತಟಸ್ಥಗೊಳಿಸಬಲ್ಲುದು ಎಂದು ಬೆಂಗಳೂರಿನ ವಿಜ್ಞಾನಿಯೊಬ್ಬರು 2020 ಮಾರ್ಚ್ 27ರ ಶುಕ್ರವಾರ ಪ್ರತಿಪಾದಿಸಿದರು.

ಕೊರೋನಾ ವೈರಸ್ ವ್ಯಾಧಿಗೆ (ಕೋವಿಡ್ ೧೯) ಯಾವುದೇ ಚಿಕಿತ್ಸೆ ಇಲ್ಲ ಮತ್ತು ಲಸಿಕೆ ಅಭಿವೃದ್ಧಿಯಾಗಲು ಕನಿಷ್ಠ ಒಂದು ವರ್ಷ ಅಥವಾ ಅದಕ್ಕೂ ಹೆಚ್ಚಿನ ಕಾಲಾವಕಾಶ ಬೇಕು. ವಾಸ್ತವಿಕವಾಗಿ ವಿಜ್ಞಾನಿಗಳು ವೈರಸ್ಸಿನ ಇನ್ನಷ್ಟು  ಉದಯೋನ್ಮುಖ ರೂಪಾಂತರಗಳನ್ನು ಗಮನಿಸುತ್ತಿರುವುದರಿಂದ ರೋಗದ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗಿಲ್ಲ. ಎಲ್ಲರೂ ಅರ್ಥ ಮಾಡಿಕೊಂಡಿರುವ ಏಕೈಕ ವಿಚಾರ ಏನೆಂದರೆ ಇದು ಅತ್ಯಂತ ವೇಗವಾಗಿ ಹರಡುವ ರೋಗ ಎಂಬುದಷ್ಟೇ.

ಮಧ್ಯೆ, ವೈರಸ್ ಹರಡುವಿಕೆಯನ್ನು ತಟಸ್ಥಗೊಳಿಸುವಂತಹ ಉಪಕರಣವನ್ನೇ ತಯಾರಿಸಿದರೆ? ಹೌದು ಅಂತಹ ಉಪಕರಣದ ಮೂಲಮಾದರಿಯನ್ನು ತಾನು ಅಭಿವೃದ್ಧಿಪಡಿಸಿರುವುದಾಗಿ ಎಂದು ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಸಂಶೋಧನಾ ಘಟPವಾಗಿರುವ ಬೆಂಗಳೂರಿನ ಆರ್ಗನೈಸೇಶನ್ ಡಿ ಸ್ಕಲೀನ್ ಪ್ರತಿಪಾದಿಸಿತು.  ಪರೀಕ್ಷೆಗಳನ್ನು ದೃಢೀಕರಿಸಲು ಮತ್ತು ಅದರ ಪರಿಣಾಮಕಾರಿತ್ವ ಪರಿಶೀಲನೆಗಾಗಿ ಉಪಕರಣದ ಮೂಲ ಮಾದರಿಯನ್ನು ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿತು.

ತಮ್ಮ ಸಂಸ್ಥೆಯು ಆವಿಷ್ಕರಿಸಿರುವ ಪುಟ್ಟ ಉಪಕರಣ ಅಥವಾ ಗ್ಯಾಜೆಟ್ನ್ನು ಮನೆಗಳು, ಸಭಾಂಗಣಗಳು, ಕಚೇರಿಗಳು, ಶಾಲೆಗಳು, ಕಾರುಗಳು - ಹೀಗೆ ಎಲ್ಲೆಡೆಯಲ್ಲೂ ಇರಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ರಾಜಾ ವಿಜಯ್ ಕುಮಾರ್ ಮಾಧ್ಯಮ ಒಂದಕ್ಕೆ ತಿಳಿಸಿದರು.

ಸಾಧನವು ಈಗಾಗಲೇ ಸೋಂಕಿತ ರೋಗಿಗಳಿಗೆ ಪರಿಹಾರವನ್ನು ನೀಡುವುದಿಲ್ಲ. ಆದರೆ ಇದು ವೈರಸ್ ಹರಡುವುದನ್ನು ತಡೆಯುತ್ತದೆ ಎಂದು ಅವರು ಹೇಳಿದರು. "ನೀವು ಇತರ ಕೋವಿಡ್-ಪಾಸಿಟಿವ್ ರೋಗಿಗಳೊಂದಿಗಿನ ಕೋಣೆಯಲ್ಲಿದ್ದರೆ ಮತ್ತು ಇತರರು ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ತಿಳಿಯಲು ಯಾವುದೇ ಮಾರ್ಗವಿಲ್ಲದಿದ್ದರೆ, ಸಾಧನವು ನಿಮ್ಮನ್ನು ರಕ್ಷಿಸುತ್ತದೆ ಏಕೆಂದರೆ ಸೋಂಕು ಹರಡುವುದಿಲ್ಲ" ಎಂದು ಅವರು ನುಡಿದರು.

ಸಾಧನವು ಮೂಲತಃ ವೈರಸ್ಸಿನ ಸಾಮರ್ಥ್ಯದ ತಟಸ್ಥಕಾರಕವಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಸಂಪರ್ಕಕ್ಕೆ ಬರುವ ಯಾರೇ ವ್ಯಕ್ತಿ ಅಥವಾ ವಸ್ತು- ಉದಾಹರಣೆಗೆ, ಟೇಬಲ್ ಅಥವಾ ವೈರಸ್ ಹೊಂದಿರುವ ಕುರ್ಚಿಯ ಮೇಲೆ   ವೈರಸ್ ಪ್ರಭಾವ ಬೀರುವುದಿಲ್ಲ ಎಂದು ಅವರು ಹೇಳಿದರು.

ಸದರಿ ಉಪಕರಣದ ಹಿಂದಿನ ವಿಜ್ಞಾನವನ್ನು ವಿವರಿಸಿದ ಡಾ. ರಾಜಾ, ಕೊರೋನವೈರಸ್ ಸುರುಳಿಯಾಕಾರದ ಚೆಂಡಿನಂತಹ ವಸ್ತುವಾಗಿದ್ದು, ಎಸ್-ಪ್ರೋಟೀನ್ ಎಂದು ಕರೆಯಲ್ಪಡುವ ಸಾಕಷ್ಟು ಕಡ್ಡಿಗಳನ್ನು (ಸ್ಪೈಕ್) ಹೊಂದಿದೆ. ಪ್ರೋಟೀನುಗಳು ಸಕಾರಾತ್ಮಕ ಕೋಶಗಳು ಮತ್ತು ನಕಾರಾತ್ಮಕ ಸ್ವೀಕಾರಗುಣವನ್ನು ಹೊಂದಿವೆ.  ನಿಮ್ಮ ದೇಹವು ಸಂಪರ್ಕಕ್ಕೆ ಬಂದಾಗ ಜೀವಕೋಶಗಳು ನಕಾರಾತ್ಮಕ ಸ್ವೀಕಾರ ಸಾಮರ್ಥ್ಯ ಹೊಂದಿರುವುದರಿಂದ, ವೈರಸ್ಸುಗಳು ಕೋಶಗಳಲ್ಲಿ ಅಂಟಿಕೊಳ್ಳುತ್ತದೆ ಮತ್ತು ತಮ್ಮ ಡಿಎನ್ಎಯನ್ನು ಅದರೊಳಗೆ (ಜೀವಕೋಶದ ಒಳಗೆ) ಬಿಡುಗಡೆ ಮಾಡುತ್ತದೆ ಮತ್ತು ಪುನರಾವರ್ತಿಸಲು ಪ್ರಾರಂಭಿಸುತ್ತದೆ. ಇದು ವೈರಸ್ ಬದುಕುವ ರೀತಿ ಎಂದು ಹೇಳಿದರು.

ನಾವು ಅಭಿವೃದ್ಧಿಪಡಿಸಿದ ಉಪಕರಣ ಅಪಾರ ಪ್ರಮಾಣದ ಎಲೆಕ್ಟ್ರಾನ್ಗಳನ್ನು ಮಾತ್ರ ಬಿಡುಗಡೆ ಮಾಡುತ್ತದೆ - ವೈರಸ್ಗಳಿಗೆ ನಿಮ್ಮ ದೇಹದ ಎಲೆಕ್ಟ್ರಾನ್ಗಳು ಅಥವಾ ಇತರ ಎಲೆಕ್ಟ್ರಾನ್ಗಳ ನಡುವಿನ ವ್ಯತ್ಯಾಸ ತಿಳಿದಿಲ್ಲ. ಎಲೆಕ್ಟ್ರಾನ್ಗಳು ಬಿಡುಗಡೆಯಾದ ನಂತರ, ವೈರಸ್ ಕೋಶಗಳು ತಟಸ್ಥಗೊಳ್ಳುತ್ತವೆ. ಯಾವುದೇ ಸೋಂಕಿತ ವ್ಯಕ್ತಿ ಬಂದು ಏನನ್ನಾದರೂ ಮುಟ್ಟಿದರೆ, ಎಲೆಕ್ಟ್ರಾನ್ಗಳು ಎಲ್ಲಾ ವೈರಲ್ ಎಲೆಕ್ಟ್ರಾನ್ಗಳನ್ನು ತಟಸ್ಥಗೊಳಿಸುತ್ತವೆ. ಅದರ ನಂತರ, ನೀವು ಅದನ್ನು ಸೇವಿಸಿದರೂ ಸಹ, ಅದು ನಿಮ್ಮ ಹೊಟ್ಟೆಗೆ ಪ್ರೋಟೀನ್ ತುಂಡಾಗಿ ಹೋಗುತ್ತದೆ ಆದರೆ ಹಾನಿಯನ್ನುಂಟುಮಾಡುವುದಿಲ್ಲ "ಎಂದು ಅವರು ವಿವರಿಸಿದರು.

ಕೋವಿಡ್ -೧೯ ತನ್ನ ಅಸ್ತಿತ್ವವನ್ನು ಜಗತ್ತಿನಲ್ಲಿ ತೋರಿಸುವುದಕ್ಕೆ ಮೊದಲೇ ಗ್ಯಾಜೆಟ್ ಕೆಲಸ ಪ್ರಗತಿಯಲ್ಲಿತ್ತು. ಮೂಲತಃ ಗೈರುಹಾಜರಿಯನ್ನು ನಿಗ್ರಹಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಲು ಬಯಸಿದ್ದ ಸಂಸ್ಥೆಯು ೨೦೧೯ರ ಏಪ್ರಿಲ್ ತಿಂಗಳಿನಿಂದಲೇ ನಿಟ್ಟಿನಲ್ಲಿ ಕಾರ್ಯಮಗ್ನವಾಗಿತ್ತು.

ಒಂದು ಆವರಣದಲ್ಲಿ ನೆಗಡಿ ಅಥವಾ ಜ್ವರದಿಂದ ಬಳಲುತ್ತಿರುವ ಒಬ್ಬ ವಿಜ್ಞಾನಿ ಅಥವಾ ಸಂಶೋಧಕ ಇದ್ದರೆ, ಇತರ ವಿಜ್ಞಾನಿಗಳು ಶೀಘ್ರದಲ್ಲೇ ಒಬ್ಬರ ನಂತರ ಒಬ್ಬರಂತೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಆದ್ದರಿಂದ ಸಂಶೋಧಕರು ಎಲ್ಲಾ ರೀತಿಯ ಫ್ಲೂ ಮಾದರಿಯ ವೈರಸ್ಸುಗಳನ್ನು ತಟಸ್ಥಗೊಳಿಸುವ ಮತ್ತು ಇತರರಿಗೆ ಅವುಗಳು ಹರಡದಂತೆ ಮಾಡುವ ನಿಟ್ಟಿನಲ್ಲಿ ಉಪಕರಣ ರೂಪಿಸಲು ಯೋಚಿಸಿ ಸಂಸ್ಥೆಯು ಕಾರ್ಯಮಗ್ನವಾಗಿತ್ತು. ಕೋವಿಡ್ -೧೯ ಜಗತ್ತನ್ನು ಬಾಧಿಸಿದಗ ವೈರಸ್ ಹರಡುವುದನ್ನು ತಡೆಯಲು ಇದನ್ನು ಚೆನ್ನಾಗಿ ಬಳಸಿಕೊಳ್ಳಬಹುದು ಎಂಬುದಾಗಿ ಸಂಶೋಧಕರು ಭಾವಿಸಿದರು.

"ಇದು ಸೋಂಕಿತ ವ್ಯಕ್ತಿಯನ್ನು ಗುಣಪಡಿಸುವುದಿಲ್ಲ. ಆದರೆ ಇದು ಸಾಂಕ್ರಾಮಿಕತೆಯನ್ನು ಕಡಿಮೆ ಮಾಡುತ್ತದೆ. ಯಾರಾದರೂ ಸಾಧನವನ್ನು ಮನೆಯಲ್ಲಿ ಹೊಂದಿದ್ದರೆ, ಬೇರೆ ಯಾರಿಗೂ ಕೋವಿಡ್ ಹರಡುವುದಿಲ್ಲ. ಇದು ಒಂದು ನಿಯಂತ್ರಣ ಸಾಧನ. ನಾವು ಮೇರಿಲ್ಯಾಂಡ್ ವಿಶ್ವವಿದ್ಯಾಲಯಕ್ಕೆ ಮತ್ತು ಮೆಕ್ಸಿಕೊದ  ಒಂದು ಸಂಸ್ಥೆಗೆ ಪತ್ರ ಬರೆದಿದ್ದೇವೆ. ಅವರು ಅದನ್ನು ಪರೀಕ್ಷಿಸಲು ಬಯಸಿದ್ದಾರೆ ಎಂದು ಡಾ. ಕುಮಾರ್ ನುಡಿದರು.

ಭಾರತದಲ್ಲಿ ಕೇವಲ ಮೂರು ಸೋಂಕಿತ ಪ್ರಕರಣಗಳು ಇದ್ದಾಗ, ಫೆಬ್ರವರಿ ಮೊದಲ ವಾರದಲ್ಲಿಯೇ ತನ್ನದೇ ಆದ ಸ್ವತಂತ್ರ ಪರೀಕ್ಷೆಯನ್ನು ಮಾಡುವಂತೆ ಕೋರಿ ಸಂಸ್ಥೆಯು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಆದರೆ ಸಚಿವಾಲಯದಿಂದ ಈವರೆಗೂ ಸಂಸ್ಥೆಗೆ ಪ್ರತಿಕ್ರಿಯೆ ಬಂದಿಲ್ಲ.

ಸ್ಕೇಲೀನ್ ಹೈಪರ್ಚಾರ್ಜ್ ಕರೋನಾ ಕ್ಯಾನನ್ (ಶೈಕೋಕನ್) ಎಂದು ಹೆಸರಿಸಲಾದ ಉಪಕರಣ (ಗ್ಯಾಜೆಟ್) ಮೈಕ್ರೊವೇವ್ ಓವನ್ ಗಾತ್ರಕ್ಕಿಂತಲೂ ಸಣ್ಣದು. ದೆಹಲಿಯ ನಿವಾಸಿಗಳು ಏರ್ ಪ್ಯೂರಿಫೈಯರ್ಗಳನ್ನು ಇರಿಸಿದಂತೆಯೇ  ಕೊಠಡಿಗಳು, ಕಾರಿಡಾರ್ಗಳು, ಶಾಲೆಗಳು ಮತ್ತು ತೆರೆದ ಪ್ರದೇಶಗಳಂತಹ ವ್ಯಾಪ್ತಿಯ ಪ್ರದೇಶಗಳಲ್ಲಿ ಸೀಮಿತ ಅಂತರದಲ್ಲಿ ಇವುಗಳನ್ನು ಇರಿಸಬಹುದು ಎಂದು ಅವರು ಹೇಳಿದರು.

ಸಾಧನವು ಸೆಕೆಂಡಿಗೆ ೧೦ ರಿಂದ ೧೦೦-ಟ್ರಿಲಿಯನ್ ಅಯಾನುಗಳನ್ನು ಕಳುಹಿಸಬಲ್ಲದು, ಇದನ್ನು ಬೆಂಗಳೂರಿನಲ್ಲಿ ಸಂಸ್ಥೆಯ ಸ್ವಾಗತ ಕಚೇರಿ (ರಿಸೆಪ್ಷನ್) ಮತ್ತು ಕಾರ್ಯಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ ಎಂದು ಅವರು ನುಡಿದರು.

ಮೂಲಮಾದರಿಯನ್ನು ಅಮೆರಿಕಕ್ಕೆ ತಲುಪಿಸಿದರೆ ಅದರ ಪರಿಣಾಮಕಾರಿತ್ವವನ್ನು ಮೌಲ್ಯೀಕರಿಸಲು ಸುಮಾರು ನಾಲ್ಕರಿಂದ ಐದು ದಿನಗಳು ಬೇಕಾಗುತ್ತವೆ. ಎಲೆಕ್ಟ್ರಾನ್ಗಳು ಎಷ್ಟು ದೂರ ಹೋಗುತ್ತವೆ, ಅದು ಎಷ್ಟು ದೂರದವರೆಗೆ ಕೆಲಸ ಮಾಡಬಹುದು, ಸಾರ್ವಜನಿಕವಾಗಿ ಎಷ್ಟು ಉಪಕರಣಗಳನ್ನು ಇಡಬೇಕು. ಮುಚ್ಚಿದ ಮತ್ತು ತೆರೆದ ಪ್ರದೇಶಗಳು, ಮರ, ಉಕ್ಕು ಮುಂತಾದ ವಿವಿಧ ಮೇಲ್ಮೈಗಳಲ್ಲಿ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಹ ಪ್ರಯೋಗಾಲಯಗಳು ನಿರ್ಧರಿಸಬೇಕಾಗುತ್ತದೆ.

ಪರೀಕ್ಷೆಗಳನ್ನು ಯಶಸ್ವಿಯಾದರೆ, ಉಪಕರಣದ ಸಾಮೂಹಕ ಉತ್ಪಾದನೆ ಸಲುವಾಗಿ ಅದರ ವಿನ್ಯಾಸ ಮತ್ತು ಎಂಜಿನಿಯರಿಂಗ್ ಉಚಿತವಾಗಿ ನೀಡಲು ಸಂಸ್ಥೆ ಸಿದ್ಧವಾಗಿದೆ ಎಂದು ಡಾ. ಕುಮಾರ್ ಹೇಳಿದರು. ಕಾರು ತಯಾರಕರು, ಸಣ್ಣ ತಯಾರಕರು, ಯಾರಾದರೂ ಸರಿ ಅವರನ್ನು- ಎಲೆಕ್ಟ್ರಾನಿಕ್ ಸಾಧನವನ್ನು ತಯಾರಿಸುವಲ್ಲಿ ತೊಡಗಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಸಾಮೂಹಿಕವಾಗಿ ದೊಡ್ಡ ಪ್ರಮಾಣದಲ್ಲಿ ತಯಾರಿಸಿದರೆ, ಸಣ್ಣ ಉಪಕರಣಕ್ಕೆ  ಕೇವಲ ೬೦೦ ರೂ. ದೊಡ್ಡ ಸಾಧನಕ್ಕೆ ,೦೦೦ ರೂ. ಬೆಲೆ ಆಗಬಹುದು ಎಂದು ಡಾ. ಕುಮಾರ್ ಹೇಳಿದರು.

No comments:

Advertisement