Saturday, March 7, 2020

ಕೇರಳದಲ್ಲಿ ಹಕ್ಕಿ ಜ್ವರ: ಬಾತುಕೋಳಿ, ಹೇಂಟೆಗಳ ವಧೆಗೆ ಆದೇಶ

ಕೇರಳದಲ್ಲಿ ಹಕ್ಕಿ ಜ್ವರ: ಬಾತುಕೋಳಿ, ಹೇಂಟೆಗಳ ವಧೆಗೆ ಆದೇಶ
ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಎರಡು ಕೋಳಿ ಸಾಕಣೆ ಕೇಂದ್ರಗಳಲ್ಲಿ (ಪೌಲ್ಟ್ರಿ ಫಾರಂ) ಹಕ್ಕಿ ಜ್ವರ ಕಂಡು ಬಂದಿದ್ದು, ಬೆನ್ನಲ್ಲೇ ಸೋಂಕಿತ ಪ್ರದೇಶದಿಂದ ಒಂದು ಕಿಮೀ ವ್ಯಾಪ್ತಿಯಲ್ಲಿನ ಬಾತುಕೋಳಿಗಳು ಮತ್ತು ಹೇಂಟೆಗಳನ್ನು (ಹೆಣ್ಣುಕೋಳಿ) ಸಾಮೂಹಿಕವಾಗಿ ಹತ್ಯೆ ಮಾಡುವವಂತೆ ಅಧಿಕಾರಿಗಳು 2020 ಮಾರ್ಚ್  07ರ ಶನಿವಾರ ಆಜ್ಞಾಪಿಸಿದರು.

ತಮ್ಮ ಅಧ್ಯಕ್ಷತೆಯಲ್ಲಿ ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖಾ ಅಧಿಕಾರಿಗಳ ತುರ್ತು ಸಭೆ ಕರೆದಿದ್ದ ಜಿಲ್ಲಾಧಿಕಾರಿ ಶ್ರೀರಾಮ್ ಸಾಂಬಶಿವ ರಾವ್ ಅವರು ಹಕ್ಕಿಜ್ವರದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಸರ್ಕಾರವು ಕಾರ್ಯಯೋಜನೆಯನ್ನು ರೂಪಿಸಿದ್ದು, ಐವರು ಸದಸ್ಯರನ್ನು ಒಳಗೊಂಡ ಕಾರ್ಯತಂಡಗಳನ್ನು ನಿಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನುಡಿದರು. ಭಯಗ್ರಸ್ತರಾಗದಂತೆ ಸಾರ್ವಜನಿಕರಿಗೆ ಸಲಹೆ ಮಾಡಿದ ಅವರು ಸೋಂಕು ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಭಯಗ್ರಸ್ತರಾಗದಂತೆ ಸಾರ್ವಜನಿಕರಿಗೆ ಸಲಹೆ ಮಾಡಿದ ಅವರು ಸೋಂಕು ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.


ಎರಡು ಕೋಳಿ ಸಾಕಣೆ ಕೇಂದ್ರಗಳ ಸುತ್ತುಮುತ್ತಣ ಒಂದು ಕಿಮೀ ಸರಹದ್ದಿನಲ್ಲಿ ಎಲ್ಲ ಕೋಳಿಗಳು, ಬಾತುಕೋಳಿಗಳು ಮತ್ತು ಇತರ ದೇಶೀ ಹಕ್ಕಿಗಳನ್ನು ಸಾಮೂಹಿಕವಾಗಿ ಹತ್ಯೆಗೈಯಲು ಕ್ಷಿಪ್ರ ಕ್ರಮ ಕೈಗೊಳ್ಳಲಾಗಿದೆ. ಇದು ಸೋಂಕು ನೆರೆಯ ಪ್ರದೇಶಗಳಿಗೆ ಹರಡದಂತೆ ಮುಂಜಾಗರೂಕತಾ ಕ್ರಮ ಮಾತ್ರ. ನಿರ್ದಿಷ್ಟ ಸಂಖ್ಯೆ ಲಭ್ಯವಿಲ್ಲವಾದರೂ, ಪೌಲ್ಟ್ರಿ ಫಾರಂ ಸುತ್ತಮುತ್ತಣ ನೂರಾರು ಹಕ್ಕಿಗಳನ್ನು ಕೊಲ್ಲಲಾಗುವುದು ಎಂದು ಪಶು ಸಂಗೋಪನಾ ಇಲಾಖೆಯ ತಿರುವಂತಪುರಂ ಕಚೇರಿಯಲ್ಲಿನ ಉಪ ನಿರ್ದೇಶಕ ಎಂಕೆ ಪ್ರಸಾದ್ ಹೇಳಿದರು.

ಹಿಂದೆ ೨೦೧೬ರಲ್ಲಿ ರಾಜ್ಯದಲ್ಲಿ ಹಕ್ಕಿಜ್ವರ ವರದಿಯಾಗಿತ್ತು. ಆಗ ವೆಂಗೇರಿ ಮತ್ತು ಕೊಡಿಯಾತ್ತೂರಿನ ಎರಡು ಕೋಳಿಸಾಕಣೆ ಕೇಂದ್ರಗಳ ಒಂದು ಕಿಮೀ ವ್ಯಾಪ್ತಿಯ ಎಲ್ಲ ಕೋಳಿಗಳನ್ನೂ ಕೊಂದು ಹೂಳಲಾಗಿತ್ತು. ಆಗ ಅಂದಾಜು ೧೦,೦೦೦ದಿಂದ ೧೨,೦೦೦ ಹಕ್ಕಿಗಳನ್ನು ಕೊಲ್ಲಲಾಗಿತ್ತು ಎಂದು ಮೂಲಗಳು ಹೇಳಿವೆ.

No comments:

Advertisement