ಕೊರೋನಾ: ಸಾಂತ್ರನ ಕ್ರಮ ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಎಟಿಎಂ ಹಣ ವಾಪಸ್ ೩ ತಿಂಗಳವರೆಗೆ ಉಚಿತ, ಜಿಎಸ್ಟಿ, ಐ-ಟಿ ರಿಟರ್ನ್, ಆಧಾರ್-ಪ್ಯಾನ್ ಜೋಡಣೆ ಕೊನೆ ದಿನಾಂಕ ಜೂನ್ ೩೦ ಕ್ಕೆ ವಿಸ್ತರಣೆ
ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತಿರುವ ಹಿನ್ನೆಲೆಯಲ್ಲಿ ದೇಶಕ್ಕೆ ಆರ್ಥಿಕ ಮತ್ತು ಮಾನಸಿಕ ನೆಮ್ಮದಿ ನೀಡುವ ಸಲುವಾಗಿ, ಮುಂದಿನ ಮೂರು ತಿಂಗಳು ಇತರ ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡ್ಗಳನ್ನು ಬಳಸಿಕೊಂಡು ಎಟಿಎಂಗಳಿಂದ ಹಣವನ್ನು ಹಿಂಪಡೆಯುವಾಗ ವಿಧಿಸಲಾಗುವ ಎಲ್ಲಾ ಶುಲ್ಕಗಳನ್ನು ತೆಗೆದುಹಾಕುವುದು ಸೇರಿದಂತೆ ಹಲವು ’ಸಾಂತ್ವನ’ ಕ್ರಮಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020 ಮಾರ್ಚ್
24ರ ಮಂಗಳವಾರ ಪ್ರಕಟಿಸಿದರು.
ಆರ್ಥಿಕ ನಿರಾಳತೆಗಾಗಿ ಸರ್ಕಾg ಕೈಗೊಂಡಿರುವ ಯೋಜನೆಯ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ ಸೀತಾರಾಮನ್, ಮುಂದಿನ ಮೂರು ತಿಂಗಳವರೆಗೆ ಯಾವುದೇ ಶುಲ್ಕವಿಲ್ಲದೆ ಡೆಬಿಟ್ ಕಾರ್ಡ್ದಾರರು ಬೇರೆ ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು ಎಂದು ಘೋಷಿಸಿದರು. ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅಗತ್ಯ ಶುಲ್ಕ ಇರುವುದಿಲ್ಲ ಎಂದು ಸಚಿವರು ಹೇಳಿದರು.
ಡಿಜಿಟಲ್ ವ್ಯಾಪಾರ ಮತ್ತು ವಹಿವಾಟುಗಳಿಗೆ ಬ್ಯಾಂಕ್ ಶುಲ್ಕವನ್ನು ಕಡಿಮೆ ಮಾಡಲಾಗಿದೆ ಎಂದೂ ಸರ್ಕಾರ ಪ್ರಕಟಿಸಿತು.
೨೦೧೮-೧೯ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ಮಾರ್ಚ್ ೩೧ ರಿಂದ ಜೂನ್ ೩೦ ರವರೆಗೆ ವಿಸ್ತರಿಸಲಾಗಿದೆ, ವಿಳಂಬವಾದ ಪಾವತಿಗಳಿಗೆ ಬಡ್ಡಿದರವನ್ನು ಶೇಕಡಾ ೧೨ ರಿಂದ ಶೇಕಡಾ ೯ಕ್ಕೆ ಇಳಿಸಲಾಗಿದೆ ಎಂದು ಸಚಿವರು ಹೇಳಿದರು.
ಆಧಾರ್-ಪ್ಯಾನ್ ಜೋಡಣೆ ಮಾಡುವ ದಿನಾಂಕವನ್ನು ಈ ಹಿಂದೆ
ನಿಗದಿ ಪಡಿಸಲಾಗಿದ್ದ ಮಾರ್ಚ್ ೩೧ರಿಂದ ಜೂನ್ ೩೦ ಕ್ಕೆ ವಿಸ್ತರಿಸಲಾಗಿದೆ. ಮೂಲದಲ್ಲಿ (ಟಿಡಿಎಸ್) ಕಡಿತಗೊಳಿಸಿದ ತೆರಿಗೆಯನ್ನು ತಡವಾಗಿ ಠೇವಣಿ ಮಾಡುವ ಬಡ್ಡಿದರವನ್ನು ಕೂಡಾ ಕಡಿಮೆ ಮಾಡಲಾಗಿದೆ ಎಂದು ಸೀತಾರಾಮನ್ ತಿಳಿಸಿದರು. "ಈಗ ಮತ್ತು ಜೂನ್ ೩೦ ರ ನಡುವೆ ಯಾವುದೇ ಹೆಚ್ಚುವರಿ ೧೦% ಬಡ್ಡಿ ವಿಧಿಸಲಾಗುವುದಿಲ್ಲ" ಎಂದು ಅವರು ಹೇಳಿದರು.
ಮಾರ್ಚ್, ಏಪ್ರಿಲ್ ಮತ್ತು ಮೇ ೨೦೨೦ ರ ಜಿಎಸ್
ಟಿ ರಿಟರ್ನ್ಸ್ ಸಲ್ಲಿಕೆಯ ಕೊನೆಯ ದಿನಾಂಕವನ್ನು ಜೂನ್ ೩೦ ಕ್ಕೆ ವಿಸ್ತರಿಸಲಾಗುತ್ತಿದೆ. ವಿವಿಧ ಸ್ಟ್ಯಾಗರಿಂಗ್ ದಿನಾಂಕಗಳು ಅನ್ವಯವಾಗುತ್ತವೆ, ಆದರೆ ಎಲ್ಲವೂ ಜೂನ್ ಅಂತ್ಯಕ್ಕೆ ಕೊನೆಯಾಗುತ್ತವೆ. ವಿಳಂಬವಾಗಿ ರಿಟರ್ನ್ ಸಲ್ಲಿಕೆಗೆ ವಿಧಿಸಲಾಗುವ ಬಡ್ಡಿದರವನ್ನು ಸಹ ಕಡಿಮೆ ಮಾಡಲಾಗಿದೆ ಎಂದು ಸೀತಾರಾಮನ್ ಹೇಳಿದರು.
ಪ್ರಸ್ತುತ ಪರಿಸ್ಥಿತಿ ಆರು ತಿಂಗಳು ಮೀರಿ ಮುಂದುವರಿದರೆ ನಂತರದ ಹಂತದಲ್ಲಿ ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ (ಐಬಿಸಿ) ಸೆಕ್ಷನ್ ೭, ೯ ಮತ್ತು ೧೦ ಅನ್ನು ಅಮಾನತುಗೊಳಿಸುವ ಬಗ್ಗೆಯೂ ಸರ್ಕಾರ ಚಿಂತಿಸುತ್ತಿದೆ.
ಏತನ್ಮಧ್ಯೆ, ಮೀನುಗಾರಿಕಾ ಸರಕಿನ ಆಗಮನದಲ್ಲಿ ಒಂದು ತಿಂಗಳ ವಿಳಂಬವನ್ನು ಕ್ಷಮಿಸಲಾಗುವುದು ಎಂದು ಸೀತಾರಾಮನ್ ಹೇಳಿದರು. ಏಪ್ರಿಲ್ನಲ್ಲಿ ಮುಕ್ತಾಯಗೊಳ್ಳುವ ಮೀನುಗಾರಿಕೆ ಆಮದು ಪರವಾನಗಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಸಚಿವರು ನುಡಿದರು.
ಮಧ್ಯಮ, ಸಣ್ಣ ಮತ್ತು ಕಿರು ಉದ್ದಿಮೆಗಳ (ಎಂಎಸ್ಎಂಇ) ವಿರುದ್ಧ ದಿವಾಳಿತನ ಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಡೀಫಾಲ್ಟ್ ಮಿತಿಯನ್ನು ಈಗಿರುವ ೧ ಲಕ್ಷ ರೂ.ಗಳಿಂದ ೧ ಕೋಟಿ ರೂಪಾಯಿವರೆಗೆ ವಿಸ್ತರಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು.
ಹೊಸದಾಗಿ ಸಂಘಟಿತ ಕಂಪನಿಗಳು ಆರು ತಿಂಗಳೊಳಗೆ ಪ್ರಾರಂಭದ ಕುರಿತು ಘೋಷಣೆ ಸಲ್ಲಿಸುವ ಅವಶ್ಯಕತೆಯಿದೆ ಎಂದು ಹಣಕಾಸು ಸಚಿವಾಲಯ ಘೋಷಿಸಿತು, ಇದಕ್ಕಾಗಿ ಸರ್ಕಾರವು ತಮ್ಮ ರಿಟರ್ನ್ಸ್ ಸಲ್ಲಿಸಲು ಹೆಚ್ಚುವರಿ ಆರು ತಿಂಗಳುಗಳನ್ನು ನೀಡುತ್ತಿದೆ.
ಕಂಪನಿಯ ನಿರ್ದೇಶಕರು ಕನಿಷ್ಟ ರೆಸಿಡೆನ್ಸಿ ಅಗತ್ಯವನ್ನು ಅನುಸರಿಸದಿದ್ದರೆ, ಅದನ್ನು "ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ" ಎಂದು ಸೀತಾರಾಮನ್ ಹೇಳಿದರು.
ಮಂಡಳಿ ಸಭೆಗಳನ್ನು ನಡೆಸುವ ಕಡ್ಡಾಯ ಅಗತ್ಯವನ್ನು ಮುಂದಿನ ಎರಡು ತ್ರೈಮಾಸಿಕಗಳಿಗೆ ೬೦ ದಿನಗಳ ಅವಧಿಗೆ ಸಡಿಲಿಸಲಾಗುತ್ತಿದೆ ಎಂದು ಕೂಡಾ ಸರ್ಕಾರ ಹೇಳಿತು. ೨೦೧೯-೨೦ನೇ ಸಾಲಿನ ಯಾವುದೇ ಮಂಡಳಿ ಸಭೆ ನಡೆಸದಿದ್ದರೆ ಅದನ್ನು ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ವಿತ್ತ ಸಚಿವರು ಹೇಳಿದರು.
೨೦೧೯-೨೦ರಲ್ಲಿ ಜಾರಿಗೆ ಬರಬೇಕಿದ್ದ ಕಂಪೆನಿಗಳ ಲೆಕ್ಕ ಪರಿಶೋಧಕರ ವರದಿ ಆದೇಶ ೨೦೨೦ ರ ಅನ್ವಯಿಕತೆಯನ್ನು ೨೦೨೦-೨೧ಕ್ಕೆ ಬದಲಾಯಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು.
ಆಮದುದಾರರು ಮತ್ತು ರಫ್ತುದಾರರಿಗೆ ಒಂದು ದೊಡ್ಡ ಪರಿಹಾರವಾಗಿ, ಕಸ್ಟಮ್ಸ್ ಕ್ಲಿಯರೆನ್ಸ್ ಈಗ ಜೂನ್ ೩೦ ರವರೆಗೆ ಅತ್ಯಗತ್ಯ ಸೇವೆಯಾಗಿ ಮಾಡಲಾಗಿದೆ ಮತ್ತು ಈ ಸೇವೆಯು
ವಾರಪೂರ್ತಿ ೨೪ ಗಂಟೆಗಳ ಕಾಲವೂ (೨೪/೭) ಲಭಿಸಲಿದೆ ಎಂದು ಸರ್ಕಾರ ಹೇಳಿತು.
ಪರೋಕ್ಷ ತೆರಿಗೆ ಆಡಳಿತದಲ್ಲಿ ವಿವಾದಗಳನ್ನು ಬಗೆಹರಿಸುವ ’ಸಬ್ ಕಾ ವಿಶ್ವಾಸ್’ ಯೋಜನೆಯಡಿ ಪಾವತಿ ದಿನಾಂಕವನ್ನು ಜೂನ್ ೩೦ ರವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರ ಪ್ರಕಟಿಸಿತು.
೫ ಕೋಟಿ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ಕಂಪನಿಗಳಿಗೆ ಯಾವುದೇ ಬಡ್ಡಿ, ದಂಡ ಅಥವಾ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸೀತಾರಾಮನ್ ಹೇಳಿದರು, ಅಂತಹ ಕಂಪನಿಗಳಿಗೆ ಬಡ್ಡಿದರವನ್ನು ೯% ಕ್ಕೆ ಇಳಿಸಲಾಗುತ್ತದೆ. ಬಡ್ಡಿ ಮಾತ್ರ ಅನ್ವಯವಾಗುತ್ತದೆ, ಆದರೆ ವಿಳಂಬ ಶುಲ್ಕವಿಲ್ಲ ಮತ್ತು ದೊಡ್ಡ ಕಂಪನಿಗಳಿಗೆ ದಂಡವಿಲ್ಲ ಎಂದು ಸೀತಾರಾಮನ್ ಹೇಳಿದರು.
ತಜ್ಞರ ಸ್ವಾಗತ: ಆರ್ಥಿಕ ತಜ್ಞರು ಸರ್ಕಾರದ ಈ ಸಾಂತ್ವನ
ಈ ಕ್ರಮಗಳನ್ನು ಸ್ವಾಗತಿಸಿದರು ಮತ್ತು ಅಂತಹ ಸಮಯದಲ್ಲಿ ವ್ಯವಹಾರಗಳ ಚೇತರಿಕೆ ಹಾಗೂ ಅವುಗಳನ್ನು ಸುರಕ್ಷಿತಗೊಳಿಸುವ ಮಾರ್ಗಗಳನ್ನು ಸೂಚಿಸಿದರು.
‘ವ್ಯವಹಾರಗಳು ಈಗಿನ ಸಂಕಷ್ಟಕರ ಸನ್ನಿವೇಶಗಳನ್ನು ಎದುರಿಸಲು ವಿವಿಧ ಫೈಲಿಂಗ್ ವಿಸ್ತರಣೆಗಳು ಮತ್ತು ಅನುಸರಣೆಯಲ್ಲಿನ ಪರಿಹಾರ ಅಗತ್ಯವಾಗಿದ್ದವು ಎಂದು ಕ್ಲಿಯರ್ಟಾಕ್ಸ್ನ ಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಅವರು ಹೇಳಿದರು.
"ಹೆಚ್ಚು ಹೆಚ್ಚು ತಂತ್ರಜ್ಞಾನ ಕೇಂದ್ರೀಕೃತ ಮಾರ್ಗಗಳನ್ನು ಅನ್ವೇಷಿಸಲು ವ್ಯಾಪಾರಿಗಳು ಈ ಸಮಯವನ್ನು ಬಳಸಬೇಕು.
ಅವರು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಈಗ ಅನುಸರಣೆ ಮಾಡಬೇಕು. ಕ್ಲೌಡ್ ಆಧಾರಿತ ಸೇವೆಗಳನ್ನು ಬಳಸಬೇಕು ಮತ್ತು ಬಲವಾದ ನಿಯಂತ್ರಣಗಳು ಮತ್ತು ವ್ಯವಸ್ಥೆಗಳನ್ನು ನಿರ್ಮಿಸಬೇಕು. ತನ್ಮೂಲಕ ಡಿಜಿಟಲ್ ಮತ್ತು ದೂರದಿಂದ ಕೆಲಸ ಮಾಡಲು ಸಾಧ್ಯ’ ಎಂದು ಅವರು ಹೇಳಿದರು.
No comments:
Post a Comment