ಮಹದಾಯಿ ಯೋಜನೆ: ರಾಜ್ಯದ ಕಾಮಗಾರಿಗೆ ಸುಪ್ರೀಂ ಅಸ್ತು, ಗೋವಾಕ್ಕೆ ಹಿನ್ನಡೆ,
ನವದೆಹಲಿ: ಮಹದಾಯಿ ವಿಚಾರದಲ್ಲಿ ಗೋವಾಕ್ಕೆ ಹಿನ್ನಡೆಯಾಗಿದ್ದು, ಮಹದಾಯಿ ಯೋಜನೆ ಕಾಮಗಾರಿಯ
ಡಿಪಿಆರ್ ಹಾದಿಯನ್ನು 2020
ಮಾರ್ಚ್ 02ರ ಸೋಮವಾರ ಸುಪ್ರೀಂ ಕೋರ್ಟ್ ಸುಗಮಗೊಳಿಸಿತು. ದೆ. ಕೇಂದ್ರದ ಅನುಮತಿ ಪಡೆದು ಡಿಪಿಆರ್ ಸಲ್ಲಿಸುವಂತೆ
ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್ ಕಾಮಗಾರಿಯನ್ನು ಆರಂಭಿಸಬಹುದು ಎಂದು ಹೇಳಿತು.
ಮಹದಾಯಿ ನದಿ ನೀರು ಪ್ರಕರಣದಲ್ಲಿ ಕರ್ನಾಟಕದ ಯೋಜನೆ ಆಕ್ಷೇಪಿಸಿ ಗೋವಾ ಸಲ್ಲಿಸಿದ್ದ
ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರಚೂಡ್, ನ್ಯಾಯಮೂರ್ತಿ ಅಜಯ್ ರಸ್ಟೋಗಿ ದ್ವಿಸದಸ್ಯ
ಪೀಠ ಈ ಸೂಚನೆ ನೀಡಿದ್ದು, ೨೦೧೪ರ ಮಧ್ಯಂತರ ಆದೇಶದಲ್ಲಿ ನೀಡಿರುವ ನಿರ್ದೇಶನ ಪಾಲಿಸಬೇಕು ಎಂದು ತಿಳಿಸಿದೆ.
ಈ ಮೂಲಕ ಗೋವಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.
ಯೋಜನೆ ಕಾಮಗಾರಿಗೆ ಕೇಂದ್ರ, ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಇದಲ್ಲದೆ
ಡಿಪಿಆರ್ಗೆ ಕೇಂದ್ರ ಸರಕಾರದಿಂದ ಒಪ್ಪಿಗೆ ಪಡೆದುಕೊಳ್ಳಬೇಕು ಎಂದಿರುವ ಸುಪ್ರೀಂ, ಪರಿಸರ ಮೌಲ್ಯಮಾಪನ
ಮಾಡಿಸಿ ಆ ವರದಿಗೆ ಒಪ್ಪಿಗೆ ಪಡೆಯಬೇಕು ಎಂದು ಆದೇಶಿಸಿದೆ.
ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆ
ವಿರುದ್ಧ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಗೋವಾ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದರು.
ಕರ್ನಾಟಕದ ಯೋಜನೆಗಳಿಗೆ ಅನುಮತಿ ನೀಡದಂತೆ ಆಕ್ಷೇಪ ವ್ಯಕ್ತಪಡಿಸಿದರು.
ಮಹದಾಯಿ ನ್ಯಾಯಾಧೀಕರಣ ತೀರ್ಪು ನೀಡಿದೆ. ಆದರೆ, ತೀರ್ಪಿನ ಬಗ್ಗೆ ಇನ್ನೂ ಸ್ಪಷ್ಟೀಕರಣ
ಬೇಕಿದ್ದು, ಎಲ್ಲಾ ರಾಜ್ಯಗಳು ಸ್ಪಷ್ಟೀಕರಣ ಕೇಳಿವೆ. ಇದೆಲ್ಲದರ ಮಧ್ಯೆಯೇ ಕೇಂದ್ರ ಸರಕಾರ ಅಧಿಸೂಚನೆ
ಹೊರಡಿಸಿದೆ. ಕೇಂದ್ರ ಅಧಿಸೂಚನೆ ಹೊರಡಿಸಿದ ತಕ್ಷಣ ಯೋಜನೆ ಆರಂಭಿಸಲು ಸಾಧ್ಯವಿಲ್ಲ ಎಂದು ಮುಕುಲ್
ರೋಹ್ಟಗಿ ವಾದಿಸಿದರು.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯೋಜನೆಗೆ ಕೇಂದ್ರ ಹಾಗೂ ಪರಿಸರ ಮತ್ತು
ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಮಹದಾಯಿ ನದಿ ಪಾತ್ರದ ಹಾಗೂ ಕರ್ನಾಟಕದ ಪಕ್ಷಿಧಾಮಗಳಿಗೆ ಧಕ್ಕೆ
ಆಗಬಾರದು. ಪ್ರಕರಣ ಸಂಪೂರ್ಣ ಇತ್ಯರ್ಥ ಆಗುವರೆಗೆ ಯೋಜನೆ ಆರಂಭಿಸಬಾರದು ಎಂದು ಕರ್ನಾಟಕ ಸರಕಾರಕ್ಕೆ
ಸೂಚಿಸಿ ಎಂದು ಮುಕುಲ್ ರೋಹ್ಟಗಿ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದರು. ಕರ್ನಾಟಕದ ಪರ ವಕೀಲರಾದ ಪ್ರಭುಲಿಂಗ ನಾವದಗಿ ಮತ್ತು ಶ್ಯಾಮ್ದಿವಾನ್ ನೇತೃತ್ವದ ತಂಡ ವಾದಿಸಿತ್ತು.
ಮಹದಾಯಿ ನದಿ ವಿಚಾರದಲ್ಲಿ ಗೋವಾದ ತಕರಾರಿಂದ ಕರ್ನಾಟಕಕ್ಕೆ ಯೋಜನೆ ಕಾಮಗಾರಿ ಪ್ರಾರಂಭಿಸಲು
ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ಯೋಜನೆ ಪ್ರಾರಂಭಕ್ಕೆ ಅಡ್ಡಿ ಇಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.
ಫೆ.೨೦ರ ಅಧಿಸೂಚನೆಗೂ ಒಪ್ಪಿಗೆ ನೀಡಿದ್ದ ಗೋವಾ, ಈಗ ಯೋಜನೆಗೆ ಅನುಮತಿ ನೀಡಬಾರದೆಂದು ಸುಪ್ರೀಂ ಕೋರ್ಟ್
ಮೆಟ್ಟಿಲೇರಿತ್ತು.
No comments:
Post a Comment