ಬಹುಮತ ಸಾಬೀತುಪಡಿಸಿದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ
ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ೪ನೇ ಬಾರಿಗೆ ಸೋಮವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯ ವಿಧಾನಸಭೆಯಲ್ಲಿ 2020 ಮಾರ್ಚ್ 24ರ ಮಂಗಳವಾರ ಬಿಜೆಪಿ ಸರ್ಕಾರದ ಬಹುಮತವನ್ನು ಸಾಬೀತು ಪಡಿಸಿದರು.
ವಿರೋಧಿ ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ಸದನದಲ್ಲಿ ಹಾಜರಿರಲಿಲ್ಲ.
ವಿರೋಧಿ ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ಸದನದಲ್ಲಿ ಹಾಜರಿರಲಿಲ್ಲ.
ಪಕ್ಷೇತರರು, ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ಮತ್ತು ಸಮಾಜವಾದಿ ಪಕ್ಷ (ಎಸ್ ಪಿ) ಶಾಸಕರೂ ವಿಶ್ವಾಸಮತ ನಿರ್ಣಯದ ವೇಳೆ ಬಿಜೆಪಿ ಸರ್ಕಾರದ ಪರವಾಗಿ ಮತ ಚಲಾಯಿಸಿದರು.
ಚೌಹಾಣ್ ಅವರು ಮಧ್ಯಪ್ರದೇಶದ ೧೯ನೇ ಮುಖ್ಯಮಂತ್ರಿಯಾಗಿ ಸೋಮವಾರ ರಾತ್ರಿ ರಾಜ್ಯಪಾಲ ಲಾಲಜಿ ಟಂಡನ್ ಅವರಿಂದ ಪ್ರಮಾಣವಚನ ಸ್ವೀಕರಿಸಿದ್ದರು.
ಮಧ್ಯಪ್ರದೇಶದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ೧೦೬ ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ ಪಕ್ಷವು ೯೨ ಸದಸ್ಯರನ್ನು ಹೊಂದಿದೆ. ಸದನದ ಎರಡು ಸ್ಥಾನಗಳು ಖಾಲಿ ಉಳಿದಿದ್ದು, ೨೩ ಮಂದಿ ಶಾಸಕರ ರಾಜೀನಾಮೆಯ ಬಳಿಕ ರಾಜ್ಯ ವಿಧಾನಸಭೆಯ ಸದಸ್ಯ ಬಲವು ೨೦೫ಕ್ಕೆ ಇಳಿದಿದೆ. ಸದನದಲ್ಲಿ ನಾಲ್ವರು ಪಕ್ಷೇತರರು, ಇಬ್ಬರು ಬಿಎಸ್ ಪಿ ಮತ್ತು ಒಬ್ಬ ಎಸ್ ಪಿ ಶಾಸಕರು ಇದ್ದಾರೆ.
ರಾಜ್ಯ ವಿಧಾನಸಭೆಯ ಮುಂಗಡಪತ್ರ ಅಧಿವೇಶನವನ್ನು ಮಂಗಳವಾರ ಮರುಸಮಾವೇಶಗೊಳಿಸಲಾಗಿದ್ದು, ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರದ ವಿಶ್ವಾಸಮತ ಯಾಚನೆ ಈದಿನದ ಏಕೈಕ ಕಾರ್ಯಸೂಚಿಯಾಗಿತ್ತು.
ನಾಲ್ಕು ದಿನಗಳ ಅಧಿವೇಶನದಲ್ಲಿ ಮೂರು ಸಿಟ್ಟಿಂಗ್ಗಳು ಇರಲಿದ್ದು, ನೂತನ ಸರ್ಕಾರವು ಲೇಖಾನುದಾನವನ್ನೂ ಕೋರಲಿದೆ.
ಇದಕ್ಕೆ ಮುನ್ನ ಬಿಜೆಪಿ ಶಾಸಕಾಂಗ ಪಕ್ಷವು ಅವರ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯ ಬಾಕಿ ಇರುವಾಗಲೇ ಸೋಮವಾರ ರಾತ್ರಿ ವಿಧಾನಸಭಾಧ್ಯಕ್ಷ ಎನ್ ಪಿ ಪ್ರಜಾಪತಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
No comments:
Post a Comment