Monday, March 2, 2020

ನಿರ್ಭಯಾ ಪ್ರಕರಣ: ಅಪರಾಧಿಗಳ ಗಲ್ಲು ಜಾರಿಗೆ ಮತ್ತೆ ತಡೆ

ನಿರ್ಭಯಾ ಪ್ರಕರಣ: ಅಪರಾಧಿಗಳ ಗಲ್ಲು ಜಾರಿಗೆ ಮತ್ತೆ ತಡೆ
ಬೆಂಕಿಯೊಂದಿಗೆ ಸರಸ ಬೇಡ ಎಂದು ಕೋರ್ಟ್ ಎಚ್ಚರಿಕೆ
ನವದೆಹಲಿ: ಬೆಂಕಿಯೊಂದಿಗೆ ಸರಸ ಬೇಡ ಎಂಬುದಾಗಿ ಬೆಳಗ್ಗೆ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಿಕ್ಷಿತ ಅಪರಾಧಿಗಳ ಪರ ವಕೀಲ .ಪಿ.ಸಿಂಗ್ ಅವರಿಗೆ ಎಚ್ಚರಿಕೆ ನೀಡಿದ್ದ ವಿಚಾರಣಾ ನ್ಯಾಯಾಲಯ 2020 ಮಾರ್ಚ್ 02ರ ಸೋಮವಾರ ಸಂಜೆ ನಾಲ್ಕೂ ಮಂದಿ ಅಪರಾಧಿಗಳ ಗಲ್ಲು ಜಾರಿಯನ್ನು ತಡೆ ಹಿಡಿದು, ಪ್ರಕರಣವನ್ನು ಮುಂದಿನ ಆದೇಶಕ್ಕಾಗಿ ಮುಂದೂಡಿತು.

ಪ್ರಕರಣದ ನಾಲ್ವರು ಅಪರಾಧಿಗಳನ್ನು ೨೦೨೦ ಮಾರ್ಚ್ ೩ರ ಸೋಮವಾರ ಬೆಳಗ್ಗೆ ಗಂಟೆಗೆ ಗಲ್ಲಿಗೆ ಏರಿಸಬೇಕಾಗಿತ್ತು. ಗಲ್ಲು ಕುಣಿಕೆಯಿಂದ ನಿರ್ಭಯಾ ಹಂತಕರು ಪಾರಾಗಿರುವುದು ಇದು ಮೂರನೇ ಬಾರಿ.

ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಕುಮಾರ್ ಗುಪ್ತ ಸಲ್ಲಿಸಿದ ಕ್ಷಮಾದಾನ ಕೋರಿಕೆ ಅರ್ಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಮುಂದೆ ಬಾಕಿ ಇರುವುದನ್ನು ಅನುಸರಿಸಿ ನ್ಯಾಯಾಲಯ ವಿಷಯದ ವಿಚಾರಣೆಯನ್ನು ಮುಂದೂಡಿತು.

ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ಪವನ್ ಕುಮಾರ ಗುಪ್ತ ಅರ್ಜಿಯು ಇತ್ಯರ್ಥಗೊಳ್ಳದೇ ಬಾಕಿ ಉಳಿದಿರುವುದರಿಂದ ಮರಣದಂಡನೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ತಮ್ಮ ಆದೇಶದಲ್ಲಿ ತಿಳಿಸಿದರು.

ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಾನು ಸೋಮವಾರ ರಾಷ್ಟ್ರಪತಿ ಕೋವಿಂದ್ ಅವರ ಮುಂದೆ ತಾನು ಸಲ್ಲಿಸಿರುವುದರಿಂದ ಗಲ್ಲು ಶಿಕ್ಷೆ ಜಾರಿಗೆ ತಡೆ ನೀಡಬೇಕು ಎಂದು ಕೋರಿ ಪವನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ಡೆತ್ ವಾರಂಟಿಗೆ ತಡೆ ನೀಡುವಂತೆ ಕೋರಿ ಪವನ್ ಸಲ್ಲಿಸಿದ ಹೊಸ ಅರ್ಜಿ ಕುರಿತ ತೀರ್ಪನ್ನು ಕಾಯ್ದಿರಿಸುತ್ತಾ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ಅತ್ಯಂತ ತಡವಾಗಿ ಶಿಕ್ಷಿತ ಅಪರಾಧಿಯ ಪರವಾಗಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಕ್ಕಾಗಿ ಪವನ್ ಗುಪ್ತ ಪರ ವಕೀಲರ ಎಪಿ ಸಿಂಗ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಇದಕ್ಕೆ ಮುನ್ನ ಸೋಮವಾರ ವಿಚಾರಣಾ ನ್ಯಾಯಾಲಯವು ಪವನ್ ಮತ್ತು ಅಕ್ಷಯ್ ಕುಮಾರ್ ಸಿಂಗ್ ಅವರು ತಮ್ಮ ಗಲ್ಲು ಜಾರಿ ತಡೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು.

ಆದಾಗ್ಯೂ, ಪವನ್ ಪರ ವಕೀಲ ಎಪಿ ಸಿಂಗ್ ಅವರು ತಾವು ರಾಷ್ಟ್ರಪತಿಯವರಿಗೆ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಿರುವುದರಿಂದ ಗಲ್ಲು ಜಾರಿಗೆ ತಡೆಯಾಜ್ಞೆ ನೀಡದೆ ಬೇರೆ ಗತ್ಯಂತರ ಇಲ್ಲ ಎಂದು ಹೇಳಿದ್ದರು.

ತಮ್ಮ ಪ್ರಕರಣಕ್ಕೆ ಸಂಬಂಧಿದಂತೆ ವಾದ ಮಂಡನೆಗೆ ಭೋಜನ ವಿರಾಮದ ಬಳಿಕ ಬರುವಂತೆ ನ್ಯಾಯಾಲಯ ಪವನ್ ಪರ ವಕೀಲರಿಗೆ ಆಜ್ಞಾಪಿಸಿತ್ತು.

ಬೋಜನ ವಿರಾಮಕ್ಕೆ ಮೊದಲಿನ ವಿಚಾರಣೆಯಲ್ಲಿ ನ್ಯಾಯಾಲಯವು ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ. ನೀವು ಜಾಗರೂಕರಾಗಿರಬೇಕು ಎಂದು ಹೇಳುವ ಮೂಲಕ ವಕೀಲ ಎಪಿ ಸಿಂಗ್ ಅವರನ್ನು ಎಚ್ಚರಿಸಿತ್ತು. ಯಾವುದೇ ವ್ಯಕ್ತಿಯಿಂದ ಒಂದು ತಪ್ಪು ಆದರೆ ಪರಿಣಾಮ ಏನಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿ ಎಂದೂ ನ್ಯಾಯಾಧೀಶರು ಎಚ್ಚರಿಸಿದ್ದರು.

ವಿಚಾರಣೆ ಕಾಲದಲ್ಲಿ ತಿಹಾರ್ ಸೆರೆಮನೆ ಅಧಿಕಾರಿಗಳು ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಿದ ಬಳಿಕ ಚೆಂಡು ಸರ್ಕಾರದ ಅಂಗಳ ತಲುಪಿದೆ. ನ್ಯಾಯಾಧೀಶರಿಗೆ ಈಗ ಯಾವುದೇ ಪಾತ್ರವೂ ಇಲ್ಲ ಎಂದು ಹೇಳಿದರು. ರಾಷ್ಟಪತಿಯವರು ಪವನ್ ಕ್ಷಮಾದಾನ ಕೋರಿಕೆ ಅರ್ಜಿ ಬಗ್ಗೆ ಸೆರೆಮನೆಯಿಂದ ವಸ್ತುಸ್ಥಿತಿ ವರದಿಯನ್ನು ಕೇಳುವರು. ಹಾಗೆ ಆದಾಗ, ಗಲ್ಲು ಜಾರಿಯು ತಾನೇತಾನಾಗಿ ತಡೆ ಹಿಡಿಯಲ್ಪಡುತ್ತದೆ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು.

ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಪವನ್ ಗುಪ್ತಾ ಸ್ಥಗಿತಗೊಳಿಸುವಂತೆ  ಕೋರಿ ಸಲ್ಲಿಸಲಾದ ಅರ್ಜಿಯ ಮೇಲಿನ ತಮ್ಮ ತೀರ್ಪನ್ನು ಸೋಮವಾರ ಭೋಜನವಿರಾಮಕ್ಕೆ ಕಾಯ್ದಿರಿಸುವ ಮುನ್ನ ಪವನ್ ಗುಪ್ತಾ ತನ್ನ ಕಾನೂನುಬದ್ಧ ಪರಿಹಾರದ ಅವಕಾಶಗಳನ್ನು ಬಳಸಿಕೊಳ್ಳಲು ಹೈಕೋರ್ಟ್ ನೀಡಿದ್ದ ಏಳು ದಿನಗಳ ಗಡುವನ್ನು ಉಲ್ಲಂಘಿಸಿದ್ದಾನೆ ಎಂಬುದನ್ನು  ವಕೀಲ ಎಪಿ ಸಿಂಗ್ ಅವರಿಗೆ ನೆನಪಿಸಿ, ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ.. ಜಾಗರೂಕರಾಗಿರಿ.. ಎಂದು ಎಚ್ಚರಿಕೆ ನೀಡಿದ್ದರು.

ದೆಹಲಿಯಲ್ಲಿ ೨೦೧೨ ರಲ್ಲಿ ಚಲನಚಿತ್ರವೊಂದರಿಂದ ಮನೆಗೆ ಹಿಂದಿರುಗುವಾಗ ೨೩ ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ನ್ಯಾಯಾಲಯವು ಮಾರ್ಚ್ ೧ನೇ ದಿನಾಂಕವನ್ನು ದಿನ ನಿಗದಿ ಪಡಿಸಿ ಡೆತ್ ವಾರಂಟ್ ಎಂದೇ ಪರಿಗಣಿಸಲಾಗಿರುವ ಬ್ಲ್ಯಾಕ್ ವಾರಂಟ್  ಹೊರಡಿಸಿತ್ತು.

ಇದು ನ್ಯಾಯಾಲಯವು ಹೊರಡಿಸಿದ್ದ ಮೂರನೇ ಬ್ಲ್ಯಾಕ್ ವಾರಂಟ್.  ಪ್ರಕರಣದ ಕೆಲವು ಅಪರಾಧಿಗಳ ಕ್ಷಮಾದಾನ ಕೋರಿಕೆ ಅರ್ಜಿಗಳು ಬಾಕಿ ಇದ್ದ ಕಾರಣ ಹಿಂದೆ ಹೊರಡಿಸಲಾಗಿದ್ದ ಎರಡು ಡೆತ್ ವಾರಂಟ್‌ಗಳ ಜಾರಿ ಸಾಧ್ಯವಾಗಿರಲಿಲ್ಲ.

ನ್ಯಾಯಾಲಯವು ಮೊದಲು ೨೦೨೦ ಜನವರಿ ೭ರಂದು ನಾಲ್ಕು ಅಪರಾಧಿಗಳ ವಿರುದ್ಧ ಡೆತ್ ವಾರಂಟ್ ಹೊರಡಿಸಿತ್ತು ಮತ್ತು ಅವರ ಮರಣದಂಡನೆ ಜಾರಿಗೆ ಜನವರಿ ೨೨ ದಿನಾಂಕವನ್ನು ನಿಗದಿಪಡಿಸಿತ್ತು. ದಿನಾಂಕವನ್ನು ಮುಂದೂಡಿದ ಬಳಿಕ ನ್ಯಾಯಾಲಯವು ಫೆಬ್ರುವರಿ ೧ರಂದು ಗಲ್ಲು ಜಾರಿಗೆ ದಿನ ನಿಗದಿ ಪಡಿಸಿ ಡೆತ್ ವಾರಂಟ್ ಹೊರಡಿಸಿತ್ತು. ಆಗಲೂ ಅದನ್ನು ಮುಂದೂಡಬೇಕಾಗಿ ಬಂದ ಬಳಿಕ ಮೂರನೇ ಬಾರಿಗೆ ಮರಣದಂಡನೆ ದಿನಾಂಕವನ್ನು ಮಾರ್ಚ್ ಕ್ಕೆ ನಿಗದಿ ಪಡಿಸಲಾಗಿತ್ತು.

ಕಡೆ ಗಳಿಗೆಯಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಕ್ಕಾಗಿ  ನ್ಯಾಯಾಧೀಶ್ರು ಸೋಮವಾರ ವಿಚಾರಣೆಯ ಸಂದರ್ಭದಲ್ಲಿ  ಒಂದಕ್ಕಿಂತ ಹೆಚ್ಚು ಬಾರಿ ವಕೀಲ .ಪಿ.ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡರು.  ಕಳೆದ ವಾರ ಸಲ್ಲಿಸಲಾಗಿದ್ದ ಪವನ್ ಗುಪ್ತನ ಕ್ಯುರೇಟಿವ್ ಅರ್ಜಿಯನ್ನು ಸೋಮವಾರ ಕೆಲವೇ ಗಂಟೆಗಳ ಹಿಂದೆ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

ಸುಪ್ರೀಂಕೋರ್ಟ್ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ವಿಚಾರಣಾ ನ್ಯಾಯಾಲಯದಲ್ಲಿ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರ ಮುಂದೆ ವಕೀಲ ಎಪಿ ಸಿಂಗ್ ಅವರು ಕ್ಷಮಾದಾನ ಕೋರಿಕೆ ಅರ್ಜಿಯ ವಿಚಾರವನ್ನು ಪ್ರಸ್ತಾಪಿಸಿದ್ದರು. ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಲು ತಾವು ಕುರೇಟಿವ್ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ಆದೇಶ ನೀಡುವವರೆಗೆ ಕಾಯಬೇಕಾಗಿತ್ತು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಮಾರ್ಚ್ ೩ರ ಮಂಗಳವಾರ ಬೆಳಗ್ಗೆ ಗಂಟೆಗೆ ನಿಗದಿಯಾಗಿರುವ ಗಲ್ಲು ಜಾರಿಯ ಡೆತ್ ವಾರಂಟನ್ನು ಸ್ಥಗಿತಗೊಳಿಸುವಂತೆ ಎಪಿ ಸಿಂಗ್ ಅರು ಮಾಡಿದ ಮನವಿಯನ್ನು ಸರ್ಕಾರಿ ವಕೀಲರು ವಿರೋಧಿಸಿದರು, ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸ್ವೀಕರಿಸಿದ ಕೂಡಲೇ ತಿಹಾರ್ ಜೈಲು ಅಧಿಕಾರಿಗಳಿಗೆ ಗೃಹ ಸಚಿವಾಲಯವು ಡೆತ್ ವಾರಂಟ್ ರದ್ದುಗೊಳಿಸುವಂತೆ ಆದೇಶಿಸುವುದು. ಆದ್ದರಿಂದ ಡೆತ್ ವಾರಂಟನ್ನು ಸ್ಥಗಿತಗೊಳಿಸಬೇಕಾಗಿಲ್ಲ ಎಂದು ಸರ್ಕಾರಿ ವಕೀಲರು ತಿಳಿಸಿದರು.

ಮಧ್ಯೆ, ತಮಗೆ ಲಭ್ಯವಿರುವ ಎಲ್ಲ ಕಾನೂನುಬದ್ಧ ಪರಿಹಾರ ಅವಕಾಶಗಳನ್ನು ಅಪರಾಧಿಗಳು ಬಳಸಿಕೊಂಡಿರುವುದರಿಂದ ಅವರನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಆದೇಶ ನೀಡಬೇಕು ಎಂದು ಕೋರಿ ಕೇಂದ್ರ ಸರ್ಕಾರ ಕೂಡಾ ದೆಹಲಿ ಹೈಕೋರ್ಟ್ ಮೆಟ್ಟಿಲನ್ನು ಏರಿದೆ. ನಿರ್ದಿಷ್ಟ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಎಲ್ಲರನ್ನು ಏಕಕಾಲದಲ್ಲಿ ಗಲ್ಲಿಗೇರಿಸಬೇಕೆಂದು ಕಾನೂನು ಕಡ್ಡಾಯಪಡಿಸಿಲ್ಲ ಎಂದು ಕೇಂದ್ರ ವಾದಿಸಿತ್ತು. ಆದರೆ ಅಭಿಪ್ರಾಯವನ್ನು ಹೈಕೋರ್ಟ್ ಒಪ್ಪಿಕೊಂಡಿರಲಿಲ್ಲ.

೨೦೧೨ರ ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯ ಚಲಿಸುವ ಬಸ್ಸಿನಲ್ಲಿ ಐದು ಪುರುಷರು ಮತ್ತು ಒಬ್ಬ ಬಾಲಾಪರಾಧಿ ಯುವ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕ್ರೂರವಾಗಿ ಹಲ್ಲೆ ಮಾಡಿದ್ದು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಜೀವನ್ಮರಣ ಹೋರಾಟದ ಬಳಿಕ ಸಿಂಗಾಪುರ ಆಸ್ಪತ್ರೆಯಲ್ಲಿ ಅಸು ನೀಗಿದ್ದರು.

ಅಪರಾಧದ ಕ್ರೂರತೆಯು ರಾಷ್ಟ್ರವ್ಯಾಪಿ ಆಕ್ರೋಶವನ್ನು ಹುಟ್ಟು ಹಾಕಿ, ಸಹಸ್ರಾರು ಮಂದಿ ಬೀದಿಗಳಿಗೆ ಇಳಿಯುವಂತೆ ಮಾಡಿತ್ತು. ಪರಿಣಾಮವಾಗಿ ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಲ್ಲಿ ಕೂಲಂಕಷ  ಪರಿಶೀಲನೆ ನಡೆಸಿ ಅವುಗಳನ್ನು ಪರಿಷ್ಕರಿಸಲಾಗಿತ್ತು.

No comments:

Advertisement