ಇರಾನಿನಲ್ಲಿ ೨೫೫ ಮಂದಿ ಭಾರತೀಯರಿಗೆ ಕೊರೋನಾ ಸೋಂಕು
ಯುಎಇಯಲ್ಲಿ ೧೨ ಮಂದಿಗೆ ಸೋಂಕು
ದೃಢ
ನವದೆಹಲಿ:
ಇರಾನಿನಲ್ಲಿ ೨೫೫ ಮಂದಿ ಭಾರತೀಯರಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು 2020 ಮಾರ್ಚ್ 18ರ ಬುಧವಾರ
ತಿಳಿಸಿತು.
ಇರಾನಿನ
ಹೊರತಾಗಿ ಯುನೈಟೆಡ್
ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ೧೨ ಮಂದಿ, ಇಟಲಿಯಲ್ಲಿ
ಐವರು, ಶ್ರೀಲಂಕಾ, ರ್ವಾಂಡಾ, ಕುವೈಟ್
ಮತ್ತು ಹಾಂಕಾಂಗ್ನಲ್ಲಿ ತಲಾ ಒಬ್ಬರಿಗೆ ಕೋವಿಡ್ -೧೯ ಸೋಂಕು ತಗುಲಿದೆ
ಎಂದು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ ಮುರಳೀಧರನ್ ಅವರು
ಲೋಕಸಭೆಗೆ ಲಿಖಿತ ಉತ್ತರ ಒಂದರಲ್ಲಿ ತಿಳಿಸಿದರು.
ಭಾರತವು
ಒಂದು ಲಕ್ಷ ಮುಖಗವಸು (ಮಾಸ್ಕ್), ಒಂದು ಲಕ್ಷ ಸರ್ಜಿಕಲ್ ಮಾಸ್ಕ್, ಐದು ಲಕ್ಷ ಸರ್ಜಿಕಲ್ ಕೈಗವಸು (ಗ್ಲೋವ್), ೭೫ ಇನ್ಫ್ಯೂಷನ್
ಪಂಪ್ಗಳು, ೩೦ ಎಂಟ್ರಿಯಲ್ಲ ಫೀಡಿಂಗ್
ಪಂಪ್ಗಳು, ೨೧ ಡೆಫಿಬ್ರಿಲ್ಲೇಟರ್, ೪೦೦೦ ಎನ್-೯೫ ಮಾಸ್ಕ್ಗಳು
ಸೇರಿದಂತೆ ೧೫ ಟನ್ಗಳಷ್ಟು
ವೈದ್ಯಕೀಯ ನೆರವನ್ನು ಚೀನಾಕ್ಕೆ ನೀಡಿದೆ ಎಂದು ಸಚಿವರು ಹೇಳಿದರು.
ಈ
ಸರಬರಾಜನ್ನು ಭಾರತೀಯ ವಾಯುಪಡೆಯ ಸಿ-೧೭ ವಿಶೇಷ
ವಿಮಾನದ ಮೂಲಕ ಚೀನಾದ ವುಹಾನ್ ನಗರಕ್ಕೆ ಕಳುಹಿಸಲಾಗಿತ್ತು. ಗೆಳೆತನದ ದ್ಯೋತಕವಾಗಿ ಈ ನೆರವನ್ನು ಒದಗಿಸಲಾಗಿತ್ತು
ಎಂದು ಅವರು ನುಡಿದರು.
No comments:
Post a Comment